ಪ್ರಜಾ ನಾಯಕ ಸುದ್ದಿ ಜಗಳೂರು :- ಮೋದಿಯವರೇ ಅಚ್ಚೇದಿನ ಯಾವಗ ಬರುತ್ತದೆ ಆಚ್ಚೇದಿನ್ ಆಯೇಗಾ ಆಯೇಗಾ ಎಂದು ಹತ್ತು ವರ್ಷ ಜನರಿಗೆ ಮೋಡಿ ಮಾಡಿದ್ದು ಸಾಕು ಎಂದು ಶಾಸಕ ದೇವೇಂದ್ರಪ್ಪ ಹೇಳಿಕೆ ನೀಡಿದರು.
ಗುರುವಾರ ಪಟ್ಟಣದ ಶಾಸಕರ ನಿವಾಸದ ಆವರಣದಲ್ಲಿ ಕಾರ್ಯ ಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಚ್ಚೇದಿನ್ ಬರುತ್ತದೆ ಎಂದು ಹೇಳಿ ಜನರಿಗೆ ಹತ್ತು ವರ್ಷ ಮಂಕು ಬೂದಿ ಎರಚಿದ್ದು ಸಾಕು, ಕಾಂಗ್ರೆಸ್ ನಂತೆ ಸಾವಿರಾರು ಕೋಟಿ ಜನರ ಕಲ್ಯಾಣಕ್ಕೆ ಯಾವಗ ನೀಡಿತೀರಿ ಎಂದು ಪ್ರಶ್ನಿಸಿದರಲ್ಲದೆ ಜನರು ಬರಗಾಲದಿಂದ ಬೇಯುತ್ತಿದ್ದಾರೆ ಇಂತಹ ಹೊತ್ತಲ್ಲಿ ಕಾಂಗ್ರೆ ಸ್ ಗ್ಯಾರಂಟಿಗಳಿಗೆ ಜನರಿಗೆ ಶ್ರೀರಕ್ಷೆಯಾಗಿದೆ ಅಲ್ಲದೆ ಚುನಾವಣೆ ಯಲ್ಲಿ ಕಾಂಗ್ರೆಸ್ ಬಿಟ್ಟರೆ ದೇಶ ಮುಳುಗುತ್ತದೆ ಮತದಾರರು ಎಚ್ಚರ ದಿಂದ ಮತ ಚಲಾಯಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳ ಕುರಿ ತು ಬಿಜೆಪಿಗರು ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಬಿಜೆಪಿ ಗರಿಗೆ ಅಭಿವೃದ್ಧಿ ಹೆಸರಿನಲ್ಲಿ ಜನಸಾಮಾನ್ಯರ ಮಧ್ಯೆ ಹೋಗಿ ಮತ ಕೇಳಲು ಯಾವ ನೈತಿಕತೆಯಿಲ್ಲ ಆದ್ದರಿಂದ ಮತ ಕೇಳಲು ಹೋದ ಕಡೆಯಲಿ ಮೋಸರಲಿ ಕಲ್ಲು ಹುಡುಕಿದಂತೆ ಗ್ಯಾರಂಟಿ ಯೋಜನೆ ಗಳು ಇನ್ನೇನು ಲೋಕಸಭಾ ಚುನಾವಣೆ ಮುಗಿಯುವವ ರೆಗೆ ಮಾತ್ರ ಯೋಜನೆಗಳು ಇರುತ್ತವೆ ಎಂದು ಹೇಳಿ ಜನರ ದಿಕ್ಕು ತಪ್ಪಿ ಸುತ್ತಾರೆ ಎಂದರಲ್ಲದೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದ್ದು, ಲೋಕಸಭಾ ಚುನಾವಣೆಗೆ ನೀಡಿದ ಗ್ಯಾರಂಟಿ ಗಳನ್ನು ಗೆದ್ದರೆ ಹಿಡೇರಿಸಲಿದೆ ಎಂದರು.
ಮಾಜಿ ಶಾಸಕರಿಬ್ಬರಿಗೆ ಹಾಲಿ ಶಾಸಕರ ಟೀಕಾ ಪ್ರಹಾರ :-
ಮಾಜಿ ಶಾಸಕರಿಬ್ಬರಿಗೆ ರಸ್ತೆಗಳ ರಾಜ, ರಾಜಹುಲಿ ಎಂದು ಬಿರು ದು ಬಂದಿರುವುದು ಇದೇ ಕಾಂಗ್ರೆಸ್ ಪಕ್ಷ ನೀಡಿರುವ ಬಿಕ್ಷೆಯಿಂದ, ಕಾಂಗ್ರೆಸ್ ನೀಡಿರುವ ಅಧಿಕಾರದಿಂದ ಇದನ್ನು ಇಬ್ಬರು ಶಾಸಕರು ಮರೆತು ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆ ಎಂಬ ಹೇಳಿಕೆಯನ್ನು ನೀಡುವುದು ಸರಿಯಲ್ಲ ಎಂದರಲ್ಲದೆ ಅಭಿವೃದ್ಧಿ ಚಿಂತನೆಯಲ್ಲಿ ಏನು ಬೇಕಾದರೂ ಹೇಳಿಕೆ ನೀಡಲಿ ಚಾಲೆಂಜ್ ಆಗಿ ಸ್ವೀಕರಿಸುವೆ ಎಂದು ಹೇಳಿದರು.
ಇಬ್ಬರು ಶಾಸಕರು ಬಿಜೆಪಿಗೆ ಒಂದು ಲಕ್ಷ ಅಲ್ಲ ಎರಡು ಲಕ್ಷ ಓಟು ಹಾಕಿಸಿಕೊಳ್ಳಿ ಬೇಡ ಎಂದವರು ಯಾರು.? ನಾನು ಕಾರ್ಯಕರ್ತ ರನ್ನು ಕರೆದುಕೊಂಡು ಜೋಳಿಗೆ ಹಾಕಿ ಮತ ಬಿಕ್ಷೆ ಮಾಡುತ್ತೇವೆ ನಮ್ಮಗೆ ಬಿಕ್ಷೆ ಕೇಳುವುದಕ್ಕೆ ಅಧಿಕಾರವಿದೆ ಏಕೆಂದರೆ ಐದು ಗ್ಯಾರಂಟಿ ಕೊಟ್ಟಿದ್ದೇವೆ ಆದರೆ ಬಿಜೆಪಿಯರು ಮತ ಕೇಳಲು ಜನರಿ ಗೆ ಏನು ಕೊಟ್ಟಿದ್ದೀರಿ ಎಂದು ಇಬ್ಬರು ಮಾಜಿ ಶಾಸಕರಿಗೆ ಮಾತಿನ ಲ್ಲಿಯೇ ಪ್ರಶ್ನೆಗಳು ಹಾಕಿ ಟೀಕಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಮಾತನಾಡಿ, ಇಂದು ದೇಶ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಎಂಬುವುದು ನೋಡುತ್ತಿದ್ದೀರಿ ಅದ್ದ ರಿಂದ ಮುಂದೆ ಲೋಕಸಭೆ ಚುನಾವಣೆಗೆ ಕ್ಷೇತದ್ಯಾಂತ ಉರಿಯಾ ಳಾಗಿ ಪಕ್ಷ ಸಂಘಟಿಸಿ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಹೆಚ್ಚು ಮತಗಳನ್ನು ನೀಡುವಂತೆ ಶ್ರಮಿಸಬೇಕಿದ್ದು ಇಂದಿನಿಂದಲ್ಲೆ ಮನೆಯಿಂದಲ್ಲೆ ಮತ ಪ್ರಚಾರ ಶುರುವಾಗಬೇಕಿದೆ ಎಂದರು. ಮಾಜಿ ಶಾಸಕರಿಗೆ ಹೇಳುವುದಕ್ಕೆ ಏನು ಉಳಿದಿಲ್ಲ, ಅದ್ದರಿಂದ ಹೊದಲ್ಲೆಲ್ಲಾ ಒಂದು ಲಕ್ಷ ಮತಗಳನ್ನು ಹಾಕಿಸುತ್ತವೆ ಎಂದು ಹೇಳುತ್ತಿದ್ದಾರೆ.ದೇಶದಲ್ಲಿ ಮೋದಿ ವಿರುದ್ದವಾಗಿ ನಿಲ್ಲುವ ನಾಯಕ ರಾಹುಲ್ ಗಾಂಧಿಯವರು ಇವರಿಗೆ ಅಧಿಕಾರಕ್ಕೆ ಸಿಕ್ಕರೆ ಮುಂದೆ ನಮ್ಮ ದೇಶದ ಚಿತ್ರಣವೆ ಬದಲಾಗುತ್ತವೆ ಎಂದರಲ್ಲದೆ ಅಂಬೇಡ್ಕರ್ ಚಿಂತನೆಯಲ್ಲಿ ಹಣ ಭೂಮಿ ನಿರ್ಗತಿಕರಿಗೆ ಹಂಚಿಕೆ ಯಾಬೇಕು ಎಂಬ ಸಿದ್ದಾಂತವನ್ನು ಸಿದ್ದರಾಮಯ್ಯ ಪಾಲಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ 300 ಹೆಚ್ಚು ಜನರು ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮದ್, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಬಿ.ಮಹೇಶ್ವರ ಪ್ಪ.ಸಿ.ತಿಪ್ಪೇಸ್ವಾಮಿ,ತಿಪ್ಪೇಸ್ವಾಮಿ ಗೌಡ್ರು, ಪ್ರಕಾಶ್ ರೆಡ್ಡಿ.ಶಿವನಗೌಡ. ಮಲ್ಲಿಕಾರ್ಜುನ್ ಬಾಬು.ಗೌರಿ ಪುರ ಶಿವಣ್ಣ.ಪಟ್ಟಣ ಪಂಚಾಯಿತಿ ಸದಸ್ಯರಾದ ರವಿಕುಮಾರ್.ಮಹಮ್ಮದ್ ಆಲಿ. ನಾಮನಿರ್ದೇಶನ ಸದಸ್ಯ ಕುರಿ ಜಯಣ್ಣ. ಸಣ್ಣ ತಾನಾಜಿ ಗೂಸಾಯಿ.ಗುತ್ತಿದುರ್ಗ ರುದ್ರೇಶ್,ಹಟ್ಟಿ ತಿಪ್ಪೇಸ್ವಾಮಿ.ಶಂಭುಲಿಂಗಪ್ಪ.ಮಹಮ್ಮದ್ ಗೌಸ್. ಕೆಳಗೋಟೆ ಅಹ್ಮದ್ ಅಲಿ. ಮಾಳಮ್ಮನಹಳ್ಳಿ ವೆಂಕಟೇಶ್. ಅರ್ಜು ನ್. ರಂಗನಾಥ ರೆಡ್ಡಿ. ಎಂ ಎಸ್ ಪಾಟೀಲ್ ಶಾಸಕರ ಅಂಗರಕ್ಷಕ ರಾದ ಸೋಮಣ್ಣ. ಆಜಾಮ್ ಮುಲ್ಲಾ ಸಿಆರ್ ತಿಮ್ಮಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.