ಪ್ರಜಾ ನಾಯಕ ಸುದ್ದಿ ದಾವಣಗೆರೆ : ವರದಕ್ಷಣೆ ಕಿರುಕುಳ ನೀಡಿ, ಪತ್ನಿಯನ್ನೇ ಹತ್ಯೆ ಮಾಡಿ ಕುಟುಂಬ ಸಮೇತ ಪತಿರಾಯ ಪರಾರಿಯಾದ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ನಡೆದಿದೆ. ಅನಿತಾ (28) ಹತ್ಯೆಯಾದ ಗೃಹಿಣಿ.ಪತಿಯ ಅಕ್ರಮ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದಿಂದ ಪತ್ನಿ ದಾರುಣ ಅಂತ್ಯಕಂಡಿ ದ್ದಾಳೆ. ಐದು ವರ್ಷಗಳ ಹಿಂದೆಯೇ ಅನಿತಾ ಅಶೋಕ್ ಎಂಬಾತ ನೊಂದಿಗೆ ವಿವಾಹವಾಗಿದ್ದಾಳೆ. ಇವರಿಗೆ ಇಬ್ಬರು ಪುಟ್ಟ ಮಕ್ಕಳು ಪ್ರೀತಿಯಿಂದ ವಂಚಿತರಾಗಿದ್ದಾರೆ. ಅಶೋಕನಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ಕಿರುಕುಳ ನೀಡಿ ನಮ್ಮ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಅನಿತಾಳ ಕುಟುಂಬ ಸ್ಥರು ಆರೋಪಿಸುತ್ತಿದ್ದಾರೆ.
ಈ ಘಟನೆ ನಂತರ ಅಳಿಯ ಮತ್ತು ಅವರ ಕುಟುಂಬಸ್ಥರು ವಿರುದ್ಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಕುಟುಂಬಸ್ಥರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ
0 Today: 3