ಪ್ರಜಾ ನಾಯಕ ಸುದ್ದಿ ದಾವಣಗೆರೆ;- ಜಿಲ್ಲಾ ಪೊಲೀಸರು ಬೈಕ್ ಕಳ್ಳರ ಭರ್ಜರಿ ಬೇಟೆ ಯಾಡಿದ್ದು, ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 3 ಲಕ್ಷ ಮೌಲ್ಯದ 7 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ.
ಸುನಿಲ್ ಕುಮಾರ್ ಎಂಬುವವರು ತಮ್ಮ ಯಮಹಾ ಆರ್ಎಕ್ಸ್ ಬೈಕನ್ನು ಜಯನಗರ ಗೋಲ್ಡನ್ ಸ್ಟಾರ್ ಜಿಮ್ ಮುಂಭಾಗ ನಿಲ್ಲಿಸಿ ದ್ದರು. ಆಗ ಯಾರೋ ಕಳ್ಳರು ಮೇ 15 ರಂದು ಕಳ್ಳತನ ಮಾಡಿ ಕೊಂಡು ಹೋಗಿದ್ದಾರೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಆರೋಪಿ ಹಾಗು ಮಾಲು ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ ದಾವಣಗೆರೆ, ಡಿಸಿಐಬಿ ಘಟಕದ ಪೊಲೀಸ್ ಉಪಾಧೀಕ್ಷಕ ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನೀರೀಕ್ಷಕರಾದ ಶಶಿಧರ ಯು.ಜೆ , ಕೆಟಿಜೆ ನಗರ ಪಿಎಸ್ಐ ಎನ್.ಆರ್ ಕಾಟೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಮೇ 24ರಂದು ಹಳೆ ಪಿ.ಬಿ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿ ಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ರಾಕೇಶ ಕೆ.ಎಲ್.,19 ವರ್ಷ ವಾಸ ಸರಸ್ವತಿ ನಗರ ದಾವಣಗೆರೆ ಹಾಗು ಇಬ್ಬರು ಕಾನೂನು ಸಂಘರ್ಷಕ್ಕೊಳ ಗಾದ ಬಾಲಕರನ್ನು ದಸ್ತಗಿರಿ ಮಾಡಿದ್ದು, ಜಿಲ್ಲೆ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿತರಿಂದ ಕೆ.ಟಿಜೆ ನಗರ ಪೊಲೀಸ್ ಠಾಣೆಯ 1 ಬೈಕ್ ಕಳ್ಳತನ ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯ 01 ಬೈಕ್, ಮಲೆಬೆನ್ನೂರು ಪೊಲೀಸ್ ಠಾಣೆಯ 01 ಬೈಕ್ , ಹದಡಿ ಪೊಲೀಸ್ ಠಾಣೆಯ 01 ಬೈಕ್ , ಚನ್ನಗಿರಿ ಪೊಲೀಸ್ ಠಾಣೆಯ 03 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಒಟ್ಟು 3 ಲಕ್ಷ ರೂ ಬೆಲೆಯ 7 ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮೇಲ್ಕಂಡ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಪತ್ತೆ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ ಕೆ ಪ್ರಶಂಸೆ ವ್ಯಕ್ತಪಡಿಸಿ ದ್ದಾರೆ.