ಪ್ರಜಾ ನಾಯಕ ಸುದ್ದಿ ದಾವಣಗೆರೆ :- ಮನೆಯ ಅಡಿಪಾಯ ತೆಗೆ ಯುವಾಗ ಚಿನ್ನದ ಗಟ್ಟಿಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರ ನಾಣ್ಯ ನೀಡಿ 5.10 ಲಕ್ಷ ವಂಚಿಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಮನೆಯ ಅಡಿಪಾಯ ತೆಗೆಯುವಾಗ ಚಿನ್ನದ ಗಟ್ಟಿಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ಚನ್ನಗಿರಿ ತಾಲ್ಲೂಕಿನ ಸಿದ್ದನಮಠ ಗ್ರಾಮದ ಸಮೀಪದ ಮಾವಿನ ತೋಟಕ್ಕೆ ಬರಲು ಆರೋಪಿ ಫೋನ್ ಕರೆ ಮಾಡಿ ತಿಳಿಸಿದ್ದನು. ಉಡುಪಿ ಜಿಲ್ಲೆಯ ಪೇರ್ಡೂರು ಗ್ರಾಮದ ಸಂತೋಷ ಶೆಟ್ಟಿ ವಂಚ ನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಈ ಕುರಿತು ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೆ ಮಾಡಿಕೊಂಡು ಬಂದಾಗ ಎರಡು ಬಂಗಾರದ ನಾಣ್ಯಗಳನ್ನು ಕೊಟ್ಟು ನಂಬಿಸಿದ್ದ.ಮತ್ತೆ ಸಿದ್ದನಮಠ ಕರೆಯಿಸಿಕೊಂಡು 200 ಗ್ರಾಂ ನಕಲಿ ಬಂಗಾರದ ನಾಣ್ಯ ನೀಡಿ 5.10 ಲಕ್ಷ ಪಡೆದಿದ್ದ. ಅವ ರು ಮನೆಗೆ ಹೋಗಿ ನೋಡಿದಾಗ ನಕಲಿ ಚಿನ್ನದ ನಾಣ್ಯ ನೀಡಿರು ವುದು ಗೊತ್ತಾಗಿದೆ.ಈ ಸಂಬಂಧ ಸಂತೋಷ ಶೆಟ್ಟಿ ಸಂತೇಬೆ ನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಮೇಶ್ ಹಾಗೂ ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ
ಸಾರ್ವಜನಿಕರೇ ಇಂತಹ ನಕಲಿ ಬಂಗಾರ ಮಾರಾಟ ಮಾಡುವ ವಂಚಕರಿಂದ ದೂರವಿದ್ದು ಹಾಗೇನಾದರೂ ಮೋಸ ಮಾಡುತ್ತಿರು ವುದು ನಿಮಗೆ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ.!