ಪ್ರಜಾ ನಾಯಕ ಸುದ್ದಿ ದಾವಣಗೆರೆ:- ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಮೊಬೈಲ್ ಫೋನ್ಗಳನ್ನು CEIR PORTAL ನಲ್ಲಿ ಮೊಬೈಲ್ನ ವಾರಸುದಾರರ ವಿವರಗಳನ್ನು ನಮೂದು ಮಾಡಿ, ಮೊಬೈಲ್ನ ಐಎಂಇಐ ನಂಬರ್ನ್ನು ಬ್ಲಾಕ್ ಮಾಡುವ ಮುಖಾಂತರ 06 ಮೊಬೈಲ್ ಗಳನ್ನು ಜಗಳೂರು ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಿದ್ದಾರೆ.
ಈ ಮೂಲಕ ಮೊಬೈಲ್ ವಾರಸುದಾರರಾದ ಪ್ರಕಾಶ ಜಗಳೂರು, ಮಂಜುನಾಥ, ಕೆ.ಎನ್, ಹುಚ್ಚಂಗಿಪುರ ಗ್ರಾಮ, ಸುರೇಶ್.ಬಿ.ಟಿ, ಜಗಳೂರು ಟೌನ್,ಮಹೇಶ್, ಎಂ. ಭರಮಸಮುದ್ರ ಗ್ರಾಮ, ರಾಘವೇಂದ್ರ ಶೆಟ್ಟಿ ಜಗಳೂರು ಟೌನ್ ಹಾಗೂ ಚಿರಂಜೀವಿ ಗೌರಿಪುರ ಹೊಸೂರು ಗ್ರಾಮ ಇವರಿಗೆ ಮೊಲೈಲ್ ಹಿಂದಿರುಗಿಸ ಲಾಗಿರುತ್ತದೆ. ಪತ್ತೆಯಾದ ಮೊಬೈಲ್ಗಳ ಅಂದಾಜು ಮೊತ್ತ 85000/- ರೂಗಳು ಆಗಿರುತ್ತದೆ.
ಮೊಬೈಲ್ಗಳನ್ನು ಪೊಲೀಸ್ ಇನ್ಸ್ಪೆಕ್ಟರ್, ಎಂ.ಶ್ರೀನಿವಾಸ್ ರಾವ್ ಮಾರ್ಗದರ್ಶನದಲ್ಲಿ CEIR PORTAL ಬಗ್ಗೆ ತರಬೇತಿ ಪಡೆದ ಜಗಳೂರು ಪೊಲೀಸ್ ಠಾಣೆಯ ಸಿಬ್ಬಂದಿಯಾದ ಮಾರೆಪ್ಪ, ಪತ್ತೆ ಮಾಡಿದ್ದಾರೆ. ಈ ಕಾರ್ಯಾಚರಣೆ ಬಗ್ಗೆ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಪ್ರಶಂಸನೆ ವ್ಯಕ್ತ ಪಡಿಸಿದ್ದಾರೆ.
ಸಾರ್ವಜನಿಕರು CEIR ಪೋರ್ಟಲ್ ಸಹಾಯದಿಂದ ಅಥವಾ 112 ಗೆ ಕರೆ ಮಾಡಿ ಅಗ್ನಿಶಾಮಕ ಠಾಣೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳು.ವೈದ್ಯಕೀಯ ಸೇವೆಗಳು. ನಿಮ್ಮ ಬ್ಯಾಂಕಿನ ಖಾತೆಗೆ ಕನ್ನ ಹಾಕಿದ್ದಲ್ಲಿ .ಮತ್ತು ಮೊಬೈಲ್ ಕಳೆದು ಹೋದಲ್ಲಿ ಸಾರ್ವಜನಿಕರು ನೇರವಾಗಿ ಈ ನಂಬರಿಗೆ ಕರೆ ಮಾಡಿ ಮಾಹಿತಿ ನೀಡಿ
ಶ್ರೀನಿವಾಸ್ ರಾವ್. ಸಬ್ ಇನ್ಸ್ಪೆಕ್ಟರ್ ಜಗಳೂರು ಪೊಲೀಸ್ ಠಾಣೆ