ಪ್ರಜಾ ನಾಯಕ ಸುದ್ದಿ ದಾವಣಗೆರೆ:- ಜಿಲ್ಲೆಯ ನ್ಯಾಮತಿ ಪೊಲೀ ಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ 16 ಮೊಬೈಲ್ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು, ಮೂಲ ವಾರ ಸುದಾರರಿಗೆ ಹಸ್ತಾಂತರಿಸಲಾಯಿತು.
ಮೊಬೈಲ್ ಫೋನ್ ಗಳನ್ನು CEIR PORTAL ನಲ್ಲಿ ಮೊಬೈಲ್ ನ ವಾರಸುದಾರರ ವಿವರಗಳನ್ನು ನಮೂದು ಮಾಡಿ, ಮೊಬೈಲ್ ನ ಐಎಂಇಐ ನಂಬರ್ ನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದು ಹೋದ / ಕಳುವಾದ ಮೊಬೈಲ್ ಗಳ ಪೈಕಿ ಜೂನ್ ತಿಂಗಳಲ್ಲಿ ಇಲ್ಲಿ ಯವರೆಗೆ 16 ಮೊಬೈಲ್ ಗಳನ್ನು ಪತ್ತೆ ಮಾಡಿ, ಮೊಬೈಲ್ ವಾರಸು ದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಐಪಿಎಸ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
0 Today: 3