ಪ್ರಜಾ ನಾಯಕ ಸುದ್ದಿ ದಾವಣಗೆರೆ;-ಜಿಲ್ಲೆಯ ಹೊನ್ನಾಳಿ ತಾಲ್ಲೂಕಿ ನ ಕುಂದೂರು-ಕೂಲಂಬಿ ಗ್ರಾಮದ ಕಾಲೇಜಿನ ಕೊಠಡಿ ಬೀಗಮು ರಿದು 84 ಸಾವಿರ ಮೌಲ್ಯದ ಲ್ಯಾಪ್ ಟಾಪ್ , ಯುಪಿಎಸ್ ಬ್ಯಾಟರಿ, ಪ್ರೋಜಕ್ಟರ್ ಕಳ್ಳತನ ಮಾಡಿದ ಇಬ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 17 ಮಧ್ಯಾಹ್ನ 03-00 ಗಂಟೆಯಿಂದ ಜೂನ್ 19 ಬೆಳಗ್ಗೆ 09-00 ಗಂಟೆಯ ಮಧ್ಯದ ಅವಧಿಯಲ್ಲಿ ಹೊನ್ನಾಳಿ ತಾಲೂಕಿನ ಕುಂದೂರು-ಕೂಲಂಬಿ ಗ್ರಾಮದ ಸ.ಪ.ಪೂ.ಕಾಲೇಜ್ ನಲ್ಲಿ ಸುಮಾರು 84353/-ರೂ ಬೆಲೆ ಬಾಳುವ ಎಲೆಕ್ಟ್ರಾನಿ ಕ್ ವಸ್ತುಗಳ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳು ಕುಂದೂರು-ಕೂಲಂಬಿ ಗ್ರಾಮದ ಸಪಪೂ ಕಾಲೇಜ್ ನಲ್ಲಿನ ಮುಂದಿನ ಗೇಟಿನ ಬೀಗ ಮುರಿದು ಒಳಗಡೆ ಪ್ರವೇಶಿಸಿ ಪ್ರಾಂಶುಪಾಲರ ಕೊಠಡಿಯ ಪಕ್ಕದ ಗಣಕ ಯತ್ರದ ಕೊಠಡಿಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳಾದ 1] UPS ಬ್ಯಾಟರಿ ಅಂದಾಜು ಬೆಲೆ 3483/- ರೂಗಳು.2] LENOVO LAP TOP, ಅಂದಾಜು ಬೆಲೆ 51870/- ರೂಗಳು 3] Digital Projector ಅಂದಾಜು ಬೆಲೆ 29000/- ರೂ ಗಳು, ಒಟ್ಟು 84353/-
ರೂ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ ಕುಂದೂರು ಗ್ರಾಮ ದ 1] ಆಂಜನೇಯ (22)ಕುಂದೂರು ಗ್ರಾಮ, 2] ಆಕಾಶ ಎನ್ ಕೆ(22) ಬಂಧಿಸಿ ವಿಚಾರಣೆ ಮಾಡಿದ್ದಾಗ ಕಳ್ಳತನ ಮಾಡಿರುವುದ ನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ.
ಆರೋಪಿತರನ್ನು ಮತ್ತು ಕಳುವಾದ ವಸ್ತು ಪತ್ತೆ ಮಾಢಲು ಹೆಚ್ಚು ವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಮಾರ್ಗದರ್ಶನ ದಲ್ಲಿ ಡಿವೈಎಸ್ಪಿ ಡಾ.ಕೆ.ಎಂ. ಸಂತೋಷ್ ನೇತೃತ್ವದಲ್ಲಿ, ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್.ಎಂ.ಸಿದ್ದೇಗೌಡ, ಪಿಎಸ್ ಐ ಸಿದ್ಧಪ್ಪ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ. ಈ ಕಾರ್ಯಾಚರಣೆ ನಡೆಸಿದ ತಂಡ ಕ್ಕೆ ಪೊಲೀಸ್ ಅಧೀಕ್ಷಕ ಅರುಣ್ ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.