ಪ್ರಜಾ ನಾಯಕ ಸುದ್ದಿ ದಾವಣಗೆರೆ :- ನಗರದ ಹೊರ ವಲಯದ ಶಾಮನೂರು ಮನೆಯೊಂದರಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿದ್ದು, 25.75 ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಸ್ವತ್ತು ವಶಕ್ಕೆ ಪಡೆಯಲಾಗಿದೆ. 6 ಆರೋಪಿಗಳ ಬಂಧನ ಮಾಡಲಾಗಿದೆ.
ಶಾಮನೂರಿನ ಡಾಲರ್ಸ್ ಕಾಲೋನಿಯ ಡಾ. ತಿಪ್ಪೇಸ್ವಾಮಿ ಅವರು ಜೂನ್ 05 ರಿಂದ ಜು.03 ವರೆಗೆ ಮನೆಯ ಬಾಗಿಲು ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಿಂದ ವಾಪಸ್ಸು ಒಂದು ನೋಡಿದ್ದಾಗ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಹೊಡೆದು ಒಟ್ಟು 31,34,58 ರೂ. ಬೆಲೆ ಬಾಳುವ ಬೆಳ್ಳಿ ಬಂಗಾರ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ನೀಡಿಧದರು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ ಬಸರಗಿ ರವರು ಮತ್ತು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ , ಪಿಎಸ್ ಐ ಮಂಜುನಾಥ ಕಲ್ಲದೇವರು ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಡ ತಂಡವನ್ನು ರಚಿಸಿದ್ದು. ಸದರಿ ತಂಡವು ಹಾವೇರಿ ಜಿಲ್ಲೆ ರಾಣೇಬೆನ್ನೂರು ಗೋವಿಂದ ಬಡಾವಣೆಯ 1)ಶಿವರಾಜ ಲಮಾಣಿ @ ರಾಜಿ, 26 ವರ್ಷ, 2) ಮಾರುತಿ, 25ವರ್ಷ, 3)ಸುನೀಲ್ ಬಿ ಲಮಾಣಿ, 22 ವರ್ಷ, 4) ಮನೋಜ್ ಡಿ ಲಮಾಣಿ, 25ವರ್ಷ, 5)ಅಭಿಷೇಕ್ @ ಅಭಿ, 22 ವರ್ಷ, 6)ಮಾಲತೇಶ್, 25 ವರ್ಷ ಇವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಕಳ್ಳತನ ಮಾಡಿದ್ದ 23,35,200 ರೂ ಬೆಲೆ ಬಾಳುವ 417ಗ್ರಾಂ ಬಂಗಾರದ ಆಭರಣ, 60,000ರೂ. ಬೆಲೆ ಬಾಳುವ 328ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಿಸಿದ್ದ 1.80 ಲಕ್ಷ ಬೆಲೆಯ ಎರಡು ಬೈಕ್ ಸೇರಿ ಒಟ್ಟು 25.75 ಸ್ವತ್ತು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.