ಪ್ರಜಾ ನಾಯಕ ಸುದ್ದಿ ಜಗಳೂರು :- ಹೊಂಚು ಹಾಕಿ ತಡರಾತ್ರಿ ರಸ್ತೆಯಲ್ಲಿ ವಾಹನ ನಿಲ್ಲಿಸಿ ದರೋಡೆ ಹಾಗೂ ಪುರಾತನ ದೇವ ಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜು.23 ರಂದು ರಾತ್ರಿ ಜಗಳೂರು ಪೊಲೀಸ್ಠಾಣಾ ವ್ಯಾಪ್ತಿಯ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಿಎಸ್ಐ ಸಾಗರ್.ಎಸ್.ಡಿ & ಸಿಬ್ಬಂದಿ ಯವರು ಲಿಂಗಣ್ಣಹಳ್ಳಿ ರಸ್ತೆಯಲ್ಲಿ ಮಧ್ಯರಾತ್ರಿ ಬೆಳಗಿನಜಾವ 3.30ಕ್ಕೆ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಒಂದು ಕಾರು ನಿಂತಿತ್ತು. ಆ ಕಾರಿನ ಮುಂದೆ ಇಬ್ಬರು ವ್ಯಕ್ತಿಗಳು ನಿಂತಿದ್ದು ಇದ ರಿಂದ ಪಿಎಸ್ಐ & ಸಿಬ್ಬಂದಿ ಅನುಮಾನಗೊಂಡು, ಆ ಕಾರಿನ ಬಳಿಗೆ ಹೋಗುತ್ತಿದ್ದಂತೆ ಕಾರಿನ ಮುಂದೆ ನಿಂತಿದ್ದಿಬ್ಬರು ಪೊಲೀಸ್ ಜೀಪ್ ನೋಡಿ ಓಡಿಹೋಗಲು ಪ್ರಯತ್ನಿಸಿದರು. ಅವರನ್ನು ಸಿಬ್ಬಂದಿ ಬೆನ್ನುಹತ್ತಿ ಹಿಡಿದಿದ್ದಾರೆ. ಇನ್ನೂ ಪಿಎಸ್ಐ, ಜೀಪ್ ಚಾಲಕ ಕಾರಿನ ಬಳಿ ನಿಂತು ಕಾರಿನ ಡೋರ್ ತೆಗೆಯದಂತೆ ನೋಡಿ ಕೊಂಡಿದ್ದು, ನಂತರ ಬೆನ್ನಟ್ಟಿ ಹಿಡಿದುಕೊಂಡು ಬಂದ ವ್ಯಕ್ತಿಗಳನ್ನು ಮತ್ತು ಕಾರಿನಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಲಾಯಿತು.
ಬಂಧಿತ ಆರೋಪಿಗಳಾದ 1) ಕಲ್ಲೇಶಿ.ಪಿ, (48), ವಾಸಜಗಳೂರು ಟೌನ್, 2) ದಿವಾನ್ಸಾಬ್ಜಾವೀದ್, ವಾಸ ಆಜಾದ್ನಗರ, ದಾವಣಗೆರೆ ನಗರ,3) ಮಲ್ಲಿಕಾರ್ಜುನ@ಮಲ್ಲೇಶಿ, 30ವರ್ಷ, ಹುಬ್ಬಳ್ಳಿ, 4) ಹನುಮಂತ ಸೋಪಾನಿಪವಾರ್ 33ವರ್ಷ ವಾಸ: ಹುಬ್ಬಳ್ಳಿ, 5) ಅಮೀರ್ಖಾನ್ಪಠಾಣ್, 30ವರ್ಷ, ಹುಬ್ಬಳ್ಳಿ, 6) ಮುರ್ತಾಜಾಸಾಬ್@ಗೋಲಂದಾಜ್, 38ವರ್ಷ, ಇಳಕಲ್ ನಿವಾಸಿ ಆಗಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಲ್ಲಿ ಸ್ಥಳೀಯ ಒಬ್ಬ ನಿದ್ದು, ಉಳಿದ 5 ಜನರು ಪರ ಸ್ಥಳದವರಾಗಿದ್ದಾರೆ.ಇವರು ದರೋ ಡೆ ಮಾಡಲು ಹೊಂಚು ಹಾಕಿರುವಂತೆ ಕಂಡುಬಂದಿದ್ದರಿಂದ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣ ಗೆರೆ ಗ್ರಾಮಾಂತರ ಉಪ-ವಿಭಾಗದ ಎ.ಎಸ್.ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು, ಆರೋಪಿತರು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿ ಗಾಗಿ ಶೋಧನಡೆಸಿ ದರೋಡೆ ಮಾಡಲು ಬಂದಿದ್ದರು. ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ಬೇಡಿ ಆಂಜ ನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವ ಸ್ಥಾನದಲ್ಲಿ ಬಸವಣ್ಣನಮೂರ್ತಿಯನ್ನು ಕಿತ್ತು ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧನೆ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಜಗ ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವ ರೆದಿರುತ್ತದೆ.
ಆರೋಪಿತರಿಂದ 1) ಬಿಳಿ ಬಣ್ಣದ ಸ್ವಿಪ್ಟ್ ಡಿಸೈರ್ಕಾರ್.ಪಟ್ಟಿಗೆ ಹಿಡಿಕೆ ಇರುವ ಒಂದು ಕಬ್ಬಿಣದ ಸುತ್ತಿಗೆ 3) ಒಂದುಜೊತೆ ಹ್ಯಾಂಡ್ ಗ್ಲೌಸ್, 4) 1 ಕಟ್ಟಿಂಗ್ ಪ್ಲೇಯರ್, 5)2 ಕಬ್ಬಿಣದ ಪ್ಲಾಟ್ಚಿ ಸೆಲ್ಗಳು, 2 6 ) ಒಂದು ಸುರ್ಸುರ್ಬತ್ತಿ, 7)ಪ್ಲಾಸ್ಟಿಕ್ ಹಗ್ಗ, 8)ಒಂದು ಗುಟಕಾ ಕಂಪನಿಯ ಖಾಲಿಬ್ಯಾಗ್, 9) 2 ಪಾಕೇಟ್ ಕಾರದ ಪುಡಿ, 10) ೦3 ಮೊಬೈಲ್ಗಳು, 11) 2 ಸಾವಿರ ರೂ ನಗದುಹಣ, 12) ಟಾರ್ಚ್, 13) ರೇಡಿಯಂ ಕಟ್ಟರ್ ಚಾಕು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿತ ಭರತೇಶ್ ಎಂಬು ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿದು ಬಂದಿ ದ್ದು, ಪತ್ತೆ ಕಾರ್ಯ ಮುಂದುವರೆದಿರುತ್ತದೆ. 6 ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿ.ಐ ಶ್ರೀನಿವಾಸ್ ರಾವ್. ಎಂ, ಪಿಎಸ್ಐ ಸಾಗರ್. ಎಸ್.ಡಿ ಸಿಬ್ಬಂದಿ ವರ್ಗದವರಾದ. ನಾಗಭೂಷಣ.ಆರ್, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ಜೀಪ್ ಚಾಲಕರಾದ ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ ರವರು ಗಳನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಪ್ರಶಂಸೆ ವ್ಯಕ್ತಪಡಿಸಿ ದ್ದಾರೆ.
ಈ ಪ್ರಕರಣದಿಂದ ತಿಳಿದುಬರುವ ಅಂಶವೇನೆಂದರೆ -: ನಮ್ಮ ಸ್ನೇಹಿತರ ಮುಖಾಂತರ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಈಗಾಗಲೇ ಪೊಲೀಸರು ಡಕಾಯಿತಗಾಗಿ ಹೊಂಚು ಹಾಕಿದ ಗ್ಯಾಂಗನ್ನು ಜಗಳೂರು ಪೊಲೀಸರು ಪತ್ತೆ ಮಾಡಿದ್ದು ಅವರು ವಿಚಾರಣೆಯಲ್ಲಿರುವಾಗಲೇ ಕೇವಲ ಶನಿವಾರ ಮತ್ತು ಸೋಮ ವಾರ ಮಾತ್ರ ಬಿದರಿಕೆರೆ ಗ್ರಾಮದಿಂದ ಗ್ರಾಮಸ್ಥರು ಪ್ರತಿ ಶನಿವಾರ ದಂತೆ ನಿನ್ನೆ ಶನಿವಾರವೂ ಸಹ ಬಸವಣ್ಣ ಮತ್ತು ಬೇಡಿ ಆಂಜ ನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಈ ಘಟನೆಯನ್ನು ಕಂಡಿದ್ದು ಬಸವಣ್ಣನ ದೇವಸ್ಥಾನದಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಶೋಧನೆ ಮಾಡಿದ್ದ ನಿಧಿಗಾಗಿ ಬಸವಣ್ಣನ ಮೂರ್ತಿಯನ್ನಾ ಅಗೆದು ಇದನ್ನು ಆ ದೇವಸ್ಥಾನದ ಹತ್ತಿರ ಇರುವ ಕಿಡಿಗೇಡಿಗಳು ಯಾರು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎನ್ನುವ ಊಹಾ ಪೋಹ ಅರೆದಾಡಿದ್ದವು.
ಇದರಿಂದ ಕೆಲ ಮುಖಂಡರುಗಳು ಮುಷ್ಕರ ಹಮ್ಮಿಕೊಳ್ಳುವಂತೆ ಯೋಚನೆಯಲ್ಲಿದ್ದರು ಆ ಸಂದರ್ಭದಲ್ಲಿ ಬಿದರಿಕೆರೆ ಗ್ರಾಮದ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪ್ರಕಾಶ್ ರವರು ಪೊಲೀಸರಿಗೆ ಮಾಹಿತಿ ತಿಳಿಸಿ ನಂತರ ವಿಚಾರಣೆ ಮಾಡುವು ದಾಗಿ ತಿಳಿಸಿ ಠಾಣೆಗೆ ದೂರು ಸಲ್ಲಿಸಿದ್ದಾರೆ
ಇದರಿಂದ ಅನಾವಶ್ಯಕವಾಗಿ ಸಾರ್ವಜನಿಕರಿಗೆ ಸ್ಥಳೀಯ ವ್ಯಕ್ತಿಗಳ ಮೇಲೆ ಅನುಮಾನಕ್ಕೆ ಈಡು ಮಾಡಿ ಸಮಾಜದಲ್ಲಿ ಶಾಂತಿ ಸಾಮ ರಸ್ಯವನ್ನು ಹಾಳಾಗುವ ಸಂಭವವನ್ನು ತಪ್ಪಿಸಲಾಗುತ್ತದೆ ಜಗ ಳೂರು ಪೊಲೀಸರು ಹಾಗೂ ಬಿದರಿಕೆರೆ ಗ್ರಾಮದ ಗ್ರಾಮಸ್ಥರ ನಡೆ ಮೆಚ್ಚುಗೆಗೆ ಪಾತ್ರವಾಗಿದೆ
ತಾಲೂಕಿನಲ್ಲಿ ಇಂಥ ಘಟನೆಗಳು ನಡೆದಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರಿಂದ ತನಿಖೆ ಮಾಡಿಸಿ ಬರುವ ಮಾಹಿತಿ ಯನ್ನು ಕಾಯದೆ ವಿನಾಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸು ಇಚ್ಛೆ ಅರಿಬಿಡುವ ಸುದ್ದಿಗಳಿಗೆ ಸಾರ್ವಜನಿಕರು ಕಿವಿ ಗೊಡದೆ ಕಣ್ಣಾರೆ ಕಂಡಿದ್ದನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುವುದು ಉತ್ತಮವಾಗುತ್ತದೆ.!