ಪ್ರಜಾ ನಾಯಕ ಸುದ್ದಿ ಜಗಳೂರು :- ದೇವಸ್ಥಾನ ಹುಂಡಿ ಹಣ ಕಳವು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿ ದ್ದಾರೆ. ಆ.5ರಂದು ರಾತ್ರಿ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ (ಕೆ.ಇ.ಬಿವೃತ್ತ) ಶ್ರೀಮಹಾಗಣಪತಿ ದೇವಸ್ಥಾನದ ಹುಂಡಿಯನ್ನು ಯಾರೋ ಕಳ್ಳರು ಹೊಡೆದು, ಸುಮಾರು 30 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಪತ್ತೆ ಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಜಗಳೂರು ಠಾಣೆಯ ಪಿಐ ಶ್ರೀನಿವಾಸರಾವ್ ನೇತೃತ್ವದಲ್ಲಿ ಪಿಎಸ್ಐ ಸಾಗರ್ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ಒಳಗೊಂಡ ತಂಡವು ಇಂದು (ಆ.14) ಪ್ರಕರಣದ ಆರೋಪಿ ಜಗಳೂರು ವಾಸಿ ಹನುಮಂತ @ ಲಂಕೆ ಹನುಮಂತ (47) ಬಂಧಿಸಲಾಗಿದೆ.
ಆರೋಪಿಯಿಂದ 8,065 ರೂ ನಗದು ಹಣ, ಒಂದು ಕಬ್ಬಿಣದ ರಾಡು ಹಾಗೂ ಒಂದು ಗೋಡೆ ಗಡಿಯಾರವನ್ನು ವಶಪಡಿಸಿಕೊಳ್ಳ ಲಾಗಿ ರುತ್ತದೆ. ಈ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿ ಐ ಶ್ರೀನಿವಾಸ್ ರಾವ್. ಪಿಎಸ್ಐ ಸಾಗರ್. ಪೊಲೀಸ್ ಸಿಬ್ಬಂದಿಗಳಾದ ನಾಗಭೂಷಣ್.ಶ್ರೀನಿವಾಸ್. ಬಸವರಾಜ್. ಮಾರೆಪ್ಪ. ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರಾದ ಡಾ. ಅರುಣ್ ಕೆ. ಐಪಿಎಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ