ಪ್ರಜಾ ನಾಯಕ ಸುದ್ದಿ ದಾವಣಗೆರೆ :- ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಮೇ 10 ರಂದು ನಡೆಯುವ ಮತದಾನಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಮೇ 5 ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ. ನಿಯೋಜಿತ ಸಿಬ್ಬಂದಿಗಳು ಅವರ ಕೇಂದ್ರ ಸ್ಥಾನದಿಂದ ತರಬೇತಿಗೆ ನಿಯೋಜಿತ ತಾಲ್ಲೂಕುಗಳಿಗೆ ತೆರಳಲು ಅಂದು ಬೆಳಗ್ಗೆ 7 ಗಂಟೆಯಿಂದ ಆಯಾ ತಾಲ್ಲೂಕು ಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಂದ ನಿಯೋ ಜಿತ ಸ್ಥಳಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದ್ದು ನಿಗದಿ ಪಡಿಸಿದ ಸ್ಥಳಕ್ಕೆ ಬೆಳಗ್ಗೆ 7 ಗಂಟೆಯೊಳಗೆ ಆಗಮಿಸಿರಬೇಕು.
ಜಗಳೂರು; ಸರ್ಕಾರಿ ಪದವಿ ಪೂರ್ವ ಕಾಲೇಜು ಮಾರ್ಗಾಧಿಕಾರಿ ರೇಣುಕೇಶ್ಮೂರ್ತಿ ಸಹಾಯಕ ಕೃಷಿ ನಿರ್ದೇಶಕರು ಮೊ. 7625078041,ಹರಿಹರ; ತಾಲ್ಲೂಕು ಕಚೇರಿ, ಮಾರ್ಗಾಧಿ ಕಾರಿ ಶಶಿಕುಮಾರ್, ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ, ಮೊ.9916560048,ದಾವಣಗೆರೆ ಉತ್ತರ; ಮಾರ್ಗಾಧಿಕಾರಿ ವಿನಯ್, ಸಹಾಯಕ ಕಂದಾಯಾಧಿಕಾರಿ ಮಹಾನಗರ ಪಾಲಿಕೆ ಮೊ.9036862624, ದಾವಣಗೆರೆ ದಕ್ಷಿಣ; ಮಾರ್ಗಾಧಿಕಾರಿ ಸುನಿಲ್, ಸಹಾಯಕ ಕಂದಾಯ ಅಧಿಕಾರಿ ಮಹಾನಗರ ಪಾಲಿಕೆ ಮೊ.9164595891, ಮಾಯಕೊಂಡ; ವಿಶ್ವನಾಥಗೌಡ, ಸಹಾಯಕ ನಿರ್ದೇಶಕರು, ಆಹಾರ ಇಲಾಖೆ, ಮೊ.79759 17887 ಈ ಮೂರು ಕ್ಷೇತ್ರ ಸೇರಿ ದಾವಣಗೆರೆ ಹೈಸ್ಕೂಲ್ ಮೈದಾನ,ಚನ್ನಗಿರಿ; ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾರ್ಗಾಧಿಕಾರಿ ಜಯರಾಮ್, ಆಹಾರ ಶಿರಸ್ತೆದಾರರು ಮೊ. 9448346775 ಮತ್ತು ಹೊನ್ನಾಳಿಯಿಂದ ತೆರಳಲು ತಾಲ್ಲೂಕು ಕಚೇರಿ ಬಳಿಯಿಂದ ಬಸ್ ಹೊರಡಲಿದ್ದು ಮಾರ್ಗಾಧಿ ಕಾರಿ ಸಂತೋಷ.ಎಸ್ ರಾಜಸ್ವ ನಿರೀಕ್ಷಕರು ಇವರ ಮೊಬೈಲ್ 9731716269 ಸಂಖ್ಯೆಗೆ ಸಂಪರ್ಕಿಸಬಹುದು.
ಮತದಾನ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ ಸ್ಥಳದಲ್ಲಿಯೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿಯವರು ನಮೂನೆ-12 ರಲ್ಲಿ ಕೋರಿಕೆಯನ್ನು ಅಗತ್ಯ ದಾಖಲೆಗಳೊಂದಿಗೆ ಮೇ 3 ರೊಳಗಾಗಿ ಕೋರಿಕೆ ಸಲ್ಲಿಸಲು ತಿಳಿಸಲಾಗಿದೆ