ಪ್ರಜಾ ನಾಯಕ ಸುದ್ದಿ ದಾವಣಗೆರೆ : ದಾವಣಗೆರೆಗೆ ಯಾರಾದ್ರೂ ರಾತ್ರಿ 10ರ ಮೇಲೆ ಬರುವಾಗ ಊಟ ಮಾಡಿಕೊಂಡಿ ಬನ್ನಿ, ನೀವೆ ನಾದ್ರೂ ಹಾಗೇ ಬಂದ್ರೆ ಇಲ್ಲಿ ಊಟ ಸಿಗೋದಿಲ್ಲ. ಇಡೀ ನಗರ ಈ ಸಮಯದಲ್ಲಿ ಶಾಂತವಾಗಿರುತ್ತದೆ.
ಇದಕ್ಕೊಂದು ಕಾರಣ ಕೂಡ ಇದೆ…ಸ್ಮಾರ್ಟ್ ಸಿಟಿ ದಾವಣಗೆರೆ ಗೆ ಎಂಟ್ರಿಕೊಟ್ಟ ದಿನವೇ ಪೊಲೀಸ್ ಸಿಬ್ಬಂದಿಗಳಿಗೆ ಚಳಿ ಬಿಡಿಸಿದ್ದ ನೂತನ ಎಸ್ಪಿ ಡಾ.ಕೆ.ಅರುಣ್ ರಾತ್ರಿ 10 ರನಂತರ ನಡೆಯುತ್ತಿದ್ದ ದಂಧೆಗಳಿಗೆ ಬ್ರೇಕ್ ಹಾಕುವ ಮೂಲಕ ನಗರವನ್ನು ನಿಶ್ಯಬ್ದ ಮಾಡಿ ದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಸ್ತೆಗಳು ವೌನ ವಹಿಸಿರುತ್ತದೆ..ತಂಪಾದ ಗಾಳಿ ಮಾತ್ರ ಈ ಸಮಯದಲ್ಲಿ ಉಚಿತ ವಾಗಿ ಸಿಗುತ್ತದೆ..ಯಾವುದೇ ಶಬ್ದ, ಗಲಾಟೆ ಸೇರಿದಂತೆ ಯಾವ ಅಕ್ರಮಗಳು ನಡೆಯೋದಿಲ್ಲ. ಎಲ್ಲರೂ ತಮ್ಮ ಪಾಡಿಗೆ ಮನೆಯಲ್ಲಿ ಒಕ್ಕಿಕೊಂಡಿರುತ್ತಾರೆ.
ಚಿತ್ರದುರ್ಗ, ಗುಲ್ಬರ್ಗ, ವಿಜಯನಗರದಲ್ಲಿ ಕಾರ್ಯನಿರ್ವಹಿಸಿದ್ದ ಎಸ್ಪಿ ಡಾ.ಕೆ.ಅರುಣ್ ದಾವಣಗೆರೆ ಬರುತ್ತಾರೆ ಎಂಬ ಕೇಳಿದ ಸುದ್ದಿಗೆ ಸಿಬ್ಬಂದಿಗಳು ಥರ-ಥರ ನಡುಗುತ್ತಿದ್ದರು. ಅಲ್ಲದೆ ಬೇರೆ ಜಿಲ್ಲೆಯ ಪೊಲೀಸರು ಇಲ್ಲಿನ ಖಾಕಿ ಪಡೆಗೆ ಪೋನ್ ಮಾಡುತ್ತಿದ್ದ ರು. ಬಂದ ಮೊದಲ ದಿನವೇ ಅಕ್ರಮ ದಂಧೆಯಲ್ಲಿ ಭಾಗಿಯಾಗು ವ ಪೊಲೀಸ್ ಸಿಬ್ಬಂದಿಗಳಿಗೆ ಖಡಕ್ ಸೂಚನೆ ನೀಡಿದ್ದರು. ನಾನು ಸಂವಿಧಾನ್ಮಾತಕವಾಗಿ ಕೆಲಸ ಮಾಡುವ ವ್ಯಕ್ತಿ, ಪ್ರಾಮಾಣಿಕತೆಯೇ ನನ್ನ ಧ್ಯೇಯ. ಯಾವ ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡುವೆ, ಕಾನೂನುತ್ಮಾಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಚುನಾವಣೆ ಇರುವ ಕಾರಣ ಎಸ್ಪಿ ಡಾ.ಕೆ.ಅರುಣ್ ಎಲ್ಲ ಪೊಲೀಸ್ ಠಾಣೆಗಳ ಸಿಬ್ಬಂದಿ ಜತೆ ಸುಮಾರು ಒಂದು ಗಂಟೆಗಳ ಕಾಲ ಮೀಟಿಂಗ್ ಮಾಡಿ ಕೆಲ ಸೂಚನೆ ನೀಡಿದ್ದರು. ಅದರಂತೆ ಹತ್ತರ ಬಳಿಕ ನಗರ ಸೈಲೆಂಟ್ ಆಗಿರುತ್ತದೆ. ರಾತ್ರಿ ಹತ್ತರ ನಂತರ ನಗರದ ಎಲ್ಲ ಅಂಗಡಿಗಳು ಮುಚ್ಚಿರುತ್ತದೆ. ಅದರಲ್ಲೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ ಒಕ್ಕಿಕೊಂಡಿದ್ದ ಜನರು 9.30ಕ್ಕೆ ಕಾಲಿಗೆ ಬುದ್ದಿ ಹೇಳುತ್ತಿದ್ದಾರೆ. ಪರಿಣಾಮ ಯಾವುದೇ ಗಲಾಟೆಗಳು ಇಲ್ಲವಾಗಿದೆ,.
ಈ ಹಿಂದೆ ರಾತ್ರಿ ಹನ್ನೆರಡರ ತನಕ ವಹಿವಾಟು ನಡೆಯುತ್ತಿದ್ದು, ಅಕ್ರಮ ದಂಧೆಗಳು ಈ ಸಮಯದಲ್ಲಿ ನಡೆಯುತ್ತಿದ್ದವು. ಅದರಲ್ಲೂ ರಾತ್ರಿ ವೇಳೆ ಗಸ್ತು ತಿರುಗುವ ಸಿಬ್ಬಂದಿಗಳು ಪ್ರತಿ ಅಂಗಡಿಗೆ ಹೋಗುತ್ತಿದ್ದರು. ಆದರೀಗ ಇವೆಲ್ಲವುದಕ್ಕೂ ಎಸ್ಪಿ ಅರುಣ್ ಪುಲ್ಸ್ಟಾಪ್ ಇಟ್ಟಿದ್ದಾರೆ. ಪರಿಣಾಮ ಕೆಲ ಖಾಕಿ ಪಡೆಗೆ ಕೈ ಕಟ್ಟಿದಂತಾಗಿದೆ.
ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗಳು ರಾತ್ರಿ 9.30ಕ್ಕೆ ಎಂಟ್ರಿ ಕೊಟ್ಟು ಮೊದಲು ಬಾಗಿಲು ಹಾಕಿಸುತ್ತಿವೆ. ಅಲ್ಲದೇ ಇಡೀ ನಗರವನ್ನು ಪ್ರದಕ್ಷಿಣೆ ಹಾಕುವ ಮೂಲಕ ಎಸ್ಪಿ ಏಟಿಗೆ ಬೆಂಡಾ ಗಿದ್ದಾರೆ.
ಸದಾ ಆರಾಮವಾಗಿದ್ದ ಸಿಬ್ಬಂದಿಗಳು ಎಸ್ಪಿ ಅರುಣ್ ಬಂದ ಮೇಲೆ ಕೈಗೆ ಕೆಲಸಕೊಟ್ಟಿದ್ದಾರೆ. ಚುನಾವಣಾ ಇರುವ ಕಾರಣ ಕತ್ತಲ ರಾತ್ರಿ ಕೂಡ ಜೋರಾಗಿ ಇರಲಿದ್ದು, ಎಲ್ಲ ಏರಿಯಾಗಳಲ್ಲಿ ಏನೇನೂ ನಡೆಯುತ್ತದೆ ಎಂದು ಕುಳಿತಲ್ಲಿ ಎಸ್ಪಿ ವೀಕ್ಷಿಸುತ್ತಿದ್ದಾರೆ. ಅಲ್ಲದೇ ಪ್ರತಿ ದಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ನೂತನ ಎಸ್ಪಿ ಆಗಮನದಿಂದ ಸಾಮಾನ್ಯ ಜನ ಕೆಲ ದಿನ ನಿಟ್ಟುಸಿರು ಬಿಟ್ಟಿದ್ದು, ಕೆಲ ಖಾಕಿ ಪಡೆ ಗುಯ್..ಗುಯ್ ಅಂತಲೇ ಕೆಲಸ ಮಾಡುತ್ತಿದೆ. ಇನ್ನು ಚುನಾವಣಾ ಕಣದ ಕಲಿಗಳ ಮೇಲೆಯೂ ಎಸ್ಪಿ ಕಣ್ಣೀಟ್ಟಿದ್ದು, ಸಿಬ್ಬಂದಿಗಳು ಕತ್ತಲರಾತ್ರಿಯಲ್ಲಿ ಭಾಗಿಯಾದರೆ ಕ್ರಮ ಕೈಗೊಳ್ಳು ವುದಾಗಿ ಎಚ್ಚರಿಕೆ ನೀಡಿದ್ದಾರೆ