ಪ್ರಜಾ ನಾಯಕ ಸುದ್ದಿ ದಾವಣಗೆರೆ :- ಜಿಲ್ಲೆಯ ಜಗಳೂರು ತಾಲ್ಲೂಕು ವ್ಯಾಪ್ತಿಯ ಸೊಕ್ಕೆ ಹೋಬಳಿ ಚಿಕ್ಕಮ್ಮನ ಹಟ್ಟಿ ಪ್ರದೇಶಕ್ಕೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ನಿಯಮಾನು ಸಾರ ನಿಗಧಿತ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.
ಚಿಕ್ಕಮ್ಮನ ಹಟ್ಟಿ ಪ್ರದೇಶದಲ್ಲಿ 79 ಅಂತ್ಯೋದಯ, 264 ಬಿಪಿ ಎಲ್ ಮತ್ತು 09 ಎಪಿಎಲ್ ಒಳಗೊಂಡಂತೆ ಒಟ್ಟು 352 ಪಡಿತರ ಚೀಟಿಗಳು ಇದ್ದು, ಒಂದು ತಿಂಗಳ ಪಡಿತರ ಎತ್ತುವಳಿಗೆ ಕನಿಷ್ಠ 50.000 ಮೊತ್ತದ ಅಗತ್ಯವಿರುತ್ತದೆ.
ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ, ಸಂಸ್ಥೆ, ಗ್ರಾಮ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆ, ಸಹಕಾರ ಸಂಘಗಳಾದ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ, ವ್ಯವಸಾಯ ಸೇವಾ ಸಹ ಕಾರ ಸಂಘ(ನಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ವಿ.ಎಸ್.ಎಸ್.ಎಂ.ಎಸ್, ತೋಟಗಾರಿಕೆ ಉತ್ಪನ್ನಗಳ ಸಹಕಾರ ಸಂಘದ ಮಾರಾಟ ಮಂಡಳಿ ನಿಯಮಿತ, ನೋಂದಾ ಯಿತ ಸಹಕಾರ ಸಂಘ, ನೋಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘ, ದೊಡ್ಡ ಪ್ರಮಾಣದ ಆದಿವಾಸಿಗಳ ವಿವಿಧೋದ್ದೇಶ ಸಹಕಾರ ಸಂಘ,ನೋಂದಾಯಿತ ನೇಕಾರರ ಸಹಕಾರ ಸಂಘ, ನೋಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ನೋಂದಾಯಿತ ವಿವಿಧೋದ್ದೇಶ ಸಹಕಾರ ಸಂಘ, ಅಂಗವಿಕಲರ ಕಲ್ಯಾಣ ಸಹಕಾರ ಸಂಘ ಹಾಗೂ ಬ್ಯಾಂಕಿನಿಂದ ನಡೆಸಲ್ಪಡುವ ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕ್; ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಕಟಣೆ ಹೋರಡಿಸಿದ 30 ದಿನಗಳೊಳಗಾಗಿ ಉಪನಿರ್ದೇಶಕರು, ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ (ಜಿಲ್ಲಾಡ ಳಿತ ಭವನದ ಕೊಠಡಿ ನಂ. 4) ಇವರಿಂದ ಅರ್ಜಿ ನಮೂನೆ ಪಡೆದು ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಜಗಳೂರು ತಾಲ್ಲೂ ಕು ಕಚೇರಿಯಲ್ಲಿ ಸಹ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.