ಪ್ರಜಾ ನಾಯಕ ಸುದ್ದಿ ಜಗಳೂರು -: ಜನರು ಯೋಗಭ್ಯಾಸವನ್ನು ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಂಡರೆ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಸಂಸದ . ಜಿ.ಎಂ ಸಿದ್ದೇಶ್ವರ ತಿಳಿಸಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸ್ಮಾರ್ಟ್ ಸಿಟಿ. ಲಿ., ಜಿಲ್ಲಾ ಯೋಗ ಒಕ್ಕೂಟ, ಜಿಲ್ಲಾ ಪೋಲಿಸ್ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಪೋವನ ಆಯು ರ್ವೇದ, ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜ್, ಅಶ್ವಿನಿ ಆಯುರ್ವೇದ ಮೆಡಿಕಲ್ ಕಾಲೇಜ್, ಸುಶೃತ ಆಯು ರ್ವೇದ ಮೆಡಿಕಲ್ ಕಾಲೇಜ್, ಎನ್.ಸಿ.ಸಿ. ಘಟಕ, ಎನ್.ಎಸ್. ಎಸ್, ಘಟಕ, ಪ್ರಜಾಪಿತ ಬ್ರಹ್ಮಕುಮಾರೀಸ್, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಸಮಿತಿ, ದಾವಣಗೆರೆ ಇವರುಗಳ ಸಹಯೋಗದಲ್ಲಿ ನಗರದ ದೇವರಾಜ ಅರಸ್ ಬಡಾವಣೆ ಬಿ ಬ್ಲಾಕ್ ನಲ್ಲಿರುವ ಈಜುಕೊಳದ ಹತ್ತಿರವಿರುವ ಮೈದಾನದಲ್ಲಿ ವಿಶ್ವ ಕುಟುಂಬಕ್ಕಾಗಿ ಯೋಗ ಹಾಗೂ ಪ್ರತಿ ಅಂಗಳದಲ್ಲಿ ಯೋಗ ಎಂಬ ಘೋಷಾ ವಾಕ್ಯದೊಂದಿಗೆ ಜರುಗಿದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಎನ್ನುವುದು ಪುರಾತನ ಕಾಲದಿಂದ ಬಂದಿದ್ದು, ಸ್ವಾತಂತ್ರ್ಯ ಬಂದ ನಂತರ ಇದನ್ನು ಕಡೆಗಣಿಸಿದ್ದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದನ್ನು ಪ್ರಪಂಚದದ್ಯಂತ ಆಚರಣೆ ಮಾಡಲಾಗುತ್ತಿದೆ.
ದೇಶದ ಎಲ್ಲಾ ರಾಜ್ಯ ಜಿಲ್ಲೆ ಹೋಬಳಿ ಗ್ರಾಮ ಮಟ್ಟಗಳಲ್ಲಿಯೂ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮನುಷ್ಯನಿಗೆ ದೈಹಿಕ-ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಯೋಗವು ಅವಶ್ಯವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಯೋಗವನ್ನು ಕಲಿಸಬೇಕು ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ ಯೋಗವೆಂದರೆ ಕೇವಲ ದೈಹಿಕ ವ್ಯಾಯಾಮವಲ್ಲ, ಪ್ರಾಣಯಾಮವಲ್ಲ ಬದಲಾಗಿ ಆಧ್ಯಾತ್ಮದ ಕಡೆಗೆ ಕೊಂಡೊಯ್ಯುವ ಒಂದು ಮಾರ್ಗ, ಯೋಗದ ಮೂಲ ಉದ್ದೇಶ ಇಡೀ ಜಗತ್ತು ಸುಖ, ಸಂತೋಷದಿಂದ ಕೂಡಿರ ಬೇಕು. ಯೋಗದ ಮೂಲಕ ಜನರು ಆರೋಗ್ಯದ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಔಷಧಗಳಿಗೆ ಒಳಗಾಗದೇ ಯೋಗಭ್ಯಾಸ ಮಾಡಬೇಕು ಎಂದರು.
ಈ ವೇಳೆ ಯೋಗಗುರು ವೈದ್ಯ ಶ್ರೀ ಚೆನ್ನಬಸವಣ್ಣ ಸ್ವಾಮಿ ಯೋಗದ ಮಹತ್ವ ಸಾರುವ ಮೂಲಕ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು.
ಯೋಗಾಸಕ್ತರಿಗೆ ಲಕ್ಷ್ಮೀ ಶ್ರೀನಿವಾಸ ಗುರುಜೀಯವರು ಯೋಗ ಮುದ್ರೆ ಮಹತ್ವವನ್ನು ತಿಳಿಸಿದರು.
ಯೋಗ ಕಾರ್ಯಕ್ರಮಕ್ಕೆ ನೂರಾರು ಯೋಗಾಸಕ್ತರು ಹಾಗೂ ನಗರದ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಸುರೇಶ ಕೆ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೊಕೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್, ಆಯುಷ್ ಇಲಾಖೆ ಜಿಲ್ಲಾಧಿಕಾರಿ ಡಾ.ಶಂಕರಗೌಡ, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕ ರ್, ದಾವಣಗೆರೆ ಪ್ರಜಾಪಿತ ಬ್ರಹ್ಮಕುಮಾರೀಸ್ನ ಲೀಲಾ ಕುಮಾರಿ, ಜಿಲ್ಲಾಮಟ್ಟದ ಅಧಿಕಾರಿಗಳು, ಯೋಗಪಟುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.