ಪ್ರಜಾ ನಾಯಕ ಜಗಳೂರು ಸುದ್ದಿ -:ನ್ಯಾಯದ ಬಲ ತಕ್ಕಡಿಯಲ್ಲಿ, ಚೇಳಿನ ಬಲ ಅದರ ಕೊಂಡಿ ಯಲ್ಲಿ, ದೇಹದ ಬಲ ತೋಳಿನಲ್ಲಿ, ಭಾಷೆ ಯ ಬಲ ಜನರಾಡುವ ನುಡಿಯಲ್ಲಿ” ಎಂಬ ಮಾತಿದೆ. ಒಂದು ದೇಶ ಅಥವಾ ಪ್ರದೇಶ ಸಂಪದ್ಭರಿತವಾಗಿದೆ ಎಂಬುದು ಕೇವಲ ಭೌತಿಕ ಸಿರಿವಂತಿಕೆಯಿoದ ಮಾತ್ರ ಅಳೆಯುವಂತ ಹುದಲ್ಲ. ಬದಲಾಗಿ ಅಲ್ಲಿನ ಭಾಷೆ, ಸಾಹಿತ್ಯ, ಸಂಗೀತ, ನಾಟಕ, ಕಲೆ, ಮುಂತಾದ ಸಾಹಿತ್ಯ, ಸಾಂಸ್ಕೃತಿಕ ಆಯಾ ಮಗಳ ಮೂಲಕ ವೂ ಪರಿಗಣಿಸುವಂತ ಹೌದು .ಇದನ್ನು ಮನಗಂಡೇ ಶತಶತ ಮಾನಗಳ ಹಿಂದಿನಿoದಲೂ ರಾಜ-ಮಹಾ ರಾಜರು ಸಾಹಿತ್ಯ-ಸಾಂಸ್ಕೃತಿಕ ಸಿರಿಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿರುವು ದನ್ನು ನಾವು ಕಾಣಬಹುದು.
ನಾಡುನುಡಿಯ ಉದ್ದೀಪನ ತತ್ವ ಸಾರ-ಸದಾಶ ಯಗಳನ್ನು ಹೊಂದಿ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ರವರ ದೃಢ ಸಂಕಲ್ಪದೊoದಿಗೆ ರೂಪು ತಳೆದ “ಕನ್ನಡ ಸಾಹಿತ್ಯ ಪರಿಷತ್ತು” ಇಂದು ಹಳ್ಳಿ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ, ಹೊರರಾಜ್ಯ, ಹೊರದೇಶಗ ಳಲ್ಲಿಯೂ ಆಲದ ಮರದ ಬಿಳಿಲು ಬೇರು ಗಳಂತೆ ಬೆಳೆದು ನಿಂತಿರುವುದು ಅಭಿಮಾ ನದ ಸಂಗತಿಯೇ ಸರಿ. ಜಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಪ್ರಾರಂಭಗೊoಡು ಐದು ದಶಕಗಳೇ ಸಂದಿವೆ.
ಕಡಲ ಅಲೆಗಳ ಅಬ್ಬರವಿಳಿತಗಳಂತೆ ಇಲ್ಲಿನ ಸಾಹಿತ್ಯಿಕ ಚಟುವಟಿಕೆಗಳೂ ಉಬ್ಬು-ತಗ್ಗುಗಳನ್ನು ಮೈಗೂಡಿಸಿಕೊಂಡು ಸಾಗಿ ಬಂದಿದೆ.1997 ಕ್ಕಿಂತ ಮೊದಲು ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಗೆ ಸೇರಿತ್ತು.1997 ರಲ್ಲಿ ದಾವಣಗೆರೆ ಜಿಲ್ಲೆ ಉದಯಗೊಂಡು ನಾವು ದುರ್ಗದ ಒಡಲಿನಿಂದ ದಾವಣಗೆರೆಯ ತೆಕ್ಕೆಗೆ ಬಂದೆವಷ್ಟೆ.1996 ರಿಂದ 2002 ರವರೆಗಿನ ಕಾಲಾವಧಿ ಜಗಳೂರು ಕಸಾಪದ ಕಾರ್ಯ ಚಟುವಟಿಕೆಗಳಿಗೆ ಮುಕುಟ ಪ್ರಾಯದ ಅವಧಿ ಎಂದೇ ಹೇಳಬೇಕಿದೆ.1996 ರಲ್ಲಿ ನಮ್ಮ ಜಗಳೂರಿನಲ್ಲಿ ಪ್ರಥಮ ಬಾರಿಗೆ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತಾಯಿತು.
ಆಗ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿದ್ದವರು ದಾವಣಗೆರೆಯ ಡಾ.ಎಂ.ಜಿ. ಈಶ್ವರಪ್ಪನವರು. ಅದೇ ರೀತಿ ಜಗಳೂರು ತಾಲ್ಲೂಕು ಕಸಾಪ ಅಧ್ಯಕ್ಷರಾ ದವರು ಶ್ರೀಸುಭಾಷ್ ಚಂದ್ರ ಬೋಸ್ರ ವರು. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಲ್ಲಿ ನಾಲಂದ ಪದವಿ ಪೂರ್ವ ಕಾಲೇಜಿನ ಎಂ. ಬಸವಪ್ಪ, ಟಿ. ತಿಪ್ಪೇಸ್ವಾಮಿ, ಪ್ರಭಾಕರ್ ಲಕ್ಕೋಳ್, ಶಾಸಕರಾದ ಎಂ.ಬಸಪ್ಪ ,ಬ್ಯಾಂಕ್ ನೌಕರನಾದ ನಾನು ಮತ್ತು ಎಂ.ಎಸ್.ಬಸವೇಶ್, ಡಿ.ಸಿ.ಮಲ್ಲಿ ಕಾರ್ಜುನ, ಹಾಲೇಕಲ್ಲಿನ ಮಹಾದೇವಪ್ಪ, ತಾಲ್ಲೂಕಿನ ಸಮಸ್ತ ಶಿಕ್ಷಕ ವೃಂದ ಬಹುವಾಗಿ ಶ್ರಮಿಸುವಂತಾಯಿತು.
ಆಗ ಜಗಳೂರಿನಲ್ಲಿ ಕುಡಿಯುವ ನೀರಿಗೆ ವಿಪರೀತ ಬರ. ನೀರಿ ಗಾಗಿ ಪ್ರಾರಂಭವಾದ ಹೋರಾಟ ಕಾವು ಪಡೆದುಕೊಂಡು ಜಗಳೂರು ಬಂದ್ ವೇಳೆ ಪುರಸಭೆಗೆ ಬೆಂಕಿಹಚ್ಚುವಂತಾಯಿತು ಆಕಾರಣದಿಂದ ಸಮ್ಮೇಳನ ಅನಿವಾರ್ಯವಾಗಿ ಮುಂದೂ ಡಲಾಯಿತು.
ಆ ಸಮ್ಮೇಳನಕ್ಕೆ ಬರಲು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದ ಡಾ. ಹಾ.ಮಾ.ನಾ ಯಕರು ಕಡೂರಿನವರೆಗೆ ಬಂದು ವಾಪಾಸ್ಸು ಹೋಗುವಂತಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಈ ಸಮ್ಮೇಳನಕ್ಕೆ ಬರುವವರಿದ್ದರು. ಜಗಳೂರಿನಲ್ಲಿ ಆದ ಅನಿರೀಕ್ಷಿತ ಘಟನೆಯಿಂದ ಪೂಜ್ಯರೂ ಕೂಡ ಬರಲಾಗಲಿಲ್ಲ.ನಂತರ ಶಾಂತಿ ಸಭೆಗಳನ್ನು ನಡೆಸಿ, ಜಿಲ್ಲಾ ಪೋಲೀ ಸ್ ವರಿಷ್ಠಾಧಿಕಾರಿಗಳಾದ ಗಗನದೀಪ್ ಹಾಗೂ ಶಾಸಕರಾದ ಎಂ. ಬಸಪ್ಪನವರ ಸಮ್ಮುಖದಲ್ಲಿ ಸಮ್ಮೇಳನವನ್ನು ಯಶಸ್ವಿಯಾ ಗಿಯೇ ನಡೆಸಲಾಯಿತು
ದಾವಣಗೆರೆ ಜಿಲ್ಲೆ, ರಚನೆಯಾದ ಸಂದರ್ಭದಲ್ಲಿ ಜಿಲ್ಲಾ ಕಸಾಪದ ಪ್ರಥಮ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದವರು ಜಗಳೂರು ನಾಲಂದ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಕರಾದ ಶ್ರೀ ಎಂ. ಬಸವಪ್ಪನವರು. ಅದೇ ರೀತಿ ಜಗಳೂರು ತಾಲ್ಲೂಕಿನ ಕಸಾಪ ಅಧ್ಯಕ್ಷರಾಗಿ ಎನ್.ಟಿ.ಎರ್ರಿಸ್ವಾಮಿ ಯಾದ ನಾನು ಆಯ್ಕೆಗೊಂಡೆ. 1998 ರಿಂದ 2000 ಇಸವಿ ಯವರೆಗೆ ನಾವು ಜಗಳೂರಿನಲ್ಲಿ ಕೈಗೊಂಡ ಗೃಹಗೋಷ್ಠಿಗಳು, ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ, ಸಂಗೀತ, ನಾಟಕ, ದೊಡ್ಡಾಟ ಕಾರ್ಯಕ್ರಮಗಳು, ಸಾಧಕರೊಂದಿಗೆ ಸಂವಾದ, ಸಂಕ್ರಾoತಿ.ಯುಗಾದಿ,ದೀಪಾವಳಿ,ರಾಜ್ಯೋತ್ಸವ, ಗಣರಾಜ್ಯೋತ್ಸವ, ಕಾರ್ಗಿಲ್ ಯುದ್ಧ ಸಂದರ್ಭದ ಕವಿಗೋಷ್ಠಿಗಳು, ಕಾವ್ಯ, ಕಥಾ ಕಮ್ಮಟಗಳು ರಾಜ್ಯದಲ್ಲಿಯೇ ಹೊಸ ಸಂಚಲನವನ್ನು ಮೂಡಿಸಿದವು. ಎಲ್ಲಾ ಸಾಹಿತ್ಯಾಸಕ್ತರ ಒಗ್ಗಟ್ಟಿನ ಫಲವಾಗಿ 2002 ರಲ್ಲಿ ಪಲ್ಲಾಗಟ್ಟೆ ಗ್ರಾಮದಲ್ಲಿ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು.
ಆಗ ತಾಲ್ಲೂಕ ಕಸಾಪ ಅಧ್ಯಕ್ಷರಾಗಿದ್ದ ಪ್ರಭಾಕರ ಲಕ್ಕೋಳ್ ರವರು, ಶಾಸಕರಾದ ಎಂ. ಬಸಪ್ಪ ಹಾಗೂ ನಾಲಂದ ಪದವಿ ಪೂರ್ವ ಕಾಲೇಜಿನ ಟಿ. ತಿಪ್ಪೇಸ್ವಾಮಿ, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪಲ್ಲಾಗಟ್ಟೆ ಗ್ರಾಮಸ್ಥರ ಸಂಪೂರ್ಣ ಸಹಕಾ ರವನ್ನು ಪಡೆದು ಪ್ರಥಮ ಸಮ್ಮೇಳನವನ್ನು ಅದ್ಧೂರಿಯಾಗಿ ನೆರವೇರಿಸಿದರು. ಅಲ್ಲಿಂದ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಯಾವುದೇ ಸಾಹಿತ್ಯ ಸಮ್ಮೇಳನ ನಡೆಸಲಾಗಲಿಲ್ಲ ಎಂಬ ಕೊರಗು ಎಲ್ಲರಲ್ಲಿ ಕಾಡುವಂತಾಯಿತು.
ಕಳೆದ ಎರಡು ದಶಕಗಳ ಅವಧಿಯಲ್ಲಿ ತಾಲ್ಲೂಕಿನ ಕೆ. ಸುರೇಶ್ಬಾಬು, ಡಾ. ಜಿ. ಸಿದ್ದಪ್ಪ, ಜಿ.ತಿಮ್ಮರಾಜು, ಜೆ.ಎಸ್.ಬಿ. ರಾಜು, ಸಿ. ತಿಪ್ಪೇಸ್ವಾಮಿ, ಜಿ.ಹೆಚ್.ಹಜರತ್ಅಲಿ ಮುಂತಾದವರು ತಾಲ್ಲೂಕು ಕಸಾಪದ ಅಧ್ಯಕ್ಷರಾಗಿ ತಮ್ಮ ಇತಿಮಿತಿ ಗಳೊಳಗೆ ಒಂದಿಷ್ಟು ಕನ್ನಡದ ಕೆಲಸಗಳನ್ನು ಮಾಡಿದರಾದರೂ ಅವರಾರಿಗೂ ಸಮ್ಮೇಳ ನವನ್ನು ನಡೆಸಲಾಗಲಿಲ್ಲ.ಎರಡು ದಶಕಗಳ ಕನಸೊಂದು ಇಂದು ನನಸಾಗುತ್ತಿದೆ.
” ಈಗ ತಾಲ್ಲೂಕು ಕಸಾಪದ ಅಧ್ಯಕ್ಷರಾಗಿರುವವರು ‘ದಿಟ್ಟ ಮಹಿಳೆ’ ಎಂದೇ ಹೆಸರಾದ ಶ್ರೀಮತಿ ಕೆ. ಸುಜಾತಮ್ಮ ರಾಜುರವರು. ಎಲ್ಲಾ ಸ್ತರದ ಸಾಹಿತ್ಯಾಸಕ್ತರನ್ನು ಒಳಗೊಂಡ ಕಾರ್ಯ ಕಾರಿ ಸಮಿತಿ ಸಮ್ಮೇಳನದ ನೆಪದಲ್ಲಿ ಸಕ್ರಿ ಯಗೊಂಡಿದೆ. ವಿಶೇಷವಾಗಿ ಕಾರ್ಯಕಾರಿಣಿಯಲ್ಲಿರುವ ಬಿ.ಟಿ ಗೀತಾಮಂಜು, ಮಾರಪ್ಪನಾಯಕ, ಬಸವರಾಜ ಬೆಲ್ಲದ, ಕೆ.ಕೃಷ್ಣಮೂರ್ತಿ, ಚಂಪಾವತಿ, ನಾಗಲಿಂಗಪ್ಪ, ಓಬಪ್ಪ, ಗೌರಮ್ಮ, ಶಿವಮ್ಮ, ಆರ್ ಓಬಳೇಶ್ . ತೋರಣಗಟ್ಟೆ ಬಡಪ್ಪ . ರಾಜಪ್ಪ.ಆರ್. ಚಂದ್ರಪ್ಪ ಮುಂತಾದವರು ಹೆಚ್ಚು ಕ್ರಿಯಾಶೀಲ ರಾಗಿದ್ದಾರೆ.”
ನಾನು ಬ್ಯಾಂಕ್ ವೃತ್ತಿಯಿಂದ ನಿವೃತ್ತ ನಾಗಿ ಜಗಳೂರಿಗೆ ಬಂದು ನೆಲೆಸಿರುವ ನಾನು ಸಾಹಿತ್ಯ ಕೃಷಿಯ ಜೊತೆಗೆ ಸಂಘಟನಾತ್ಮಕ ಕೆಲಸಗಳಲ್ಲಿಯೂ ಹೆಚ್ಚು ಆಸಕ್ತ. ನನ್ನ ಜೊತೆ ನಿವೃತ್ತ ಉಪನ್ಯಾಸ ಕರಾದ ಡಿ.ಸಿ. ಮಲ್ಲಿಕಾರ್ಜುನರವರೂ ಕೈಜೋಡಿಸುವ ಕೆಲಸ ಮಾಡುತ್ತಿದ್ದಾರೆ.
ಹಾಗಾಗಿ ನಮ್ಮಿಬ್ಬರ ಮಾರ್ಗದರ್ಶನ ಕಸಾಪದ ಚಟುವಟಿಕೆಗಳಲ್ಲಿ ನಿರಂತರವಾಗಿ ಸಿಗುವಂತಾಗಿದೆ. ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾಗಿರುವ ಆಗಿರುವ ಶ್ರೀ ಎಸ್.ವಿ. ರಾಮಚಂದ್ರರವರು ಸಮ್ಮೇಳನದ ಗೌರವಾಧ್ಯಕ್ಷರಾಗಿ ತಮ್ಮ ತನು-ಮನ-ಧನಗಳ ಮೂಲಕ ಸಮ್ಮೇಳ ನದ ಯಶಸ್ಸಿಗೆ ಶ್ರಮಿಸಿದ್ದಾರೆ.
ಅದೇ ರೀತಿ ತಾಲ್ಲೂಕಿನ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರರಾದ ಶ್ರೀ ಜಿ. ಸಂತೋಷ ಕುಮಾರ್ರವರು ಹೃದಯಪೂರ್ವಕವಾಗಿ ಕನ್ನಡದ ಕೆಲಸಗಳಲ್ಲಿ ತೊಡಗಿಸಿಕೊಂ ಡಿದ್ದಾರೆ. ಅಂತೆಯೇ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಇಲಾಖೆಯ ಬಿ. ಮಹೇಶ್ವರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಬಿ.ಆರ್. ಚಂದ್ರಪ್ಪ ಮತ್ತು ಅವರ ತಂಡ, ಎಲ್ಲಾ ಶಿಕ್ಷಕರ ಸಂಘಟನೆಗಳು, ಕನ್ನಡ ಪರ ಸಂಘಟನೆ ಗಳು, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಡಿ.ಡಿ. ಹಾಲೇಶ್ ಮುಂತಾದವರ ಸಕ್ರಿಯ ಪಾತ್ರ ನಿಜಕ್ಕೂ ಅನುಕರಣೀಯ ವಾದದ್ದು.ಕಾಕತಾಳೀಯವೆಂಬoತೆ ಅಂದು ಜಿಲ್ಲಾ ಅಧ್ಯಕ್ಷರಾಗಿದ್ದ ಎಂ.ಜಿ. ಈಶ್ವರಪ್ಪನ ವರು ಮತ್ತು ಎಂ. ಬಸವಪ್ಪನವರು ಜಗಳೂರು ಮಾಜಿ ಶಾಸಕ ಎಚ್.ಪಿ ರಾಜೇಶ್. ಕೆ ಪಿಪಾಲಯ್ಯ. ಚಿಕ್ಕಮ್ಮನಟ್ಟಿ ಬಿ ದೇವೇಂದ್ರಪ್ಪ ಸೇರಿದಂತೆ ಗಣ್ಯಾತಿ ಗಣ್ಯರು ಈ ಸಮ್ಮೇಳನದಲ್ಲಿ ಕ್ರಮವಾಗಿ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ.
” ಆಗ ತಾಲ್ಲೂಕು ಅಧ್ಯಕ್ಷನಾಗಿದ್ದ ನಾನು ಈಗ ಸಮ್ಮೇಳನದ ಕಾರ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿ ಸುವಂತಾಗಿರುವುದು ಸಂತಸ ತಂದಿದೆ. ಪ್ರಸ್ತುತ ಅವಧಿಯ ಜಿಲ್ಲಾಧ್ಯಕ್ಷ ರಾದ ಶ್ರೀ ಬಿ. ವಾಮದೇವಪ್ಪ ಮತ್ತು ಅವರ ಸಕ್ರಿಯ ತಂಡ ಜಗಳೂರಿನ ಸಮ್ಮೇಳ ನಕ್ಕೆ ಸೂಕ್ತ ಬೆಂಬಲ ನೀಡಿ ಪ್ರೋತ್ಸಾಹಿಸಿದೆ. ಜಗಳೂರಿನ ಸಮಸ್ತ ಸಂಘಟನೆಗಳು ಪ್ರಾ ಮಾಣಿಕವಾಗಿ ಸಮ್ಮೇಳನಕ್ಕೆ ಬೆಂಬಲಿಸಿವೆ. ಅಂತೂ 21 ವರ್ಷಗಳ ನಂತರ ಜಗಳೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವು ನಮ್ಮ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಪ್ರೊಫೆಸರ್ ಹೆಚ್. ಲಿಂಗಪ್ಪ ಇವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಇರುವುದು ಜಗಳೂರು ತಾಲ್ಲೂಕಿನ ಜನರಲ್ಲಿ ಹೊಸ ಹುರುಪು, ಹುಮ್ಮಸ್ಸು ತುಂಬಿದೆ. ಸಮ್ಮೇಳನಕ್ಕೆ ಕೈ ಜೋಡಿಸಿದ ಪ್ರತಿಯೊಬ್ಬ ಹೃದಯವಂತ ನಾಗರೀಕರಿಗೆ ಭುವನೇಶ್ವರಿ ಸನ್ಮಂಗಲವನ್ನು ಉಂಟು ಮಾಡಲಿ ಎಂದು ನಾನು ಆಶಿಸುವೆ.”
ವಂದನೆಗಳೊಂದಿಗೆ
ವರದಿ -: ಎನ್.ಟಿ ಎರ್ರಿಸ್ವಾಮಿ ಹಿರಿಯ ಸಾಹಿತಿ.ಲೇಖಕರು ಹಾಗೂ ನಿವೃತ್ತ ಲೀಡ್ ಬ್ಯಾಂಕ್ ಮ್ಯಾನೇಜರ್ ಜಗಳೂರು ತಾಲೂಕು.ದಾವಣಗೆರೆ ಜಿಲ್ಲೆ