ವರದಿ -: ಬಾಬು ಹೆಚ್ ಮರೇನಹಳ್ಳಿ
ಪ್ರಜಾ ನಾಯಕ ಸುದ್ದಿ-: ಜಗಳೂರು ತಾಲ್ಲೂಕಿನ ಸುಕ್ಷೇತ್ರ ಕೊಡದ ಗುಡ್ಡದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಬುಧವಾರ ಮಾರ್ಚ್ ದಿನಾಂಕ- 8-3-2023 ರಂದು 4.30 ಸಮಯಕ್ಕೆ ಜರುಗುವುದು .
ಜಗಳೂರು ತಾಲೂಕು ಸುಕ್ಷೇತ್ರ ಕೊಡದಗುಡ್ಡ ವೀರಭದ್ರೇಶ್ವರ ತೇರು ಬಾಗಿಲು ಆವರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು
ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ ಸ್ವಾಮಿಯ ರಥೋತ್ಸವಕ್ಕೆ ಆಗಮಿಸುವರು ಇನ್ನು ರಥೋತ್ಸವದ ಅಂಗವಾಗಿ ಸುಕ್ಷೇತ್ರದಲ್ಲಿ ವಿಶೇಷವಾಗಿ ವಿವಿಧ ಪೂಜಾ ಪುನಸ್ಕಾರಗಳು ನೆಡೆಯುವುವು
ಜಿಲ್ಲೆಯ ವಿವಿಧ ಸದ್ಭಕ್ತರು ನಾನಾ ಭಾಗಗಳಿಂದ ಆಗಮಿಸು ವವರಿಗೆ ಅತಿಥಿ ಗೃಹ ಸೇರಿದಂತೆ ಕೆಲ ಗ್ರಾಮೀಣ ಬಾಗದ ಭಕ್ತರು ಪೌಳಿ ಬಿಡಾರ ಹಾಕಿ ಸಾರ್ವಜನಿಕರು ತಂಗುವರು ಜಾತ್ರ ಮಹೋತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯಗಳಿವೆ.ಇಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ .
ಒಟ್ಟಾರೆ ವೀರಭದ್ರೇಶ್ವರ ರಥೋತ್ಸವಕ್ಕೆ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗಿ ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಭಕ್ತರು ತಮ್ಮ ಇಷ್ಟಾರ್ಥಗಳುನ್ನು ಹಿಡೇರಿಸುವಂತೆ ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಬೇಡಿಕೊಳ್ಳುವ ಪದ್ಧತಿ ಭಕ್ತಮೂಲಗಳಿಂದ ತಿಳಿದು ಬಂದಿದೆ
” ಸುಕ್ಷೇತ್ರ ಶ್ರೀ ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿಯ ಜಾತ್ರೆಗೆ ಬರುವ ಪಾದಯಾತ್ರೆ ಮತ್ತು ಜಾತ್ರೆಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಜಗಳೂರು ತಾಲೂಕಿನ ಆರ್.ವಿ.ಎಸ್ ವಿದ್ಯಾ ಸಂಸ್ಥೆ ಹಾಗೂ ಶಿವ ಮೆಡಿಕಲ್ ಸ್ಟೋರ್ ಇವರಿಂದ ನಿಂಬೆಹಣ್ಣಿನ ಶರಬತ್ತು ಹಾಗೂ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ ಎಲ್ಲ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ”
ವೀರೇಶ್
ಕಾರ್ಯದರ್ಶಿಗಳು
ಆರ್.ವಿ.ಎಸ್ ಶಾಲೆ ವಿದ್ಯಾ ಸಂಸ್ಥೆ ಜಗಳೂರು
” ಸ್ವಾಮಿಯ ಜಾತ್ರೆಗೆ ಬರುವ ಎಲ್ಲ ಭಕ್ತಾದಿಗಳಿಗೆ ಕುಡಿಯುವ ನೀರು.ಸ್ವಚ್ಛತೆ. ಬೆಳಕು.ನೆರಳಿನ ವ್ಯವಸ್ಥೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಶಾಂತಿವಸ್ಥೆಯಿಂದ ಸ್ವಾಮಿಯ ರಥೋತ್ಸವಕ್ಕೆ ಜರುಗಲು ಕೈ ಜೋಡಿಸಬೇಕು ಎಂದು ಕಳಕಳಿ ಮನವಿ”
ಡಿ. ಸಿ ರುದ್ರಸ್ವಾಮಿ ಗೌಡ್ರು
ಕಾರ್ಯದರ್ಶಿಗಳು
ಶ್ರೀ ವೀರಭದ್ರ ಸ್ವಾಮಿ ಟ್ರಸ್ಟ್ (ರಿ)
ಕೊಡದಗುಡ್ಡ ಜಗಳೂರು ತಾಲೂಕು