ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು :– ‘ಬರಪೀಡಿತ ತಾಲ್ಲೂಕು’ ಎಂಬ ಹಣೆಪಟ್ಟಿ ಹೊಂದಿರುವ ಜಗಳೂರಿನಲ್ಲಿ ಎರಡು ವರ್ಷ ಗಳಿಂದ ಉತ್ತಮ ಮಳೆ ಸುರಿದು ಹಸಿರು ವಾತಾವರಣ ಸೃಷ್ಟಿ ಯಾಗುತ್ತಿದೆ. ಮಳೆ ಸುರಿದಂತೆಯೇ ರಾಜಕೀಯದ ಮೇಲಾಟವೂ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪಡಿಸಿ ಉಳಿದ ಪಕ್ಷಗಳು ಇಲ್ಲಿ ಅಷ್ಟಾಗಿ ನೆಲೆಯೂರಲು ಇದು ವರೆಗೆ ಸಾಧ್ಯವಾಗಿಲ್ಲ.
ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಅವರು ಮುಂಬರುವ- 2023 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಿಂದ ಏಕೈಕ ಆಕಾಂಕ್ಷಿಯಾಗಿದ್ದು,
ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಎಚ್.ಪಿ. ರಾಜೇಶ್.ಕೆ.ಪಿ ಪಾಲಯ್ಯ .ಚಿಕ್ಕಮನಹಟ್ಟಿ ಬಿ.ದೇವೇಂದ್ರಪ್ಪ. ರವಿಚಂದ್ರ. ಹನುಮಂತಪ್ಪ.ಎಮ್ ಇವರ ಪೈಪೋಟಿ ಕಂಡುಬಂದಿದೆ.
ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಬಂದಿದ್ದರೆ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಬಿಜೆಪಿ ಮೂಲಕ ರಾಜಕಾರಣಕ್ಕೆ ಇಳಿದವರು. ಈಗ ಎಸ್.ವಿ. ರಾಮಚಂದ್ರ ಬಿಜೆಪಿಯಲ್ಲಿದ್ದರೆ,ಎಚ್.ಪಿ. ರಾಜೇಶ್ ಕಾಂಗ್ರೆಸ್ ನಲ್ಲಿದ್ದಾರೆ.
2008ರಲ್ಲಿ ಎಸ್.ವಿ.ಆರ್ ಕಾಂಗ್ರೆಸ್ನಿಂದ, ಎಚ್.ಪಿ.ಆರ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಎಸ್ವಿಆರ್ ಗೆದ್ದು ಬಂದಿದ್ದರು. ನಂತರ ನಡೆದ ‘ಆಪರೇಶನ್ ಕಮಲ’ ಬೆಳವಣಿಗೆಯಲ್ಲಿ ಅವರು ಬಿಜೆಪಿಯತ್ತ ವಾಲಿದರು. ಅಂತೆಯೇ 2011ರಲ್ಲಿ ಉಪ ಚುನಾ ವಣೆ ನಡೆಯಿತು. ಬಿಜೆಪಿಯಿಂದ ರಾಮಚಂದ್ರ ಸ್ಪರ್ಧಿಸಿದರೆ, ರಾಜೇಶ್ ಬಂಡಾಯ ಎದ್ದು ಪಕ್ಷೇತರನಾಗಿ ಸ್ಪರ್ಧಿಸಿದ್ದರು. ವೈ. ದೇವೇಂದ್ರಪ್ಪ ಕಾಂಗ್ರೆಸ್ನಿಂದ ಕಣಕ್ಕಿಳಿ ದಿದ್ದರು. ರಾಮಚಂದ್ರ ಕೇವಲ 3,500 ಮತಗಳ ಅಂತರದಿಂದ ಗೆದ್ದು ಬಂದಿದ್ದರು. ರಾಜೇಶ್ 2 ನೇ ಸ್ಥಾನ ಪಡೆದರೆ,ವೈ ದೇವೇಂದ್ರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರೂ, 28 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.
ನಂತರ 2013ರ ಚುನಾವಣೆಯಲ್ಲಿ ರಾಜೇಶ್ ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ, ಎಸ್. ವಿ ರಾಮಚಂದ್ರ ಕೆಜೆಪಿಯಿಂದ ಕಣಕ್ಕಿಳಿ ದಿದ್ದರು.ಹೆಚ್. ಪಿ.ರಾಜೇಶ್ 37,000 ಮತಗಳ ಭಾರಿ ಅಂತರ ದಿಂದ ಗೆದ್ದು ಬಂದಿದ್ದರು. ರಾಮಚಂದ್ರ 2ನೇ ಸ್ಥಾನ ಪಡೆಯ ಬೇಕಾಯಿತು.ಇದೇ ಸಮಯದಲ್ಲಿ ಬಿಜೆಪಿಯ ಅಭ್ಯರ್ಥಿಗೆ 2,000 ಮತ ಕೂಡ ಸಿಕ್ಕಿರಲಿಲ್ಲ. ಬಿಜೆಪಿಗಿಂತ ಎರಡು ಪಟ್ಟು ಮತಗಳನ್ನು ಜೆಡಿಎಸ್ ಪಡೆದಿತ್ತು.
ನಂತರ 2018ರಲ್ಲಿ ಮತ್ತೆ ಇದೇ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಮ ಚಂದ್ರ 30,000 ಮತಗಳ ಭಾರಿ ಅಂತರದಿಂದ ಜಯಸಿದರೆ, ರಾಜೇಶ್ 2ನೇ ಸ್ಥಾನಕ್ಕೆ ತೃಪ್ತರಾಗುವಂತಾಯಿತು.
2023 ರಲ್ಲಿ ಮತ್ತೆ ಈ ಇಬ್ಬರೂ ಕಣಕ್ಕಿಳಿಯಲು ಸಿದ್ಧತೆ ಮಾಡಿ ಕೊಂಡಿದ್ದಾರೆ. ಎಸ್.ವಿ. ರಾಮಚಂದ್ರ ಅವರಿಗೆ ಪಕ್ಷದೊಳಗೆ ಪೈಪೋಟಿ ಇಲ್ಲ. ‘ರಾಮಚಂದ್ರ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿ’ ಎಂದು ಇತ್ತೀಚೆಗೆ ಜಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ಕೊಟ್ಟು ಹೋಗಿದ್ದರು.
ಇತ್ತೀಚಿಗೆ ನಡೆದ ಪ್ರಜಾಧನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣದ ವೇಳೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಐದು ಜನ ಅಭ್ಯರ್ಥಿಗಳಿದ್ದೀರಿ ನಮ್ಮ ಕಾಂಗ್ರೆಸ್ನಲ್ಲಿ ಐವರಲ್ಲಿ ಯಾರಿಗೆ ಆದರೂ ಟಿಕೆಟ್ ಕೊಟ್ಟರೆ ಭಿನ್ನಾಭಿಪ್ರಾಯಗಳಿಲ್ಲದಂತೆ ವೈಮನಸುಗಳಿಲ್ಲದಂತೆ ಪಕ್ಷಕ್ಕೆ ದುಡಿಯಬೇಕೆಂದು ಎಚ್.ಪಿ. ರಾಜೇಶ್. ಕೆ.ಪಿ. ಪಾಲಯ್ಯ. ಬಿ. ದೇವೇಂದ್ರಪ್ಪ, ರವಿಚಂದ್ರ. ಹನುಮಂತಪ್ಪ ಇವರಿಗೆ ಕಿವಿಮಾತು ಹೇಳಿ ಕರೆ ಕೊಟ್ಟು ಹೋಗಿದ್ದಾರೆ
” ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹಿಂದೆ ಜೆಡಿಎಸ್ನಿಂದ, ಸ್ಪರ್ಧಿ ಸಿದ್ದರು ಕೆ. ಪಿ ಪಾಲಯ್ಯ ಹಿಂದೆ ಬಿಎಸ್ಪಿಯಿಂದ ಸ್ಪರ್ಧಿಸಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಅನುಭವ ಇರುವವರು.”
ಈಗ 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟಿಗಾಗಿ . ಮಾಜಿ ಶಾಸಕ ಎಚ್ ಪಿ ರಾಜೇಶ್. ಕೆಪಿಸಿಸಿ ಎಸ್ಟಿ ಘಟಕದ ರಾಜ್ಯದ್ಯಕ್ಷ ಕೆ.ಪಿ ಪಾಲಯ್ಯ. ಕಾಂಗ್ರೆಸ್ ಮುಖಂಡರಾದ ಚಿಕ್ಕಮ್ಮನಟಿ ಬಿ ದೇವೇಂದ್ರಪ್ಪ ಜೆ.ಆರ್. ರವಿಚಂದ್ರ. ಎಂ.ಹನುಮಂತಪ್ಪ,ಅವರೂ ಅರ್ಜಿ ಸಲ್ಲಿಸಿ ಆಕಾಂಕ್ಷಿಗಳಾಗಿ ಟಿಕೆಟಿಗಾಗಿ ಕಾದು ಕೂತಿದ್ದಾರೆ
ಬೇರೆ ಪಕ್ಷಗಳಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಳ್ಳುವವರು ಜೆಡಿಎಸ್ ಕಡೆ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜೆಡಿಎಸ್ ಈ ಬಾರಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಯಾರು ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಉಳಿದ ರಾಜಕೀಯ ಪಕ್ಷ ಗಳಲ್ಲಿ ಯಾರಿಗೆ ಟಿಕೆಟ್ ಸಿಗೋಲ್ಲ ಅವರು ವೈ ಮನಸುಗೊಂಡು ಪಕ್ಷೇತರಗಲು ಸಿದ್ಧವಾಗಲಿದ್ದಾರೆ ಎಂದು ಕಾದು ನೋಡುವ ಪರಿಸ್ಥಿತಿ ಕ್ಷೇತ್ರದ ಜನತೆಗೆ ಎದುರಾಗಿದೆ
ಸದ್ಯಕ್ಕೆ ಬಿಜೆಪಿ–ಕಾಂಗ್ರೆಸ್ ಹಣಾಹಣಿಯೇ ಎಂದು ದೊಡ್ಡ ಮಟ್ಟದಲ್ಲಿ ಕಾಣಿಸುತ್ತಿದೆ.