ಪ್ರಜಾ ನಾಯಕ ವಿಶೇಷ ಸುದ್ದಿ -: ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಠಿಕೋನದಲ್ಲಿ ಪತ್ರಿಕಾ ರಂಗ: ಅಂಬೇಡ್ಕರ್ ಜಯಂತಿ ದಿನ “ಪ್ರಜಾ ನಾಯಕ” ಆನ್ಲೈನ್ ವೆಬ್ ಪೋರ್ಟಲ್ ನ ಲೋಗೋ ಬಿಡುಗಡೆ ಮತ್ತು ಸಂಪಾದಕೀ ಯಕ್ಕೆ ಪಾದಾರ್ಪಣೆ ಮಾಡಿ, ಸಾಗುವ ದಾರಿಯಲ್ಲಿನ ಏರಿಳಿತಗಳ ಕುರಿತಾಗಿ ಸಂಪಾದ ಕರ ಮನದಾಳದ ಮಾತು…!!!
ಆತ್ಮೀಯ ಪ್ರಿಯ ಓದುಗರೇ…ತಮಗೆ ಅನಂತ… ಅನಂತ … ನಮಸ್ಕಾರಗಳು..🙏🙏🙏
ನಾನು ಹೆಚ್.ಬಾಬು ಜಗಳೂರಿನಿಂದ ಕೂಗಳತೆಯ ದೂರದಲ್ಲಿ ರುವ ಕುಗ್ರಾಮವಾದ ಮರೇನಹಳ್ಳಿ
ಹೊನ್ನೂರಪ್ಪ ಉಮಾದೇವಿಯವರ ಪುತ್ರನಾಗಿ ಜನಿಸಿ,ವೃತ್ತಿಪರ ಶಿಕ್ಷಣ ಪಡೆದು ಡಾ.ಬಿ. ಆರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಪರಿಪಾಲಿಸುತ್ತಾ. ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೆಯ ರಂಗಕ್ಕೆ ಅಂಬೆಗಾಲಿಟ್ಟು ತಾಲೂಕಿನ ಸರ್ವ ಸಮುದಾಯಗಳ ಜನರ ಆಶೀರ್ವಾದ ಮತ್ತು ವಿಶ್ವಾಸ ಗಳಿಸಿ ಕೊಂಡು , ನಿಮ್ಮೆಲ್ಲರ ಸಹಾನುಭೂತಿ ಸಹಕಾರದಿಂದ ಸಂಜೆವಾಣಿ ದಿನಪತ್ರಿಕೆಯಲ್ಲಿ ವರದಿಗಾರನಾಗಿಯೂ ಕೆಲಸವನ್ನು ಪ್ರಾರಂಭಿಸಿದೆ.ಪ್ರಸಕ್ತ ಕೆಲಸಗಳ ತಲ್ಲಣ ಮತ್ತು ಸ್ಪರ್ಧಾಯುಗದ ಸೆಣೆಸಾಟದ ನಡುವೆಯೂ ನನ್ನ ಸಂಪಾದಕತ್ವದಲ್ಲಿ ಒಂದು ಕನ್ನಡ ದಿನ ಪತ್ರಿಕೆ ಆರಂಭಿಸಬೇಕೆಂಬ ಹಂಬಲ ನನ್ನಲ್ಲಿ ಕಾಡಿತು
ಬರದನಾಡಿನ ಬಡಜನರ ಬವಣೆಗಳನ್ನು ಸಾರ್ವಜನಿಕ ವಲಯ ದಲ್ಲಿನ ಜ್ವಲಂತ ಸಮಸ್ಯೆಗಳನ್ನು ಸಮಾಜಕ್ಕೆ ಎತ್ತಿ ಹಿಡಿಯುವ ಹಾಗೂ ಸರ್ವರಿಗೂ ಸಮ ಬಾಳು – ಸರ್ವರಿಗೂ ಸಮ ಪಾಲು ಎಂಬ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಅಳಿಲು ಸೇವೆ ಸಲ್ಲಿಸುವ ಹಂಬಲ ನನ್ನಲ್ಲಿ ಮೂಡಿತು.
ದಿನಾಂಕ -14 -4-2017 ರಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿ ಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯ ಸಮಾರಂಭದಲ್ಲಿ “ಪ್ರಜಾ ನ್ಯಾಯ” ಎಂಬ ಕನ್ನಡ ವಾರ ಪತ್ರಿಕೆ ಯನ್ನು ನನ್ನ ಸಂಪಾದಕತ್ವ ದಲ್ಲಿ ಆರಂಭಿಸಿದೆ.
ಒಂದು ಕೆಲಸದಲ್ಲಿ ನಿರತರಾಗಿರುವಾಗ ನೂರಾರು ಅಡೆತಡೆಗಳು ಸಹಜ ಎಂಬಂತೆ ನನಗೂ ಕೂಡ ಚೊಚ್ಚಲ ಪ್ರಥಮ ಪತ್ರಿಕೆಯ ಸಂಚಿಕೆಯನ್ನು ತರುವಾಗ ಸಾಕಷ್ಟು ಅಡೆತಡೆಗಳು ಅಡ್ಡಿಯಾದವು ಆದರೆ ನಿಮ್ಮೆಲ್ಲರ ಹಾರೈಕೆಯ ಕವಚ ನನ್ನನ್ನು ಎದೆಗುಂದಲು ಬಿಡಲಿಲ್ಲ.ನಿಮ್ಮೆಲ್ಲರ ಮಡಿಲಿಗಿಟ್ಟು ನಿರಾಳನಾಗಿ ಅದನ್ನು ಮುಂದು ವರಿಸುತ್ತಾ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಸಾರ್ವಜನಿಕರಿಗೆ ದಿನ ಸುದ್ದಿಯನ್ನು ಕೊಡ ಬೇಕೆಂಬುವ ಉದ್ದೇಶದಿಂದ ದಿನಪತ್ರಿಕೆ ಆರಂಭಿಸುವ ಚಿಂತನೆ ಮನದಲ್ಲಿ ಮೂಡಿತು. ಇದು ಅಕ್ಷರ ಸಹ ನಿಮ್ಮೆಲ್ಲರ ಪ್ರೋತ್ಸಾಹದ ಫಲ.
ದಿನಾಂಕ -15 -8-2020 ತಾಲೂಕು ಆಡಳಿತ ಏರ್ಪಡಿಸಿದ್ದ ಸ್ವಾತಂತ್ರ ದಿನಾಚರಣೆಯ ಸಮಾರಂಭದಲ್ಲಿ ನೂತನ “ಪ್ರಜಾ ನಾಯಕ” ಕನ್ನಡ ದಿನ ಪತ್ರಿಕೆಯ ಚೊಚ್ಚಲ ಸಂಚಿಕೆಯನ್ನು ತಮ್ಮ ಮುಂದೆ ತಂದಾಗ ತಾವುಗಳು ಶುಭಹಾರೈಸಿ ಜಗಳೂರಿನಲ್ಲಿ ಹೊಸ ಛಾಪು ಮೂಡಿಸಲು, ಉನ್ನತ ಶಿಖರಕ್ಕೆ ಬೆಳೆಯಲು ಸಹಕರಿಸದ ತಮಗೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ.
ಬದುಕನ್ನು ಕಟ್ಟಿ ಕೊಳ್ಳ ಲು ಹೊರಟ ನನಗೆ ಸಿರಿತನಕ್ಕಿಂತ ಬಡತನ ದ ನೋವಿನ ಅನು ಭವಗಳೇ ಹೆಚ್ಚಾಗಿ ಎದುರಾದವು ಮಾಡುವ ಪ್ರತಿ ಕೆಲಸದ ಯಶಸ್ವಿಗೆ ಸಾಕಷ್ಟು ಹರಸಾಹಸ ಪಡಬೇಕಾಯಿತು .ಭ್ರಷ್ಟಾಚಾರ ಲಂಚದ ಹೆಬ್ಬಾಗಿಲು,ಜಾತಿ ವ್ಯವಸ್ಥೆ ನನಗೆ ಪೆಡಂಭೂ ತವಾಗಿ ಕಾಡಿದವು.ಎಲ್ಲವನ್ನು ಮೆಟ್ಟಿ ನಿಂತು ನನಗೆ ಸಮಾಜ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬ ಸ್ವಯಂ ಅವಲೋಕನದಿಂದ ನನ್ನ ಹಿರಿಯ ಮತ್ತು ಕಿರಿಯ ಪತ್ರಕರ್ತರ, ಹಿತೈಷಿಗಳ ಸಲಹೆ, ಸಹಕಾರದಿಂದ, ಗುರು – ಹಿರಿ ಯರ ಆಶೀರ್ವಾದ, ಮಾರ್ಗದರ್ಶನ ಹಾಗೂ ಜಗಳೂರು ತಾಲೂಕಿ ನ ಸರ್ವ ಪಕ್ಷಗಳ ಮುಖಂಡರುಗಳ ಸರ್ವ ಸಂಘಟನೆ ಗಳ ಮತ್ತು ಜಾತ್ಯಾತೀತ ಮನಸ್ಸುಗಳ ಬೆಂಬಲ ನನ್ನಲ್ಲಿ ಸ್ಪೂರ್ತಿಯ ಚಿಲುಮೆ ಯಂತೆ ಪ್ರಜ್ವಲಿಸಿ, ಸ್ವಾವಲಂಬಿ ಬದುಕಿನ ಬಂಡಿ ಸಾಗಿಸಲು ತಳ ಹದಿಯ ಊರುಗೋಲಾದವು.
ಹೌದು ಪ್ರತಿನಿತ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿನ ಮುಗ್ಧ ರೈತ ರು,ಕಾರ್ಮಿಕರು . ಬಡವರು. ಮಹಿಳೆಯರು ಸರ್ಕಾರಿ ಕಛೇರಿ ಗಳಲ್ಲಿ ತಮ್ಮ ಜಮೀನಿನ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳ ಲು ಹತ್ತಾರು ಕಿ.ಮೀ ದೂರದಿಂದ ಹಸಿವನ್ನು ಲೆಕ್ಕಿಸದೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಡು ಬಿರುಬಿಸಿಲಿನಲ್ಲಿ ಸರ್ಕಾರಿ ಕಛೇರಿಗಳಿಗೆ ಬಂದಾ ಗ ಕಛೇರಿಗಳ ಮುಂದೆ ಇರುವಂತಹ ದಲ್ಲಾಳಿಗಳ ಲಂಚದ ಹಾವಳಿಯ ಮಧ್ಯೆಯೂ ಸರದಿಸಾಲಿನಲ್ಲಿ ನಿಂತು ಪ್ರಮಾಣ ಪತ್ರ, ಜಮೀನಿನ ದಾಖಲೆಗಳನ್ನು, ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ಗಳನ್ನು ಪಡೆಯುವ ಮುಗ್ಧತೆಯ ಬಂಧುಗಳ ಕಷ್ಟಕ್ಕೆ ನನ್ನ ಮನ ಮಿಡಿದು ಕಿಂಚಿತ್ತಾದರೂ ನೆರವಾಗಬೇಕು ಎಂಬ ಮಹದಾಸೆ ನನ್ನಲ್ಲಿ ಮೂಡಿತು.ಈ ದೆಸೆಯಿಂದ ಪತ್ರಿಕೆಯ ಮೂಲಕ ಸಮಾಜ ದಲ್ಲಿನ ಅನ್ಯಾಯವನ್ನು ಖಂಡಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸರ್ವರೂ ಕೈಜೋಡಿಸಿ ಎಂಬುದು ನನ್ನ ಆಶಯ…
ಬರಪೀಡಿತ ತಾಲೂಕಿನಲ್ಲಿ ಆರ್ಥಿಕ ಸಂಕಷ್ಟಗಳು ಬರಬಹುದು. ಆದರೆ ಹೃದಯ ವೈಶಾಲ್ಯತೆಗೆ ತುಳಿತಕ್ಕೆ ಒಳಗಾದವರನ್ನ ಮೇಲೆ ತ್ತುವ ಮನಸ್ಸುಗಳಿಗೆ ಕೊರತೆಯಿಲ್ಲ ” ಕಾಗೆ ಒಂದಗುಳ ಅನ್ನ ಕಂಡರೆ ಕರೆಯದೆ ತನ್ನ ಬಳಗವನ್ನ” ಎನ್ನುವಂತೆ ಇರುವ ಸಂಪ ನ್ಮೂಲಗಳಲ್ಲಿ ಹಂಚಿಕೊಂಡು ಸೌಹಾರ್ದಯುತ ಬದುಕು ಸಾಗಿ ಸುವ ಸಂಸ್ಕೃತಿ,ಸಂಸ್ಕಾರ ನಮ್ಮಲ್ಲಿರಬೇಕು.ಅಂತೆಯೇ ವಯಸ್ಸಿ ನಲ್ಲಿ ಕಿರಿಯನಾಗಿ ಆತ್ಮೀಯತೆಯ ಬಾಂಧವ್ಯ ಬೆಸಯುವಲ್ಲಿ ಹಿರಿ ಯರ ಸೌಹಾರ್ದತೆ ನನಗೆ ಸದಾ ಬೆಳಕಾಗಿ ನಿಂತಿದೆ.ತಮ್ಮ ಮಡಿಲಿ ನಲ್ಲಿ ನಾನು ಬೆಳೆಯಬೇಕು ಎಂಬುದು ನನ್ನ ಪುಟ್ಟ ಕನಸು.” ಜೀವ ನ ಎಂಬ ಪಯಣದಲಿ ಕನಸ್ಸುಗಳು ಸಾವಿರಾರು.ನನಸಾಗದ ಕನಸ್ಸುಗಳು,ಆಸೆಗಳು ನೂರಾರು.” ಎಂಬ ನಾಣ್ಣುಡಿಯಂತೆ ಅಲ್ಪ ಕನಸ್ಸುಗಳನ್ನು ಹೊತ್ತ ನನಗೆ ಅತ್ಯಲ್ಪ ಕನಸ್ಸುಗಳು ನಿಮ್ಮಿಂದ ಸಕರಾಗೊಂಡಿವೆ.
ಅದರಲ್ಲೂ ನನ್ನದೇ ಆದ ಪತ್ರಿಕೆಯ “ಪ್ರಜಾ ನಾಯಕ” ಶೀರ್ಷಿಕೆ ಯಡಿ ” ಆನ್ಲೈನ್ ವೆಬ್ ಪೋರ್ಟಲ್” ಬಿಡುಗಡೆಯನ್ನು ನನ್ನ ಸಂಪಾದಕತ್ವದಲ್ಲಿ ಆರಂಭಿಸಿರುವೆ.ಅದಕ್ಕೆ ತನ್ನದೇ ಆದ ಪರಿಶ್ರಮ ವನ್ನು ಹಾಕಿ ಕಳೆದ ಒಂದು ತಿಂಗಳಿನಿಂದ ನನ್ನ ಆತ್ಮೀಯ ಸ್ನೇಹಿತ ಸೈಯದ್ ವಾಸಿಂ ನೊಂದಿಗೆ ಒಡಗೂಡಿ ಕಷ್ಟಪಟ್ಟು “ಸಂವಿಧಾನ ಶಿಲ್ಪಿ” ಡಾ.ಬಿ.ಆರ್. ಅಂಬೇಡ್ಕರ್ ರವರ ವೈಶಿಷ್ಟ್ಯತೆಯನ್ನು ಹೊಂದಿರುವ “ಪ್ರಜಾ ನಾಯಕ ಲೋಗೋ” ತಯಾರಿಸಿ ಇಂದು ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ದಿನದಂದು ನಿಮ್ಮ ಮುಂದೆ ಲೋಕಾರ್ಪಣೆ ಮಾಡುವ ಪುಣ್ಯ ನನಗೆ ಸಿಕ್ಕಿರೋದು ತುಂಬಾ ಸಂತೋಷದ ವಿಷಯ. “ಪ್ರಜಾ ನಾಯಕ ವೆಬ್ ಪೋರ್ಟಲ್ ಹಾಗೂ ಅದರ ಲೋಗೋ “ ಯಶಸ್ವಿಯಾಗ ಲೆಂದು ಸದಾ ಸ್ಪಂದಿಸುವ ನನ್ನ ಹಿರಿಯ ಪತ್ರಕರ್ತರು ಮತ್ತು ಕಿರಿಯ ಪತ್ರ ಕರ್ತರು ಜನಪ್ರತಿನಿಧಿ ಗಳು ಮಾಜಿ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಹಾಗೂ ಹಿತೈಷಿಗಳು, ಸರ್ವ ಸಂಘಟನೆಯ ಮುಖ್ಯ ಸ್ಥರು ಎಲ್ಲಾ ಗುರು – ಹಿರಿಯರು, ಆತ್ಮೀಯ ಬಂಧುಗಳು ಸರ್ವರೂ ಸಹ ಈ ಹಿಂದಿನಂತೆ ಈಗಲೂ ನನಗೆ ಸಹಕಾರ ನೀಡುತ್ತೀರೆಂಬ ನಿರೀಕ್ಷೆ ನನ್ನದು..
🙏ಧನ್ಯವಾದಗಳು🙏
ಇಂತಿ
ಹೆಚ್. ಬಾಬು. ಮರೇನಹಳ್ಳಿ ಸಂಪಾದಕರು ಪ್ರಜಾ ನಾಯಕ ಕನ್ನಡ ದಿನಪತ್ರಿಕೆ ಹಾಗೂ ಸಂಜೆವಾಣಿ ಪತ್ರಿಕೆ ವರದಿಗಾರರು ಜಗಳೂರು
” ಸಾಧನೆಗೆ ವಯಸ್ಸು ಮುಖ್ಯವಲ್ಲ,ನಿರಂತರ ಕಾರ್ಯತತ್ಪರತೆಯ ಮನಸ್ಸು ಮುಖ್ಯ,ಎಂಬುದಕ್ಕೆ ಸಾಕ್ಷೀಕರಿಸುವಂತಿದೆ ಹೆಚ್.ಬಾಬು ರವರು ಇಂದು “ಪ್ರಜಾನಾಯಕ” ಎನ್ನುವ ವೆಬ್ ಪೋರ್ಟಲ್ ಲೋಗೊವನ್ನು ಲೋಕಾರ್ಪಣೆ ಮಾಡುತ್ತಿರುವುದು.ಪ್ರಜೆಗಳ ಏಳಿಗೆಗಾಗಿ ಪ್ರಜಾಪ್ರಭುತ್ವದ ಅಸ್ಮಿತೆಗಾಗಿ ದಣಿವರಿಯದೆ ದುಡಿದ “ಸಂವಿಧಾನದ ಶಿಲ್ಪಿ” ಡಾ :ಬಿ.ಆರ್. ಅಂಬೇಡ್ಕರ್ ಅವರನ್ನೇ ಹೆಗ್ಗುರುತಾಗಿರಿಸಿಕೊಂಡಿರುವ ಈ ಆನ್ಲೈನ್ ವೆಬ್ ಪೋರ್ಟಲ್ ಅವರ ತತ್ವ ಆದರ್ಶದ ಪ್ರತಿ ಕೃತಿಯಾಗಲಿ ಎಂದು ಆಶಿಸುತ್ತಾ ಶುಭ ಕೋರುವೆ “
ಅಣಬೂರು ಮಠದ ಕೊಟ್ರೇಶ್.ಸಂಪಾದಕರು ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ. ನವದೆಹಲಿ
“ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ದೇವರು ಸಾಕ್ಷಿಯಾಗಿ ನಿಲ್ಲುತ್ತಾನೆ ಹಾಗೂ ಅದಕ್ಕೆ ತಕ್ಕಂತಹ ಫಲಾಫಲಗಳನ್ನು ನೀಡು ತ್ತಾನೆ ಎಂಬುದನ್ನು ನಾವುಗಳೆಲ್ಲ ನಂಬುತ್ತೇವೆ.ಹಾಗೆ ಹೆಚ್.ಬಾಬು ಮರೇನಹಳ್ಳಿ ರವರ ಸತತ ಪ್ರಯತ್ನ,ಅಚ್ಚುಕಟ್ಟಾದ ಕಾರ್ಯತತ್ಪ ರತೆ, ಕ್ರಿಯಾಶೀಲತೆಯ ಮನದ ತುಡಿತವೆ ಇಂದು “ಪ್ರಜಾ ನಾಯಕ” ಎನ್ನುವ ವೆಬ್ ಪೋರ್ಟಲ್ ಯಶಸ್ವಿಯಾಗಿ ಸಾಗುತ್ತಿರು ವುದು.ಪ್ರತಿದಿನವೂ ತಾಜಾ – ತಾಜಾ ಸುದ್ದಿಗಳನ್ನು ಹೊತ್ತು ಬರುತ್ತಿರುವ ಈ ವೆಬ್ ಪೋರ್ಟಲ್ ಇಂದು ಡಾ: ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ತನ್ನದೇ ಆಗಿರುವಂತಹ ಒಂದು ವಿಶಿಷ್ಟ ಲೋಗೋ ದೊಂದಿಗೆ ಲೋಕಾರ್ಪಣೆ ಗೊಳ್ಳುತ್ತಿ ರುವುದು ಸಂತಸದ ವಿಷಯವಾಗಿದೆ. ಹೀಗೆ ಉತ್ತಮ ಸುದ್ದಿಯನ್ನು ಬಿತ್ತರಿಸುವುದರ ಜೊತೆಗೆ ಓದುಗರ ಮನಮುಟ್ಟಲಿ ಎಂದು ಬಯಸುವೆ. “
ಜಿ.ಎಸ್ ಚಿದಾನಂದಪ್ಪ.ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಗಳೂರು.ತಾ
“ಸಂವಿಧಾನ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಸಮಸಮಾಜ ಕ್ಕಾಗಿ ಚಾರಿತ್ರಿಕ ಚಳವಳಿ ನಡೆಸಿದ ಡಾ.ಬಾಬಾಸಾಹೇಬರು ಮೂಲ ತ ಪತ್ರಕರ್ತರಾಗಿದ್ದವರು.ಶೋಷಿತ,ಅಲಕ್ಷಿತ ಸಮುದಾಯಗಳ ವಿಮೋಚನೆಗಾಗಿ ತಮ್ನ ಪತ್ರಿಕೆಗಳ ಮೂಲಕ ಜಡ್ಡುಗಟ್ಟಿದ ಸಮಾಜ ಕ್ಕೆ ಚುರುಕು ಮುಟ್ಟಿಸುವ ಮೂಲಕ ತಳ ಸಮುದಾಯಗಳಲ್ಲಿ ಸದಾ ಎಚ್ಚರ ಮೂಡಿಸಲು ಪತ್ರಿಕಾರಂಗವನ್ನು ಅಂಬೇಡ್ಕರ್ ಅವರು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಇಂತಹ ಮಹಾನ್ ಮಾನವತಾವಾದಿಯ ಪ್ರೇರೇಪಣೆ ಪಡೆದ ಮರೇನಹಳ್ಳಿ ಹೆಚ್ ಬಾಬು ಸಂಪಾದಕತ್ವದ “ಪ್ರಜಾ ನಾಯಕ ವೆಬ್ ಪೋರ್ಟಲ್ ಲೋಗೋ ಅಂಬೇಡ್ಕವರ ಆಶಯಗಳೊಂದಿಗೆ ಆರೋಗ್ಯ ಕರ ಸಮಾಜ ನಿರ್ಮಾಣಕ್ಕೆ, ನೊಂದವರ, ಧ್ವನಿ ಇಲ್ಲದವರ,ಸಮಸ್ತ ಸಮಾಜದ ಹಿತ ಕಾಯುವ ಯಶಸ್ವಿ ಕಾವಲುಗಾರನಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸುತ್ತೇನೆ.ಸಹೋದರ ಬಾಬು ಅವರಿಗೆ ಅಭಿನಂದನೆಗಳು,”
ಡಿ.ಶ್ರೀನಿವಾಸ್,ಪ್ರಜಾವಾಣಿ ವರದಿಗಾರರು ಹಾಗೂ ಜಿಲ್ಲಾ ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲೆ
” ಪತ್ರಿಕಾರಂಗದ ಮೌಲ್ಯಗಳನ್ನು ಕಾಪಾಡುವಲ್ಲಿ ಬಾಬು ಅವರ ನೇತೃತ್ವದಲ್ಲಿ “ಪ್ರಜಾ ನಾಯಕ” ವೆಬ್ ಪೋರ್ಟಲ್ ಯಶಸ್ವಿ ಯಾಗಲಿ.ಅಂಬೇಡ್ಕರ್ ಅವರ ವಿಚಾರಗಳು,ಚಿಂತನೆಗಳು ಹೆಚ್ಚಿನ ಜನರಿಗೆ ತಲುಪಲಿ ಎಂದು ಪತ್ರಕರ್ತ ಬಾಬು ಅವರಿಗೆ ಆಶಿಸುತ್ತೇನೆ ಎಲ್ಲರಿಗೂ 134ನೇ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು “
ಬಿ.ಪಿ ಸುಭಾನ್ ಪತ್ರಕರ್ತರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲೆ
” ಜಗಳೂರು ತಾಲೂಕು ಮರೇನಹಳ್ಳಿ ಮೂಲದ ಬಾಬುರವರು ಸಕ್ರಿಯ ಪತ್ರಕರ್ತರಾಗಿ,ಸದಾ ಉತ್ಸಾಹದ ಚಿಲುಮೆಯಾಗಿ ಜನ ಮನದಲ್ಲಿ ಗುರುತಿಸಿಕೊಂಡವರು. ಇತ್ತೀಚಿನ ದಿನಗಳಲ್ಲಿ ಪ್ರಜಾನಾಯಕ ಪತ್ರಿಕೆ ಅಲ್ಲದೆ ಪ್ರಜಾನಾಯಕ ಅಂತರ್ಜಾಲ ಪುಟದ ಮೂಲಕ ಎಲ್ಲೆಡೆ ಹೆಸರಾಗಿದ್ದಾರೆ.ಈಗ ಅಂತರ್ಜಾಲ ಪುಟಕ್ಕೆ ಜನರಿಂದ ದೊರಕುತ್ತಿರುವ ಉತ್ತಮ ಬೆಂಬಲದ ಕಾರಣದಿಂದ ಬಾಬುರವರು ತಮ್ಮ ಅಂತರ್ಜಾಲ ಪುಟಕ್ಕೆ ತಮ್ಮದೇ ಆದ ಲಾಂಛನವನ್ನು ಬಿಡುಗಡೆಗೊಳಿಸುತ್ತಿರುವ ವಿಷಯ ತಿಳಿದು ಸಂತೋಷವಾಯಿತು. ಆಧುನಿಕ ತಂತ್ರಜ್ಞಾನದ ಮೂಲಕ ಇವರ ಪತ್ರಿಕೋದ್ಯಮ ಹಾಗೂ ಅಂತರ್ಜಾಲ ಸೇವೆಗಳು ಯಶಸ್ಸಿನ ಶಿಖರವನ್ನು ಕಾಣುವಂತಾಗಲಿ ಎಂದು ಶುಭ ಹಾರೈಸುವೆ.”
ಎನ್. ಟಿ.ಎರ್ರಿ ಸ್ವಾಮಿ ಸಾಹಿತಿ ಹಾಗೂ ನಿವೃತ್ತ ಕೆನರಾ ಬ್ಯಾಂಕ್ ಡಿ.ಎಂ ಜಗಳೂರು
“ನಾಯಕನಾಗುವುದು ಸುಲಭ ಆದರೆ ಪ್ರಜಾನಾಯಕನಾಗುವುದು ತುಂಬಾ ಕಷ್ಟ.ಇಂತಹ ಮಹಾತ್ಮರ ಸಾಲಿನಲ್ಲಿ ನಿಂತಿರುವ ನಮ್ಮ ಬೃಹತ್ “ಸಂವಿಧಾನದ ಶಿಲ್ಪಿ” ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರದ್ದೇ ಆದರ್ಶಗಳನ್ನು ಹೊಂದಿರುವ,ಅವರದ್ದೇ ಭಾವಚಿತ್ರವನ್ನು ಒಳಗೊಂಡಿರುವಂತಹ “ಪ್ರಜಾನಾಯಕ” ಎನ್ನುವ ವೆಬ್ ಪೋರ್ಟಲ್ ತುಂಬಾ ಅರ್ಥಪೂರ್ಣ ಹಾಗೂ ತಾಂತ್ರಿಕತೆಯ ನಿಲುವಾಗಿದೆ. ಸದಾ ಹೀಗೆ ವಿಶೇಷತೆಗಳ ಜಾಡನ್ನು ಹಿಡಿದು ಸಾಗುವ ಕ್ರಿಯಾಶೀಲತೆಯ ಪ್ರತಿಬಿಂಬವಾದ ಬಾಬುರವರಿಗೆ ಶುಭವಾಗಲಿ.ಎಲ್ಲರೂ ಈ ವೆಬ್ ಪೋರ್ಟಲ್ ಓದುವುದರ ಮೂಲಕ ಸದುಪಯೋಗವನ್ನು ಪಡೆದುಕೊಳ್ಳಿ.”
ಟಿ.ಬಸವರಾಜ್ ವಕೀಲರು ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಮರೇನಹಳ್ಳಿ
” ತಾಲೂಕು ಮಟ್ಟ ಮತ್ತು ಜಿಲ್ಲಾಮಟ್ಟದ ಕೆಲ ಪತ್ರಿಕೆಗಳು ಹಾಗೂ ಸಂಘ ಸಂಸ್ಥೆಗಳಿಗೆ ಹೆಸರಿನ ಅನ್ವಯ ಪತ್ರಿಕಾ ಟೈಟಲ್ ಲೋಗೋ ಸೃಷ್ಟಿಸಿ ಮಾಡಿಕೊಟ್ಟಿರುವ ಪತ್ರಿಕೆಗಳು ಯಶಸ್ವಿಯಾಗಿ ತಮ್ಮ ಕಾರ್ಯ ನಿರ್ವಹಿಸುತ್ತೇವೆ. ಅದೇ ರೀತಿ ” ಪ್ರಜಾ ನಾಯಕ ಆನ್ಲೈನ್ ವೆಬ್ ಪೋರ್ಟಲ್ ” ಹೆಸರಿಗೆ ತಕ್ಕಂತೆ ನಾನು ಮಾಡಿ ಕೊಟ್ಟಿ ರುವ ಲೋಗೋ ವನ್ನು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ದಿನದಂದು ಬಿಡುಗಡೆ ಮಾಡುತ್ತಿರುವ ಸಂಪಾದಕ ಎಚ್. ಬಾಬು ಅವರಿಗೆ ಅಭಿನಂದನೆಗಳು.”
ಸೈಯದ್ ವಾಸಿಮ್. ಪತ್ರಕರ್ತರು ಹಾಗೂ ಲೋಗೋ ವಿನ್ಯಾಸಕರು ವಿಲೇಜ್ ಇನ್ಫೋ ಟೆಕ್ನಾಲಜಿ ಆನ್ಲೈನ್ ಮೀಡಿಯಾ ಸೊಲ್ಯೂಷನ್ಸ್ ಜಗಳೂರು.
“ಜನಗಳೊಟ್ಟಿಗೆ ಹೊಂದಿಕೊಂಡು ಬದುಕುವ ನಮಗೆ ಜನರೊಂದಿ ಗೆ ಸಂಪರ್ಕ ಮಾಡಲು ಮಾಧ್ಯಮಗಳು ತುಂಬಾ ಸಹಾಯಕಾರಿ .ಜನರ ನಿರೀಕ್ಷೆ ಮತ್ತು ನಿಲುವುಗಳಿಗೆ ತಕ್ಕಂತೆ ತಮ್ಮ ವಿಚಾರಗಳನ್ನು ಸಹ ಅಪ್ ಡೇಟ್ ಮಾಡಿಕೊಂಡು ಸಮಾಜದ ಎಲ್ಲಾ ವರ್ಗದವರಿ ಗೂ ಸ್ಪಂದಿಸುವುದು ಮತ್ತು ವಿಷಯ ಬಿತ್ತರಿಸುವುದು ಮಾಧ್ಯಮ ಮಿತ್ರರ ಕರ್ತವ್ಯವಾಗಿದೆ. ಇಂತಹ ಕರ್ತವ್ಯವನ್ನು ಸದಾ ಪಾಲಿಸುತ್ತ ಸಾಗುವವರು ಎಂದಿಗೂ ಚೈತನ್ಯದಾಯಕವಾಗಿ ನಿಲ್ಲುತ್ತಾರೆ.ಬಾಬು ರವರು ಇಂದು ಬಿಡುಗಡೆಗೊಳಿಸುತ್ತಿರುವ ವೆಬ್ ಪೋರ್ಟಲ್ ಲೋಗೋ ಒಂದು ಹೊಸ ಪ್ರಯತ್ನ. ಅವರ ಇಂತಹ ಪ್ರಯತ್ನಕ್ಕೆ ಯಶಸ್ಸು ಲಭಿಸಲಿ. ಅಂಬೇಡ್ಕರ್ ಅವರ ಜನ್ಮದಿನದಂದು ಬಿಡುಗಡೆಗೊಳಿಸುತ್ತಿರುವ ಲೋಗೋ ಅವರ ಭಾವಚಿತ್ರವನ್ನು ಹೊಂದಿರುವುದು ತುಂಬಾ ವಿಶೇಷವಾಗಿದೆ.ಈ ವೆಬ್ ಪೋರ್ಟಲ್ ಜನರಿಗೆ ಉತ್ತಮ ಸಂದೇಶವನ್ನು ನೀಡಲಿ ಹಾಗೂ ಉತ್ತಮ ಕಾರ್ಯಗಳಿಗೆ ಸಹಕಾರಿಯಾಗಲಿ. ಬಾಬು ರವರಿಗೆ ಇಂತಹ ಕೆಲಸಗಳನ್ನು ಮಾಡಲು ದೇವರು ಹೆಚ್ಚು ಹೆಚ್ಚು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಾ ಶುಭಾಶಯಗಳುನ್ನು ಕೋರುತ್ತಿದ್ದೇನೆ.”
ಸಂತೋಷ್ ಕುಮಾರ್. ಜಿ ತಹಸಿಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಜಗಳೂರು ತಾಲೂಕು
ಪತ್ರಿಕಾ ಮಾಧ್ಯಮ ಎನ್ನುವುದು ಸಂವಿಧಾನದ ನಾಲ್ಕನೇ ಕಣ್ಣಿದಂತೆ ಯಾರಿಗೂ ಕಾಣದಂತ ಸೂಕ್ಷ್ಮ ಮತ್ತು ಸಂವೇದನಾಶೀಲ ವಿಚಾರ ಗಳು ಪತ್ರಿಕಾ ಮಾಧ್ಯಮವರಿಗೆ ಗೋಚರಿಸುತ್ತವೆ. ಮಾಧ್ಯಮಗಳು ಇಂದು ತುಂಬಾ ವೇಗವಾಗಿ ಚಲಿಸುತ್ತಿವೆ. ಕ್ಷಣಮಾತ್ರದಲ್ಲಿ ಇಡೀ ಪ್ರಪಂಚದ ವಿಚಾರಗಳನ್ನು ಒಂದೆಡೆ ಸಂಗ್ರಹಿಸುವಂತಹ ತಾಂತ್ರಿಕ ಶಕ್ತಿಯನ್ನು ಹೊಂದಿವೆ. ಪೆನ್ನು, ಪೇಪರ್, ಅನ್ನು ಬಳಸದೆ ಆನ್ಲೈನ್ ನಲ್ಲಿ ಸುದ್ದಿಯನ್ನು ಬಿತ್ತರಿಸುವ ಹಾಗೂ ಓದುವಂತಹ ಪ್ರವೃತ್ತಿಯಲ್ಲಿ ನಾವಿದ್ದೇವೆ. ಇಂತಹ ಒಂದು ಪ್ರಯತ್ನಕ್ಕೆ ನಾವು ಹೊಂದಿ ಕೊಂಡಾಗ ಮಾತ್ರ ಕೆಲವೇ ನಿಮಿಷಗಳಲ್ಲಿ ಇಡೀ ಜಗತ್ತನ್ನು ತಲುಪ ಬಹುದು.ಇಂತಹ ಪ್ರಯತ್ನದ ಮಗುವಾಗಿ ಇಂದು ತಮ್ಮೆಲ್ಲರ ಮುಂದಿರುವ ಈ ವೆಬ್ ಪೋರ್ಟಲ್.ಇಂದು ವೆಬ್ ಪೋರ್ಟಲ್ ಲೋಗೋ ಲೋಕಾರ್ಪಣೆ ಗೊಳ್ಳುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ.ಇಂಥ ಒಂದು ಪ್ರಯತ್ನದಲ್ಲಿ ಸದಾ ಕ್ರಿಯಾಶೀಲತೆ ಯನ್ನು ಹೊಂದಿದ್ದು ಯಶಸ್ಸಿನ ಹೆಜ್ಜೆಯನ್ನು ಇಡುತ್ತಿರುವಂತಹ ಬಾಬುರವರಿಗೆ ಅಭಿನಂದನೆಗಳು. ಅಂಬೇಡ್ಕರ್ ಅವರ ಚಿತ್ರವಿರುವುದು “ಪ್ರಜಾನಾಯಕ “ಎನ್ನುವ ಹೆಸರಿಗೆ ಸೂಕ್ತವಾಗಿ ಹೊಂದಾಣಿಕೆಯಾಗುತ್ತಿದೆ. ಅಂತೆಯೇ ಸುದ್ದಿಯೂ ಸಹ ಹಾಗೆ ಜನರನ್ನು ಮುಟ್ಟಲಿ ಎನ್ನುವ ಆಶಯದೊಂದಿದೆ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
ಬಿ.ಮಹೇಶ್ವರಪ್ಪ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಜಗಳೂರು
“ಡಾ ಬಿ.ಆರ್ ಅಂಬೇಡ್ಕರ್ ಅವರ ಒಳಗೊಂಡಂತಹ “ಪ್ರಜಾ ನಾಯಕ” ವೆಬ್ ಪೋರ್ಟಲ್ ಲೋಗೋ ಸಂವಿಧಾನ ಶಿಲ್ಪಿ ಅವರ ಜನುಮದಿನದಂದು ಅನಾವರಣಗೊಳ್ಳುತ್ತಿರುವ ನನಗೆ ಸಂತೋಷ ಆ ವೆಬ್ ಪೋರ್ಟಲ್ ಉನ್ನತ ಮಟ್ಟಕ್ಕೆ ಹೆಸರುವಾಸಿಯಾಗಿ ಸಮಾಜದಲ್ಲಿ ಕಾನೂನಿನಡಿ ನ್ಯಾಯ ಕಲ್ಪಿಸುವ ನಿಷ್ಪಕ್ಷಪಾತ, ಸಮಾಜಮುಖಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನರಿಗೆ ನ್ಯಾಯ ಸಮ್ಮತ ಧರಕಿಸಿ ಕೊಡಲಿ ಎಂಬುದೇ ನಮ್ಮ ಆಶಯ
ಶ್ರೀನಿವಾಸ್.ಪೊಲೀಸ್ ಇನ್ಸ್ಪೆಕ್ಟರ್ ಜಗಳೂರು ಪೊಲೀಸ್ ಠಾಣೆ
“ಪ್ರಜಾನಾಯಕ ಆನ್ಲೈನ್ ವೆಬ್ ಪೋರ್ಟಲ್ ಲೊಗೋ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರದ ವಿನ್ಯಾಸದೊಂದಿಗೆ ಇರುವುದು ಹೆಮ್ಮೆಯ ವಿಷಯ .ಇದು ನೊಂದ ಶೋಷಿತ ಪ್ರಜೆಗಳ ಹಿತಕಾಯುವಂತಿರಲಿ ಸಮಾಜದ ಸ್ಯಾಸ್ಥ್ಯತೆ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಗೈಯಬೇಕಿದೆ.ಜ್ವಲಂತ ಸಮಸ್ಯೆಗಳ ಧ್ವನಿಯಾಗಿ ರಾಜಕೀಯ ವಿಶ್ಲೇಷಣೆಗಳ ಅಂಕಣಗಳು ಹೊರಹೊಮ್ಮಲಿ ಜನಸಾಮಾನ್ಯರ ನ್ಯಾಯಪರ ಬಿತ್ತರವಾಗುವ ಮೂಲಕ ಸಮಾಜದ ಅಸ್ಮೀಯತೆ ಉಳಿಸಿಕೊಳ್ಳಬೇಕಾಗಿದೆ ನನ್ನ ಆತ್ಮೀಯ ಸಹೋದರ ಬಾಬು ಅವರಿಗೆ ಅಭಿನಂದನೆಗಳು”
ಮಂಜುನಾಥ್ ಮಾದಿಹಳ್ಳಿ ಪ್ರಗತಿಪರ ಹೋರಾಟಗಾರರು