ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬೀಗಜಡಿದು ರೈತರು ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳ ಹಿಂದೆ ರಾಗಿ ಖರೀದಿಸಿದ್ದು.ಬಿಲ್ಲು ಹಾಕಿಲ್ಲ, ಹಣಪಾವತಿಸದೆ ಅಧಿಕಾರಿಗಳು ವಿಳಂಬನೀತಿ ಅನುಸರಿ ಸುತ್ತಿ ದ್ದಾರೆ ಸರಕಾರ ಬಡ ರೈತರ ಅನುಕೂಲಕ್ಕಾಗಿ ರಾಗಿ ಖರೀದಿ ಕೇಂದ್ರ ತೆರೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತೊಂದೆ ಡೆ ಮದ್ಯವರ್ತಿಗಳ ಹಾವಳಿಯಿಂದ ಸರಕಾರದ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿ ರೈತರು ಕಂಗಾಲಾ ಗುತ್ತಿದ್ದಾರೆ.ಅಲ್ಲದೆ ಎಪಿಎಂಸಿ ಬಗ್ಗೆ ಇರುವ ನಂಬಿಕೆ ಕಳೆದು ಕೊಳ್ಳುತ್ತಿದ್ದಾರೆ.ಕೂಡಲೇ ಹಣಪಾವತಿಸದಿದ್ದರೆ ಹೊರಾಟ ನಡೆಸಲಾಗುವುದು ಎಂದು ಗಡಿಮಾಕುಂಟೆ,ಚಿಕ್ಕ ಬನ್ನಿ ಹಟ್ಟಿ. ಕೆಚ್ಚೇನ ಹಳ್ಳಿ ಮೆದಿಕೇರನಹಳ್ಳಿ. ಬಸಪ್ಪನಹಟ್ಟಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಎಫ್ ಐಡಿ,ಇತರೆ ದಾಖಲೆಗಳನ್ನು ಪರಿಶೀಲಿಸಿ ಹಣ ಪಾವತಿಸಲು ಎಪಿಎಂಸಿ ಸಿಬ್ಬಂದಿಗಳಿಗೆ ಸೂಚಿಸಿದರು.ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ಬಸವರಾಜ, ರವಿಕುಮಾರ, ಹೊಸಕೆರೆ ಕಲ್ಲೇಶ್,ಗೌರಿಪುರಸುರೇಶ್, ಉದ್ಘಟ್ಟ ಬಸವರಾಜ್, ಸೇರಿದಂತೆ ಇದ್ದರು.