ಪ್ರಜಾ ನಾಯಕ ಸುದ್ದಿ ಜಗಳೂರು:-ಸಮರ್ಪಕ ನಿರಂತರ ವಿದ್ಯುತ್ ಪೂರೈಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿ ರು ಸೇನೆ ಹುಚ್ಚವ್ವನ ಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತ ನಾಡಿ,ತಾಲೂಕಿನಲ್ಲಿ ಬರ ಆವರಿಸಿದ್ದು ರೈತರು ಬೋರ್ ವೆಲ್ ಗಳ ನ್ನೇ ಅವಲಂಬಿಸಿದ್ದು.ಪ್ರತಿದಿನ 7 ಗಂಟೆಗಳ ಕಾಲ ಸಮರ್ಪಕ ವಿದ್ಯು ತ್ ಪೂರೈಸಲು ಸರಕಾರದ ಆದೇಶ ವಿದ್ದರೂ ಸಹ ಕೇವಲ 4 ಗಂಟೆಗಳಕಾಲ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ದಿನಕ್ಕೆ ಕೇವಲ 2ಗಂಟೆಗಳ ಕಾಲಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿರುವುದು ರೈತರ ಸಂಕಷ್ಟದ ಗಾಯದಮೇಲೆ ಬರೆ ಎಳೆದಂತಾಗಿದೆ.
ಬರಪೀಡಿತ ಪಟ್ಟಿಯಲ್ಲಿದ್ದು. ಬಿತ್ತಿದ ಬೆಳೆಗಳು ವರುಣನ ಅವಕೃಪೆ ಯಿಂದ ಸಂಪೂರ್ಣ ಒಣ ಗಿವೆ.ಇಂತಹ ಸಂಗ್ಧಿದ್ದ ಪರಿಸ್ಥಿತಿಯಲ್ಲಿ ರೈತರೊಂದಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದು ಸರಿ ಯಲ್ಲ ಕೂಡಲೇ ದಿನಕ್ಕೆ 7 ತಾಸು ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂಎಇಇ ಸುಧಾಮಣಿ,ಕೂ ಡಲೇ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ರವಾನಿಸಿ ಮೇಲಾಧಿ ಕಾರಿಗಳ ಸಲಹೆಯಂತೆ ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಪಟ್ಟಣದ ಅಂಬೇಡ್ಕರ್ ಭವನದಿಂದ ಪ್ರಮುಖ ಬೀದಿಗಳಲ್ಲಿ ರೈತ ರು ಮಾನವ ಸರಪಳಿಯೊಂದಿಗೆ ಸರಕಾರದ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತದ ಮೂಲಕ ನೂತನ ಬೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿ.ಎಂ.ಹೊಳೆ,ಪದಾಧಿಕಾರಿಗಳಾದ ಸತೀಶ್ ಗೌಡ ಗೊಂಡನಹಳ್ಳಿ,ರಾಜನಹಟ್ಟಿ ರಾಜು,ವಿರೇಶ್ ಚಿಕ್ಕಬನ್ನಿಹಟ್ಟಿ, ಸಹ ದೇವರೆಡ್ಡಿ,ಶರಣಪ್ಪ,ಪ್ರಹ್ಲಾದಪ್ಪ,ಯರಲ್ಲಕಟ್ಟೆ ಕೆಂಚಪ್ಪ, ತಿಪ್ಪೇ ಸ್ವಾಮಿ, ಪರಸಪ್ಪ,ಪಾಪಣ್ಣ,ನಾಗರಾಜ್,ಹೊನ್ನೂರ್ ಅಲಿ, ಬಸಣ್ಣ, ಮಲ್ಲೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.