ಮಾಸದ ಉದ್ದೇಶ
ಕಣ್ಣುಗಳ ಬಗ್ಗೆ ಸರಿಯಾದ ಆರೈಕೆ, ನಿಯಮಿತ ತಪಾಸಣೆ, ಕಣ್ಣುಗಳ ಆರೋಗ್ಯದ ಬಗ್ಗೆ ಪ್ರಮುಖ ವಿಷಯಗಳ ಬಗ್ಗೆ ಅರಿವು ಮೂಡಿಸು ವುದು ಭಾರತ ಸರಕಾರದ ಧ್ಯೇಯ.
೧. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಸುಮಾರು ೨.೨ ಶತಕೋಟಿ ಜನರಿಗೆ ದೃಷ್ಟಿ ದೋಷವಿದೆ.
೨. ಕಣ್ಣಿನ ಪೊರೆ/ಗ್ಲುಕೋಮಾದಂತಹ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದ್ದರೂ ನಿರ್ಲಕ್ಷ್ಯ, ತಿಳುವಳಿಕೆ ಕೊರತೆ ಕಾರಣ ಕುರುಡುತನದ ಪ್ರಕರಣಗಳು ಹೆಚ್ಚಿವೆ.
೩. ಈ ಬಗ್ಗೆ ಜಾಗೃತಿ ನೀಡುವುದೇ ಸಪ್ತಾಹದ ಉದ್ದೇಶ. ಇದರಲ್ಲಿ ನೇತ್ರ ಆರೈಕೆ, ತಪಾಸಣೆ ಬಗ್ಗೆ ಸರಕಾರಿ, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಇಡೀ ವಾರ ಶಿಬಿರಗಳಿರುತ್ತವೆ. ಅದರ ಸದುಪಯೋಗ ಪಡೆದುಕೊಳ್ಳಿ.
೪. ಐಎಪಿಬಿ (ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್ ನೆಸ್ ವಿಷನ್-ಅಟ್ಲಾಸ್)ದ ನೀಡಿರುವ ಮಾಹಿತಿಯಿದು:
– ಪ್ರಪಂಚದಾದ್ಯಂತ ಸುಮಾರು ೪೩ ಮಿಲಿಯನ್ ಜನರು ಕುರುಡರಿದ್ದಾರೆ.
– ೨೯೫ ಮಿಲಿಯನ್ ಜನರಿಗೆ ಮಧ್ಯಮ ಅಥವಾ ತೀವ್ರ ದೃಷ್ಟಿಹೀನತೆಯಿದೆ.
– ಭಾರತದಲ್ಲಿ ಪ್ರತಿವರ್ಷ ಸುಮಾರು ೨೦ ಲಕ್ಷ ದೃಷ್ಟಿ ದೋಷ ಪ್ರಕರಣ ದಾಖಲಾಗುತ್ತವೆ.
– ಅದರಲ್ಲಿ ಸುಮಾರು ೭೩ ಪ್ರತಿಶತದಷ್ಟು ಪ್ರಕರಣಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಅದಕ್ಕೆ ತಕ್ಕ ಚಿಕಿತ್ಸೆ, ಕಾಳಜಿಯನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಲೇಬೇಕು.
ದೃಷ್ಟಿದೋಷಕ್ಕೆ ಕಾರಣ?
೧. ಕಣ್ಣಿನ ಪೊರೆ, ಗ್ಲುಕೋಮಾದ ಬಗ್ಗೆ ಮಾಹಿತಿ ಕೊರತೆ.
೨. ಕಳಪೆ ಜೀವನಶೈಲಿ, ಕಳಪೆ ಆಹಾರ (ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಚಿಪ್ಸ್ ಇತ್ಯಾದಿ)
೩. ಅತಿಯಾದ ಟಿವಿ, ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ.
ಕಣ್ಣುಗಳ ರಕ್ಷಣೆ ಹೇಗೆ?
೧. ಪ್ರತಿದಿನವೂ ನಿಯಮಿತವಾಗಿ ನಿದ್ದೆ ಮಾಡಿ,
೨. ಡ್ರೈ ಫ್ರೂಟ್ಸ್, ಅಗಸೆ, ಸೆಣಬಿನ ಬೀಜದಂತ ದ್ವಿದಳ ಧಾನ್ಯ ಸೇವಿಸಿ.
೩. ನಿಂಬೆ, ಕಿತ್ತಳೆ ಹಣ್ಣುಗಳನ್ನು ಆಗಾಗ ಸೇವಿಸಿ.
೪. ಹಸಿರು ಎಲೆ, ತರಕಾರಿ ತಿನಿ(ಪಾಲಕ್, ಎಲೆಕೋಸು, ಕ್ಯಾರೇಟ್)
೫. ಮೀನುಗಳನ್ನು ತಿನ್ನುವುದೂ ಕಣ್ಣಿಗೆ ಒಳ್ಳೆಯದು.
ನಾವೂ ಕಣ್ಣಾಗೋಣ
ಹುಟ್ಟು ಆಕಸ್ಮಿಕ, ಮರಣ ಖಚಿತ. ನಮ್ಮ ದೇಹಾಂತ್ಯದ ನಂತರ ನಮ್ಮ ಕಣ್ಣುಗಳು ಇಬ್ಬರು ದೃಷ್ಟಿಹೀನರ ಬಾಳಿಗೆ ಬೆಳಕಾಗುತ್ತವೆ. ಆದ್ದರಿಂದ ಅಗತ್ಯವಾಗಿ ನಿಮ್ಮ ಕಣ್ಣುಗಳನ್ನು ದಾನ ಮಾಡೋಣ. ನಮ್ಮ ಜೀವ ಮತ್ತು ಜೀವನಕ್ಕೆ ಸಾರ್ಥಕತೆಯ ಸ್ಪರ್ಶ ನೀಡೋಣ.
ಪ್ರೀತಿಯಿಂದ
-ಡಾ. ರವಿಕುಮಾರ್ ಟಿ.ಜಿ.
ಮುಖ್ಯಸ್ಥರು,
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಾವಣಗೆರೆ