ಪ್ರಜಾ ನಾಯಕ ಸುದ್ದಿ ಜಗಳೂರು :-ಪಟ್ಟಣದ ಅಶ್ವತ್ಥರೆಡ್ಡಿ ನಗರದ ಅಲೆಮಾರಿ ಸಮುದಾಯದ ಬಡ ಕುಟುಂಬದ ಮಕ್ಕಳಿಗೆ ಹಣ್ಣು, ಬ್ರೆಡ್, ವಿತರಿಸುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಹಾಯ ಕ ನಿರ್ದೇಶಕ ಹಾಗೂ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ ಅವರ ಹುಟ್ಟುಹಬ್ಬವನ್ನು ಅಭಿಮಾನಿಗ ಳೊಂದಿ ಗೆ ಸರಳವಾಗಿ ಆಚರಿಸಿಕೊಂಡರು.
ಹಣ್ಣು ಬ್ರೆಡ್ ವಿತರಿಸಿ ನಂತರ ಬಿ.ಮಹೇಶ್ವರಪ್ಪ ಮಾತನಾಡಿ, ನಾನೊಬ್ಬ ಬಡಕುಟುಂಬದ ಹಿನ್ನೆಲೆಯಿಂದ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಸೇರ್ಪಡೆ ಗೊಂಡು ನಂತರ ಪ್ರಥಮ ದರ್ಜೆ ಸಹಾಯಕ,ಸಹಾಯಕ ನಿರ್ದೇಶಕ ನಾಗಿ ಜಗಳೂರು ತಾಲೂಕಿನಲ್ಲಿ ಕರ್ತವ್ಯ ಪೂರ್ಣ ಗೊಳಿಸಿ ವಯೋನಿವೃತ್ತಿ ಹೊಂದಿದ ತೃಪ್ತಿ ನನಗಿದೆ.ತಾಲೂಕಿನ ಲ್ಲಿ ನನ್ನ ಕೈಗೆಟುಕುವಷ್ಟು ಬಡವರ,ವಿದ್ಯಾರ್ಥಿಗಳ,ಕಾರ್ಮಿಕ ವರ್ಗಕ್ಕೆ ನ್ಯಾಯ ಕಲ್ಪಿಸಿರುವೆ.ಕ್ಷೇತ್ರದ ಜನತೆಯ ಮೇಲಿನ ಅಪಾರ ಅಭಿಮಾನಕ್ಕೆ ನಾನು ಚಿರ ಋಣಿ,ಜಗಳೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ.ದೇವೇಂದ್ರಪ್ಪ ಅವರ ಸಹಕಾರದಿಂದ ಇದೀಗ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾ ರ್ಪಣೆಮಾಡಿದ್ದು.ಜನರ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.
ಈ ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಜಗಳೂರು ತಾಲೂಕಿನಲ್ಲಿ ದಶಕಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಅವರು ಸರ್ಕಾರದ ಇಲಾಖೆಯ ಅನುದಾನ ಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಪರಿ ಶಿಷ್ಟ ಸಮುದಾಯಗಳಿಗೆ ನ್ಯಾಯ ಒದಗಿಸುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ ಅವರ ಆಯುಷ್ಯ,ಆರೋಗ್ಯ ದ್ವಿಗುಣವಾಗಲಿ ಎಂದು ಹಾರೈಸಿದರು.
ಸರ್ಕಾರಿ ಹುದ್ದೆ ಶಾಶ್ವತವಲ್ಲ,ಪ್ರಾಮಾಣಿಕ ಸೇವೆ ಅಂತಃಕರಣ ಶಾಶ್ವತ :- ಯಾವುದೇ ಅಧಿಕಾರಿಗೆ ಸರ್ಕಾರಿ ಹುದ್ದೆ ಶಾಶ್ವತ ವಲ್ಲ. ಪ್ರತಿಯೊಬ್ಬ ನೌಕರನಿಗೆ ವಯೋನಿವೃತ್ತಿ ಸಹಜವಾಗಿದೆ. ಆದರೆ ಅಧಿಕಾರವಿರಲಿ,ಇಲ್ಲದಿರಲಿ ಬಡವರ ಕಷ್ಟಗಳಿಗೆ ಕಂಬನಿ ಮಿಡಿ ಯುವ,ಸಮಯೋಚಿತವಾಗಿ ಸಹಾಯಸ್ತ ಚಾಚುವ,ಹೃದಯ ಶ್ರೀಮಂತಿಕೆ ಮೈಗೂಡಿಸಿಕೊಂಡರೆ ಜೀವನದಲ್ಲಿ ಸಾರ್ಥಕತೆ ಮೆರೆದಂತೆ.ಸಮಾಜಕ್ಕೆ ನನ್ನ ಅಲ್ಪ ಕಾಣಿಕೆಯ ಫಲವಾಗಿ ಅನಾ ರೋಗ್ಯದಿಂದ ಪಾರಾಗಿ.ಜನರ ಮಧ್ಯೆ ನೆಮ್ಮದಿಯ ಬದುಕುಸಾಗಿ ಸುತ್ತಿರುವೆ ಯಾರೊಬ್ಬರಿಗೂ ಅನ್ಯಾಯವೆಸಗಿದರೆ ಅದರಿಂದ ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ನಾಮ ನಿರ್ದೇಶಿತ ಸದಸ್ಯ ಅಲೆ ಮಾರಿ ಸಮುದಾಯದ ಮುಖಂಡ ಕುರಿ ಜಯಣ್ಣ,ಪ.ಪಂ ಮಾಜಿ ಅಧ್ಯಕ್ಷ ಮಂಜುನಾಥ್,ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ,ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜಯಲಕ್ಷ್ಮಿ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಕೆಳಗೋಟೆ ಅಹಮ್ಮದ್ ಅಲಿ, ಮುಖಂಡರಾದ ಸತೀಶ್.ಗಿರೀಶ್.ಸೇರಿದಂತೆ ಇದ್ದರು.