ಜಗಳೂರು ಸುದ್ದಿ:- ಫೆಬ್ರುವರಿ 25ರಂದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೆ ಕೈಜೋಡಿಸಬೇಕು ಕಸಾಪ ಸಮಿತಿ ಕಾರ್ಯಾಧ್ಯಕ್ಷ ಎನ್ ಟಿ ಎರ್ರಿಸ್ವಾಮಿ ಕರೆ ನೀಡಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕಸಾಪದಿಂದ ನಡೆದ ಪತ್ರಿಕಾ ಗೊಷ್ಠಿಯನ್ನುದ್ದೇಶಿಸಿ ನಂತರ ಮಾತನಾಡಿದ ಅವರು ಬರದ ನಾಡಿನಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ಎರಡು ದಶಕಗಳ ನಂತರ ಜರುಗಲಿದ್ದು.ಸಮ್ಮೇಳನದ ಅಧ್ಯಕ್ಷತೆ 36 ಕೃತಿಗಳನ್ನು ರಚಿಸಿದ ಪ್ರೋ.ಎಚ್.ಲಿಂಗಪ್ಪ,ಮಹಾ ಪೋಷಕರಾಗಿ ಸಂಸದ. ಜಿ.ಎಂ ಸಿದ್ದೇಶ್ವರ್.ಗೌರವಧ್ಯಕ್ಷತೆಯನ್ನು ಎಸ್ ವಿ.ರಾಮಚಂದ್ರ, ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಜಿ ಉದ್ಘಾಟನೆಯನ್ನು ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ, ಮುಸ್ಟೂರು ಓಂಕಾರ ಹುಚ್ಚಲಿಂಗಸ್ವಾಮಿ ದಾಸೋಹ ಮಠದ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟ್ಟಿ ಬಿ.ದೇವೇಂದ್ರಪ್ಪ.ತಾಲೂಕು ಮಟ್ಟದ ಅಧಿಕಾರಿಗಳು.ಸೇರಿದಂತೆ ಗಣ್ಯತಿ ಗಣ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು,
ವಿವಿಧ ಸಂಘಟನೆ ಪದಾಧಿಕಾರಿಗಳಾಗಿ,ಆಹಾರ, ಹಣಕಾಸು ಪ್ರಚಾರ ಸಮಿತಿ.ನೊಂದಣಿ,ಸ್ವಾಗತ ಸಮಿತಿಗಳಾಗಿ ರಚಿಸಿ
ಕೊಂಡು ಜವಾಬ್ದಾರಿಯೊಂದಿಗೆ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜನಪರ ಚಳುವಳಿ ,ಸಂಗೀತ,ಕೃಷಿ,ಮಾಧ್ಯಮ ರಂಗದಲ್ಲಿ ಸಾಧನೆಗೈದ 20ಜನ ಸಾಧನೆಗೈದ ಸಾಧಕರಿಗೆ ಸನ್ಮಾನಿಸ
ಲಾಗುವುದು ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ ಮಾತನಾಡಿ,ಬೆಳಿಗ್ಗೆ 7.30 ಧ್ವಜಾರೋಹಣ,ಅಂಬೇಡ್ಕರ್ ವೃತ್ತದಿಂದ ಕಲಾ ತಂಡ,ಕನ್ನಡ ಅಭಿಮಾನಿಗಳೊಂದಿಗೆ ಅದ್ದೂರಿ ಮೆರವಣಿಗೆ ನಂತರ ಮೂರು ದ್ವಾರಗಳ ಉದ್ಘಾಟನಾ ನಂತರ ವೇದಿಕೆ ಕಾರ್ಯಕ್ರಮ ಸಮಾರಂಭ,ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ ಇದು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು.ಕನ್ನಡ ಮನಸ್ಸುಗಳು ಒಂದಾಗಬೇಕು.ಯಾರೋಬ್ಬರ ಸ್ವತ್ತು ಅಲ್ಲ, ಸಮ್ಮೇಳನ ಕುರಿತು ಜನಸಾಮಾನ್ಯರಿಗೆ ಮಾಧ್ಯಮದ ಮೂಲಕ ಪ್ರಚಾರ ಪಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ಸದಸ್ಯರಾದ ಸಂಘಟನಾ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ.ಭಾರತ್ ಗ್ಯಾಸ್ ಮಾಲೀಕರದ ಓಬಣ್ಣ,ಕಾರ್ಯದರ್ಶಿ ಮಾರಪ್ಪ,ಗೌರವಾಧ್ಯಕ್ಷ ಬೆಲ್ಲದ ಬಸವರಾಜ್,ನಾoಗಲಿಗಪ್ಪ.ಚಂಪಾವತಿ.ರಾಜಪ್ಪ ಸೇರಿದಂತೆ ಉಪಸ್ಥಿತರಿದ್ದರು.