ಪ್ರಜಾ ನಾಯಕ ಜಗಳೂರು ಸುದ್ದಿ:ಬಾಲಕಾರ್ಮಿಕ ಪದ್ದತಿ ಸಮಾಜಕ್ಕೆ ಮಾರಕ ನಿಯಂತ್ರಿಸಲು ಕಾನೂನು ಜಾಗೃತಿ ಅಗತ್ಯ ಎಂದು ಜೆಎಂಎಫ್ ಸಿ ಹಾಗೂ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಯೂನಿಸ್ ಅಥಣಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ,ತಾಲೂಕು ಆಡಳಿತ,ಶಿಶು ಅಭಿವೃದ್ದಿ,ಆರೋಗ್ಯ, ಶಿಕ್ಷಣ ಇಲಾಖೆಗಳು ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ 1986 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ದೇವರ ಸಮಾನವಾಗಿ ಕಾಣುವ ದೇಶದಲ್ಲಿ ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ 26 ಸೆಕ್ಷೆನ್ ಗಳನ್ನೊಳಗೊಂಡು 1986 ರಲ್ಲಿ ಜಾರಿಯಾಗಿದ್ದು.ಪರಿಪಾಲನೆಯಾಗದೆ ಇಂದಿಗೂ ಮಕ್ಕಳ ಮೇಲಿನ ದೌರ್ಜನ್ಯಗಳು, ಬಾಲಕಾರ್ಮಿಕ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ 14 ವರ್ಷದೊಳಗಿನ ಬಾಲಕರನ್ನು ದುಡಿಮೆಗೆ ಕಳಿಸದಂತೆ,14 ವರ್ಷ ಮೇಲ್ಪಟ್ಟ ಕಿಶೋರರನ್ನು ಅಪಾಯಕಾರಿ ಸ್ಥಳಗಳಿಗೆ ಕೆಲಸದಿಂದ ಮುಕ್ತಿಗೊಳಿಸಲು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತುನೀಡಲು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಎಂದು ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಓಂಕಾರೇಶ್ವರ್ ಮಾತನಾಡಿ, ಪೋಷಕರು ಮಕ್ಕಳ ಬದುಕು ಮತ್ತು ಬವಣೆಗಳನ್ನು ಅರಿತು ಭವಿಷ್ಯ ರೂಪಿಸಬೇಕು.ಆರ್ಥಿಕ ಸಂಕಷ್ಟಕ್ಕೆ ಬಾಲಕಾರ್ಮಿಕ ಪದ್ದತಿ ಅನುಸರಣೆ ಸಲ್ಲದು.ಕೌಟುಂಬಿಕ ವ್ಯವಸ್ಥೆಯಿಂದ ಹೊರಗಡೆ ಮಕ್ಕಳನ್ನು ದುಡಿಮೆಗೆ ಒಳಪಡಿಸಿದರೆ ಕಾನೂನಿನಡಿ ಶಿಕ್ಷೆಗಳು ಖಂಡಿತ ತಪ್ಪಿದ್ದಲ್ಲ.ಆದ್ದರಿಂದ ಸರಕಾರದ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು.
ಟಿ.ಎಚ್.ಓ ಡಾ .ನಾಗರಾಜ್ ಮಾತನಾಡಿ,ಆಶಾ. ಕಾರ್ಯಕರ್ತೇ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ ಪದ್ದತಿಯ ಪರಿಣಾಮಗಳ ಜಾಗೃತಿ ಮೂಡಿಸಲಾಗುತ್ತಿದೆ ಇಟ್ಟಿಗೆ ಭಟ್ಟಿಯಲ್ಲಿ ಹೊರ ರಾಜ್ಯದಿಂದ ಆಗಮಿಸಿದ ವಲಸೆ ಬಾಲ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯೊಂದಿಗೆ ಸ್ವಗ್ರಾಮಕ್ಕೆ ಮರಳಿ ಕಳಿಸಿಕೊಡಲಾಯಿತು ಎಂದು ತಿಳಿಸಿದರು.
ಸಂದರ್ಭದಲ್ಲಿ ಸಿಡಿಪಿಓ ಬಿರೇಂದ್ರಕುಮಾರ,ಕಾರ್ಯದರ್ಶಿ ರುದ್ರೇಶ್,ಹಿರಿಯ ವಕೀಲ ವೈ. ಹನುಮಂತಪ್ಪ, ಸುರೇಶ್, ಸೇರಿದಂತೆ ಇದ್ದರು.