ಪ್ರಜಾ ನಾಯಕ ಜಗಳೂರು ಸುದ್ದಿ:ಬಂಡವಾಳಶಾಹಿ ಉದ್ಯಮಿಗಳ ಆಕ್ರಮಣ ದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕೊಡಲಿಪೆಟ್ಟು ಬೀಳುತ್ತಿದ್ದು.ಸೇವಾಮನೋಭಾವದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಭವಿಷ್ಯ ರೂಪಿಸಬೇಕು ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಭರಮಸಮುದ್ರ ಗೇಟ್ ಬಳಿ ವಿನಾಯಕ ಲೇಔಟ್ ನಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸ ವ ಹಾಗೂ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯ ಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಾಚನ ನೀಡಿದರು.
ಮಡಿವಾಳ ಸಮಾಜ ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಪ್ರಾಮಾಣಿಕ ಕಾಯಕ ಸೇವೆಗೈಯುತ್ತಿದ್ದು.ತಂತ್ರ ಜ್ಞಾನದಿಂದ ವಾಷಿಂಗ್ ಮಿಷನ್ ಬಳಕೆಯಿಂದ ಮೂಲ ಕಸುಬು ಕ್ರಮೇಣ ನಶಿಸುತ್ತಿದೆ.ತಂತ್ರಜ್ಞಾನ ಅಳವಡಿಕೆಗೆ ಮುಂದಾಗಬೇಕು.ತಮ್ಮ ಕಾಯಕದ ಜೊತೆ ಗಳಿಕೆ ಮತ್ತು ಬಳಕೆಗಳ ಪ್ರಾಮಾಣಿಕ ವಾಗಿರಬೇಕು.ದೇಶದಲ್ಲಿ ತಳಸಮುದಾಯದ ಕಾಯಕಗಳು ಇಲ್ಲದಿದ್ದರೆ ನರಕಮಯ ವಾತಾವರಣ ಸೃಷ್ಠಿಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಗಳೂರಿನಲ್ಲಿ ಸುಂಸ್ಕೃತ ರಾಜಕಾರಣಿಗಳು: ತಳಸಮುದಾಯ ಗಳ ದಾರ್ಶನಿಕರ ಜಯಂತಿಗಳಲ್ಲಿ ಪಕ್ಷಾತೀತವಾಗಿಭಾಗವಹಿಸುವ ಔದಾರ್ಯತೆ ಮೈಗೂಡಿಸಿ ಕೊಂಡಿದ್ದು .ಚುನಾವಣೆಯಲ್ಲಿ ಮಾತ್ರ ರಾಜಕಾರಣ ಉಳಿದಂತೆ ರಾಜಕಾರಣಮಾಡದೆ ಇರುವ ಸುಸಂಸ್ಕೃತ ರಾಜಕಾರಣಿಗಳ ಸ್ಪಂದನೆಯಿಂದ ನಮಗೆ ಮಡಿವಾಳ ಸಮಾಜದ ಶಾಸಕರಿಲ್ಲ ಎಂಬ ಭಾವನೆಯೇ ಬರುವದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಮಡಿವಾಳ ಸಮಾಜದ ಶೇ.90 ಕ್ಕೂ ಅಧಿಕ ಜನರು ಜಮೀನುರಹಿತರಾಗಿ ವಾಸಿಸುತ್ತಿದ್ದು.ಕೇವಲ ದುಡಿಮೆ ಯನ್ನೇ ಅವಲಂಬಿಸಿರುವುದು ವಾಸ್ತವ ಆದರೂ ಒಂದು ದಿನ ಮೀಸಲಿಟ್ಟು.ಸಮುದಾಯ ಭವನದ ಭೂಮಿ ಪೂಜೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಒಗ್ಗಟ್ಟಿಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಮಡಿವಾಳ ಸಮುದಾಯಕ್ಕೆ ನೀಡಿದ ಭರವಸೆಯಂತೆ ನಿವೇಶನ ಒದಗಿಸಿರುವೆ. ಹೆದ್ದಾರಿ ಪಕ್ಕದಲ್ಲಿನ ಸುಸಜ್ಜಿತ ಸಮುದಾಯ ಭವನ ಜಿಲ್ಲೆಗೆ ಮಾದರಿಯಾಗಲಿದೆ.₹50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿ ಸಲಾಗುವುದು.ಮಡಿವಾಳ ಸಮುದಾಯದ ಅಭಿವೃದ್ದಿಗೆ ಸದಾ ಬದ್ದನಾಗಿರುವೆ.ತಮ್ಮ ಆಶೀರ್ವಾದ ನನ್ನಮೇಲಿರಲಿ ಸ್ವಯಂ ಉದ್ಯೋಗಕ್ಕಾಗಿ ಸರಕಾರದಿಂದ ಸಾಲಸೌಲಭ್ಯ ಒದಗಿಸ ಲಾಗುವುದು ಎಂದು ಭರವಸೆ ನೀಡಿದರು.
ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಜು ಎಂ ತಲ್ಲೂರು ಮಾತನಾಡಿ,ರಾಜ್ಯದಲ್ಲಿ ಚಿಕ್ಕ ಸಮುದಾಯ ವನ್ನು ಗುರುತಿಸಿ ದೇವರಾಜ್ ಅರಸ್ ಅಭಿವೃದ್ದಿ ನಿಗಮ ದಿಂದ, ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮ ಪ್ರತ್ಯೇಕ ವಾಗಿ 4 ವರ್ಷ ಕಳೆದರೂ ಸಮುದಾಯದ ಬಡಫಲಾನುಭವಿ ಗಳಿಗೆ ಸೌಲಭ್ಯಗಳು ಮಾತ್ರ ಕೈಗೆಟುಕತ್ತಿರಲಿಲ್ಲ.ಕಳೆದ ಮೂರು ತಿಂಗಳ ಹಿಂದೆ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಯ ನಂತರ ಶೈಕ್ಷಣಿಕ,ನೇರ,ಸ್ವಯಂ ಉದ್ಯೋಗ,ಗಂಗಾಕಲ್ಯಾಣ ಯೋಜನೆ ಗಳಡಿ ಸಾಲ ಸೌಲಭ್ಯಗಳಿಗೆ ಅವಕಾಶವಿದ್ದು.ಆನ್ಲೈ ನ್ ನಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದು ಕೊಳ್ಳಬೇಕು.ಪ್ರತ್ಯೇಕ ನಿಗಮ ಮಂಡಳಿ ಹಾಗೂ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಜಾರಿಗೊಳಿಸಿದ ಸರ್ವ ಪಕ್ಷದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಗಳು.ಮಡಿವಾಳ ಸಮುದಾಯದಲ್ಲಿನ ಒಗ್ಗಟ್ಟು ಮತ್ತು ಶಿಕ್ಷಣದ ಕೊರತೆ ಯಿಂದ 6 ದಶಕಗಳಿಂದ ಯಾವೊಂದು ಪಕ್ಷದಲ್ಲಿಯೂ ಶಾಸಕರಾಗಿ ಆಯ್ಕೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನನ್ನ ಆಡಳಿತಾವಧಿ ಯಲ್ಲಿನ ಮಡಿವಾಳ ಸಮುದಾಯದ ಭವನದ ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ ಇದೀಗ ನಿವೇಶನವನ್ನು ಕಲ್ಪಿಸಿರುವ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಅಭಿನಂದನೆಗಳು. ಸ್ವಾಭಿಮಾನದಲ್ಲಿ ಕಾಯಕ ಮಾಡುತ್ತಿರುವ ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ.ರಾಜ್ಯದಲ್ಲಿ ಮುಂದಿನ ಚುನಾವಣೆ ಯಲ್ಲಿ ಮಡಿವಾಳ ಸಮಾಜದಿಂದ ಶಾಸಕರು ಆಯ್ಕೆಯಾಗಬೇಕಿದೆ ಎಂದು ಶುಭ ಹಾರೈಸಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ 12 ನೇ ಶತಮಾನದಲ್ಲಿನ ಬಸವಣ್ಣನವರ ಅನುಭವಮಂಟಪ ದಲ್ಲಿ ಮಾಚಿದೇವರ ಕಾಯಕಯೋಗಿ ಯಾಗಿ ನಡೆಸಿದ ಸಾಮಾಜಿಕ ಕ್ರಾಂತಿ ಇಂದಿಗೂ ಅವಿಸ್ಮರಣೀಯ.ಮಡಿವಾಳ ಮಾಚಿದೇವರ ಆದರ್ಶಗಳು ಮಾದರಿಯಾಗಲಿ ಎಂದರು.
ನಂತರ ಕೆಪಿಸಿಸಿ ಎಸ್ ಟಿ ಘಟಕದ ಕೆಪಿ ಪಾಲಯ್ಯ ಮಾತನಾಡಿ ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ತಿಮ್ಮಕ್ಕರಾಮಪ್ಪ,ಸದಸ್ಯರಾದ, ರತ್ನಮ್ಮ, ನಾಗರಾಜ್ ,ಜೆಟಿ ಬಸವರಾಜ್,ತಿಪ್ಪೇಸ್ವಾಮಿ,ಲಕ್ಷ್ಮಿ,ಪ.ಪಂ ಸದಸ್ಯೆ ಮಂಜಮ್ಮ,ಮಡಿವಾಳ ಮಾಚಿದೇವ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ರೇವಣಸಿದ್ದಪ್ಪ,ಜಿಲ್ಲೆಯ ವಿವಿಧ ತಾಲೂಕುಗಳ ಸಮಾಜದ ಅಧ್ಯಕ್ಷರಾದ ಎಂ.ಎನ್. ಬಸವರಾಜಪ್ಪ, ಮಹಾಂತೇಶ್ , ರವಿದೊಡೇರಿ,ಭೀಮಣ್ಣ,ರಮೇಶ್,ಶಿಕ್ಷಕ ನಾಗರಾಜ್,ಹರೀಶ್, ಸೇರಿದಂತೆ ಉಪಸ್ಥಿತರಿದ್ದರು.