ಪ್ರಜಾ ನಾಯಕ ಸುದ್ದಿ ಜಗಳೂರು -: ಏಪ್ರಿಲ್ 6 ರಂದು ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾವೇಶ ಹಮ್ಮಿ ಕೊಳ್ಳಲಾಗಿದೆ ಎಂದು ಹನುಮ ಸೇವಾ ಸಂಚಾಲನಾ ಸಮಿತಿ ಸದಸ್ಯ ಹಾಗೂ ಮಾಜಿ ತಾಪಂ ಸದಸ್ಯ ಇ.ಎನ್.ಪ್ರಕಾಶ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ತಾಲ್ಲೂಕಿನ ಬಿಸ್ತುವಳ್ಳಿ ಗ್ರಾ.ಪಂ ವ್ಯಾಪ್ತಿಯ ಸಂತೇಮುದ್ದಾಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗ್ರಾಮದ ಬಳಿಯಿರುವ ಆಂಜನೇಯ ಮೂರ್ತಿ ಎದುರು ಮುಖ ವುಳ್ಳ ಹಾಗೂ ಬೇಡಿ ಆಂಜನೇಯ ಮೂರ್ತಿಯಾಗಿದ್ದು, ಹಿರಿಯರು ಹೇಳುವ ಪ್ರಕಾರ ಉತ್ತರ ಪ್ರದೇಶದ ಸೀತಾಮುಡಿಯ ಆಂಜನೇಯ ಹಾಗೂ ನಮ್ಮ ಗ್ರಾಮದ ಆಂಜನೇಯ ಮೂರ್ತಿ ವಿಶೇಷವಾಗಿದ್ದು, ಕಳೆದ 12 ವರ್ಷಗಳ ಹಿಂದೆ ನಾನು ನಮ್ಮ ಜಮೀನಿಗೆ ಹೋಗಿಬರುವ ಸಮಯದಲ್ಲಿ ಗಿಡಗಂಟೆಗಳ ಮಧ್ಯ ದಲ್ಲಿ ಶಿಥಿಲಗೊಂಡಿದ್ದ ದೇವಸ್ಥಾನದಲ್ಲಿ ಈ ವಿಶೇಷವಾದ ಮೂರ್ತಿಯನ್ನು ಕಂಡು ಆಶ್ಚರ್ಯಚಕಿತನಾಗಿ ಪೂಜೆಯನ್ನು ಸಲ್ಲಿಸಿ ನಂತರ ನಮ್ಮ ಗೆಳೆಯರೊಂದಿಗೆ ಚರ್ಚಿಸಿ ಈ ದೇವಸ್ಥಾನಕ್ಕೆ ಕಾಯಕಲ್ಪ ನೀಡುವ ಪಣತೊಟ್ಟು ಅಂದಿನಿಂದ ಇಲ್ಲಿಯವರೆಗೆ ಕಾರ್ತಿಕ ಮಾಸದ ಸಂದರ್ಭದಲ್ಲಿ ದೀಪೋತ್ಸವ ನಡೆಸುತ್ತಾ ಬರಲಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಭಕ್ತರು ಆಗಮಿಸಿ ದ್ದು, ಇದೀಗ ಪ್ರತಿವರ್ಷ ಸಾವಿರಾರು ಭಕ್ತರು ಈ ಸಂಜೀವಿನಿ ಮೂರ್ತಿಯ ಸನ್ನಿಧಾನಕ್ಕೆ ಬಂದು ಪುನೀತರಾಗುತ್ತಿರುವುದು ಸಾಮಾನ್ಯವಾಗಿದೆ.ಇದೊಂದು ಐತಿಹಾಸಿಕ ಮೂರ್ತಿಯಾಗಿದ್ದು ಎಲ್ಲರ ಆರಾಧ್ಯದೈವ ಆಂಜನೇಯ ಉತ್ಸವವನ್ನು ಆಚರಿಸುವ ಮೂಲಕ ಸಮಾನತೆ ಸಾರುವ ಚಿಂತನೆ ನಡೆಸಲಾಗಿದೆ ಎಂದರು.
ಮರುಳಾರಾಧ್ಯ ಮಾತನಾಡಿ, ಆಂಜನೇಯ ಜಾತಿ, ಮತ, ಪಂಥ ಗಳನ್ನು ಮೀರಿದ ದೇವರಾಗಿದ್ದು, ಎಲ್ಲಾ ವರ್ಗದವರು ಪೂಜಿಸುವ ಪದ್ಧತಿ ನಮ್ಮಲ್ಲಿದ್ದು, ಬಸವೇಶ್ವರ, ಈಶ್ವರ ಹಾಗೂ ಆಂಜನೇಯ ದೇವಸ್ಥಾನಗಳಿರುವ ವಿಶೇಷ ತಾಣ ಇದಾಗಿದ್ದು, ಎಲ್ಲರೂ ಭಾಗವ ಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಕರೆ ನೀಡಿದರು.
ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ ಮಾತನಾಡಿ,ಬೇಡಿ ಹಾಕಲಾಗಿರುವ ಆಂಜನೇಯ ಮೂರ್ತಿ ನೋಡುವುದಕ್ಕೇ ವಿಶೇಷವಾಗಿದ್ದು, ಪುರಾತನ ದೇವಾಲಯ ಶಿಥಿಲಗೊಂಡಿ ರುವುದನ್ನು ಗುರುತಿಸಿ ಜೀರ್ಣೋದ್ಧಾರ ಮಾಡಿ ಇದೀಗ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ದೇಶದ ಸಂಸ್ಕೃತಿ, ನಡೆ, ನುಡಿಗಳನ್ನು ಜೀವಂತಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಧರ್ಮ ಸಭೆಯಲ್ಲಿ ವಿವಿಧ ಧರ್ಮಗಳ ಗುರುಗಳು ಭಾಗವಹಿಸ ಲಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದು, 5 ರಂದು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಈಗಾಗಲೇ ಹೋಬಳಿವಾರು ಸಭೆಗಳನ್ನು ನಡೆಸಿದ್ದು, ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಾಣೇಶ್ ಮಾತನಾಡಿ, ನಮ್ಮ ಮನೆತನದವರು ಇಂದಿನಿಂದಲೂ ಈ ಕ್ಷೇತ್ರದ ಪಕ್ಕದಲ್ಲಿರುವ ಗುರುಸ್ವಾಮಿ ಗದ್ದಿಗೆಗೆ ಪ್ರತಿ ವರ್ಷ ಶ್ರಾವಣಮಾಸದಲ್ಲಿ ಹೋಗಿ ಬರುವಂತಹ ಪದ್ಧತಿಯಿದ್ದು, ಆಗಾಗ ಶಿಥಿಲಗೊಂಡಿದ್ದ ದೇವಸ್ಥಾನದ ದರ್ಶನ ಮಾಡುವ ಪ್ರತೀತಿ ಇತ್ತು. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ತಮ್ಮ ಭಕ್ತಿಯನ್ನು ಸಮರ್ಪಿ ಸುತ್ತಿ ದ್ದಾರೆ. ಎದುರುಮುಖದ ಆಂಜನೇಯ ಶಕ್ತಿ ಅಪಾರ ಎನ್ನುವ ಹಿರಿಯರ ಬಳಿ ಬೃಹತ್ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಕಳೆದ 4-5 ವರ್ಷಗಳಿಂದ ಸಾಕಾರಗೊಳ್ಳದ ಚಿಂತನೆ ಇದೀಗ ಕಾರ್ಯರೂಪಕ್ಕೆ ಬರುತ್ತಿರುವುದು ಎಲ್ಲ ಭಕ್ತರ ಸಹಕಾರದಿಂದ ಎಂದರೆ ಅತಿಶ ಯೋಕ್ತಿಯಾಗಲಾರದು. ಕಾರ್ಯಕ್ರಮದ ನಿಮಿತ್ತ ಫೆ.2 ರಂದು 300ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿ ತೀರ್ಮಾನ ಹಾಗೂ ಮಾಲಾಧಾರಿಗಳ ಸಮಿತಿ, ಸಂಚಾಲನಾ ಸಮಿತಿ, ಮತ್ತು ಹಣ ಸಂಗ್ರಹ ಸಮಿತಿಗಳನ್ನು ರಚಿಸಲು ನಿರ್ಣಯ ಕೈಗೊಳ್ಳಲಾಯಿತು.
ಏ.5 ರಂದು 2000 ಕ್ಕೂ ಹೆಚ್ಚು ಹನುಮ ಮಾಲಾಧಾರಿಗಳಿಂದ ಪಟ್ಟಣದ ಹೊರಕೆರೆಯಲ್ಲಿರುವ ಆಂಜನೇಯ ದೇವಸ್ಥಾನ ದಿಂದ ಅಂಬೇಡ್ಕರ್ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಏ.6 ರಂದು ಹನುಮಮಾಲಾ, ಪವನಹೋಮ, ಹಾಗೂ ಧರ್ಮ ಜನ ಜಾಗೃತಿ ಸಮಾವೇಶದಲ್ಲಿ ಮಾತೆಯರಿಂದ ಕುಂಭೋತ್ಸವ, ತದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು. ಯಾದವನಂದ ಶ್ರೀ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ, ರಾಣೇಬೆನ್ನೂರು ರಾಮಕೃಷ್ಣಾ ಶ್ರಮದ ಶ್ರೀ, ಸೇವಾಲಾಲ್ ಸ್ವಾಮೀಜಿ ಸೇರಿದಂತೆ ವಿವಿಧ ಗುರು ಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಜಿಪಂ,ಗ್ರಾಪಂ ಹಾಗೂ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾಧಿಗಳು ಶ್ರೀ ಸ್ವಾಮಿಗೆ ಕರಿಗಡಬು ಮಾಡಿಕೊಂಡು ತರಲು ತಿಳಿಸಲಾಗಿದ್ದು, ಭಾರತೀಯ ಪರಂಪರೆ, ಸಂಸ್ಕೃತಿ ಬೆಳೆಸಿ ಪಾಶ್ಚಾತ್ಯೀಕರಣ ಹೋಗಲಾಡಿಸಿ, ಯುವಕರಿಗೆ ನಮ್ಮ ನಡೆ ನುಡಿ ಸಂಸ್ಕೃತಿಯ ಬಗ್ಗೆ ತಿಳಿಸಿ, ಧಾರ್ಮಿಕತೆಯೊಂದಿಗೆ ಸಾಮರಸ್ಯ ಸಾರುವ ಜೊತೆಗೆ ಮೌಲ್ಯಾಧಾರಿತ ಜೀವನ ನಡೆಸಲು ಜಾಗೃತಿ ಮೂಡಿಸುವ ಚಿಂತನೆ ಹೊಂದಲಾಗಿದೆ ಎಂದರು.
ಈ ಸುದ್ದಿ ಗೋಷ್ಟಿಯಲ್ಲಿ ಕರಿಬಸಯ್ಯ, ಧನಂಜಯ, ರಸ್ತೆಮಾಕುಂಟೆ ಪ್ರಕಾಶ್, ವಕೀಲ ಕೊಟ್ರೇಶ್, ಜಮ್ಮಾಪುರ ಬಾಲರಾಜ್, ಸಂತೋಷ್, ಪ್ರಜ್ವಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.