ಜಾಹೀರಾತು
ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಮುಂದೂಡ ಲಾಗಿದೆ ಎಂದು ಜಿಲ್ಲಾ ಯೋಜನ ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಡಾ.ಬಿ.ಮಹಾಂತೇಶ್ ತಿಳಿಸಿದರು.
ಜಗಳೂರು ಪಟ್ಟಣದ ಪ.ಪಂ.ಆವರಣದಲ್ಲಿ ನಡೆದ ಬಹಿರಂಗ ಹರಾಜು ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ದಿನಗಳ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 53 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಮಾರ್ಚ್ 23 ರಂದು ಆದೇಶ ಹೊರಡಿಸಲಾಗಿತ್ತು.ಆದರೆ ಸಮರ್ಪಕ ಪ್ರಚಾರ ಕೊರತೆ ಹಿನ್ನೆಲೆ ಸಾರ್ವಜನಿಕರ ಮೌಖಿಕ, ದೂರ ವಾಣಿ,ಕರೆಯ ದೂರು,ನಿಯಮಾನುಸಾರ ಪಾಲನೆಯ ತಾಂತ್ರಿಕ ದೋಷದಿಂದ ಮುಂದೂಡಲಾಗಿದೆ ಎಂದು ಅವರು ತಿಳಿಸಿದರು
ನಿರಾಶೆಗೊಂಡ ಟೆಂಡರ್ ದಾರರು :- ಕಳೆದ ಎರಡು ದಿನಗಳ ಹಿಂದೆ ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿ,ಡಿ.ಡಿ ಹೊಂದಿಗೆ ಸಕಲ ದಾಖಲೆ ಸಲ್ಲಿಸಿದ ಟೆಂಡರ್ ದಾರರು ಹರಾಜು ಪ್ರಕ್ರಿಯೆ ಮುಂದೂಡಿಕೆ ಕಂಡು ನಿರಾಶೆಗೊಂಡು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ ಪಂ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಿದ್ಯಾಕೆ ಟೆಂಡರ್ ದರು ಅಧಿಕಾರಿಗಳಿಗೆ ಪ್ರಶ್ನೆ -: ಗುರುವಾರ ನಡೆಯಬೇಕಿದ್ದ ಹರಾಜು ಪ್ರಕ್ರಿಯೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಡಾ.ಬಿ ಮಹಾಂತೇಶ್ ರವರು ತಾಂತ್ರಿಕ ಕಾರಣಗಳಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಘೋಷಣೆ ಮಾಡುತ್ತಿದ್ದಂತೆ ಮತ್ತು ಮುಂದಿನ ಟೆಂಡರ್ ಪ್ರಕ್ರಿಯೆಯ ದಿನಾಂಕವನ್ನು ನಮ್ಮ ಮುಖ್ಯ ಅಧಿಕಾರಿಗಳು ತಿಳಿಸುವರು ಎಂದು ಹೇಳುತ್ತಿದ್ದಂತೆ ವಾಣಿಜ್ಯ ಮಳಿಗೆಯಲ್ಲಿರುವ ಬಾಡಿಗೆದಾರರು ಯಾವ ಮಾನದಂಡವಿಟ್ಟು ಈ ಹರಾಜು ಪ್ರಕ್ರಿಯೆ ಯನ್ನು ರದ್ದುಗೊಳಿಸುವಿರಿ ಎಂದು ತಿಳಿಸಿ ಎಂದು ಪಟ್ಟು ಹಿಡಿದು ಕೇಳಿದರು ಅಧಿಕಾರಿಗಳು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರವಿಲ್ಲದೆ ಜಾಣ ಮೌನವಹಿಸಿ ಹೊರ ನಡೆದ ಪ್ರಸಂಗ ಪಟ್ಟಣ ಪಂಚಾಯತಿಯಲ್ಲಿ ನಡೆಯಿತು
ಜಾಹೀರಾತು
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್,ಜಿ ಪ.ಪಂ ,ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷೆ ನಿರ್ಮಲ ಕುಮಾರಿ ,ಸದಸ್ಯರಾದ ಮಂಜಮ್ಮ.ಸಿದ್ದಪ್ಪ. ಲುಕ್ಮಾನ್, ನವೀನ್ ಕುಮಾರ್, ಆರ್. ತಿಪ್ಪೇಸ್ವಾಮಿ.ದೇವರಾಜ್, ಶಕೀಲ್ ಅಹಮದ್ .ರವಿ ಕುಮಾರ್,ರಮೇಶ್ ರೆಡ್ಡಿ,ಮಹಮ್ಮದ್ ಆಲಿ.ನಾಮನಿರ್ದೇಶಿತ ಸದಸ್ಯರಾದ ಬಿ.ಪಿ.ಸುಬಾನ್,ಗಿರೀಶ್.ರುದ್ರಮುನಿ.ಮುಖಂಡ ರಾದ ಗೌರಿಪುರ ಶಿವಣ್ಣ ರಮೇಶ್. ಜೆ ಸಿ ಓಬಳೇಶ್ .ಸೇರಿದಂತೆ ಸಿಬ್ಬಂದಿಗಳು, ನೂರಾರು ಟೆಂಡರ್ ದಾರರು ಸಾರ್ವಜನಿಕರು ಭಾಗವಹಿಸಿದ್ದರು.