ಪ್ರಜಾ ನಾಯಕ ಸುದ್ದಿ ಜಗಳೂರು :- ವಿಧಾನ ಸಭಾ ಕ್ಷೇತ್ರದ ಸಮಗ್ರ ನೀರಾವರಿ ನನ್ನ ಕನಸಿನ ಈಡೇರಿಕೆಗಾಗಿ ಮತ್ತೊಮ್ಮೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ಬೆಳಿಗ್ಗೆ ಸಂಸದರಾದ ಜಿಎಂ ಸಿದ್ದೇಶ್ವರ್.ಶಿವಯೋಗಿ ಸ್ವಾಮಿ.ಡಾ.ರವಿಕುಮಾರ್ ಅಭ್ಯರ್ಥಿ ಎಸ್ ವಿ ರಾಮಚಂದ್ರ ಬಿ ಫಾರಂನೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಅಧಿಕಾರಿ ಎಸ್.ರವಿ. ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಸಂತೋಷ್ ಕುಮಾರ್. ಜಿ ಇವರಿಗೆ ನಾಮಪತ್ರ ಸಲ್ಲಿಸಿದರು
ನಂತರ ಪಟ್ಟಣದ ಈಶ್ವರ.ದೊಡ್ಡ ಮಾರಮ್ಮ. ಆಂಜನೇಯಸ್ವಾಮಿ. ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನ ದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದವರೆಗೆ ಡೊಳ್ಳು ಕುಣಿತ.ಬಾಜಾ ಭಜಂತ್ರಿ ಮೇಳದೊಂದಿಗೆ.ಬಿಜೆಪಿ ಕಾರ್ಯಕರ್ತ ರು ಬಾವುಟಗಳನ್ನು ಹಿಡಿದು ಪಟಾಕಿ ಸಿಡಿಸುವ ಮೂಲಕ ಅಪಾರ ಸಂಖ್ಯೆಯ ಕಾರ್ಯಕರ್ತ ರೊಂದಿಗೆ ರೋಡ್ ಶೋ ನಡೆಸಿದರು
ನಂತರ ಶಾಸಕ ಎಸ್.ವಿ ರಾಮಚಂದ್ರ ಮಧ್ಯಮದವರೊಂದಿಗೆ ಮಾತನಾಡಿದರು.
ನಂತರ ಮಾತನಾಡಿದ ಅವರು ನಾನು ಶಾಸಕನಾಗಿದ್ದಾಗ ಸಿರಿಗೆರೆ ಶ್ರೀಗಳ ಆಶೀರ್ವಾದ ಬಿಜೆಪಿ ಆಡಳಿತ ಪಕ್ಷದ ಸಹಕಾರದಿಂದ ಕ್ಷೇತ್ರದಲ್ಲಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ 45 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲು ಸಂಕಲ್ಪಗೈದಿರುವೆ.ಬಡ ರೈತರು ನೀರಾವರಿ ನಾಡಿನಲ್ಲಿ ಭತ್ತ ಬೆಳೆದು ಸಮೃದ್ದಿ ಜೀವನ ಸಾಗಿ ಸಲು ನಾನು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತಗಳಿಂದ ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾಗ ಬೇಕಿದೆ.ಜನತೆಯ ಆಶೀರ್ವಾದ ನನ್ನ ಮೇಲಿದೆ. ನಾನು ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳೇ ನನಗೆ ಶ್ರೀ ರಕ್ಷೆ ಯಾಗಲಿದೆ ಎಂದರು.
ನಮ್ಮ ಭಾರತ ದೇಶವನ್ನು ದೇಶದ ಸರ್ವತೋಮುಖ ಅಭಿವೃದ್ದಿ ಗೊಳಿಸುತ್ತಿರುವ ಪ್ರಧಾನಿ ಮೋದಿಜಿ, ಅಮಿತ್ ಶಾ ಹಾಗೂ ಕರ್ನಾಟಕ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅನುಗ್ರಹ ನನ್ನ ಮೇಲಿದೆ.ಕ್ಷೇತ್ರ ಹಾಗೂ ಜಿಲ್ಲೆಯಲ್ಲಿನ ಯಾವುದೇ ಸಮುದಾಯದ ಮತದಾರರು ಬಿಜೆಪಿ ಕಾರ್ಯಕರ್ತರು ಪಕ್ಷದಿಂದ ಬಿಟ್ಟು ಹೋಗು ವುದಿಲ್ಲ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕೈಜೋಡಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
” ನನಗೆ ಎಲ್ಲರೂ ಪ್ರತಿಸ್ಪರ್ಧಿಗಳೇ :- ಕಾಂಗ್ರೆಸ್,ಪಕ್ಷೇತರ ಜೆಡಿಎಸ್. ಅಭ್ಯರ್ಥಿಗಳೆಲ್ಲರೂ ನನಗೆ ಪ್ರತಿಸ್ಪರ್ಧಿಗಳೇ. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಮಣಿಸಲು ಸಿದ್ದನಾಗಿರುವೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.”
ಲಿಂಗಾಯತ ಸಮುದಾಯದ ನಾಯಕರಾದ ಎಸ್.ಎ.ರವೀಂದ್ರ ನಾಥ್,ಯಡಿಯೂರಪ್ಪ,ಹರೀಶ್,ಜಿ.ಎಂ ಸಿದ್ದೇಶ್ವರ್ ಸೇರಿದಂತೆ ಲಿಂಗಾಯತ ಸಮುದಾಯದ ನಾಯಕರುಗಳು ನಮ್ಮ ಪಕ್ಷದಲ್ಲಿ ದ್ದಾರೆ.ಬೇರೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.
ನಂತರ ಶಾಸಕ ಎಸ್.ವಿ.ರಾಮಚಂದ್ರ ಅವರ ಪತ್ನಿ ಇಂದಿರಾ ರಾಮಚಂದ್ರ ಪ್ರತಿಕ್ರಿಯಿಸಿ ನನ್ನ ಪತಿಯ ಗೆಲುವಿಗೆ ಸದಾ ಜೊತೆ ಗಿರುವೆ.ನಮ್ಮ ಮೇಲೆ ಕ್ಷೇತ್ರದ ಜನರ ಅಪಾರ ಬೆಂಬಲ ಸಂತಸ ತಂದಿದೆ.ಅವರ ಆಶೀರ್ವಾದಕ್ಕೆ ಚಿರ ಋಣಿಯಾಗಿ ರುವೆವು ಎಂದರು.
ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಜಗಳೂರಿನ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಎಸ್.ವಿ.ರಾಮ ಚಂದ್ರ ಅವರನ್ನು 50000 ಮತಗಳ ಅಂತರದಿಂದ ಗೆಲ್ಲಿಸಬೇಕು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷದ ಆಡಳಿತ ತರಬೇಕಿದೆ ಈ ಬಾರಿ ಮಂತ್ರಿ ಮಂಡಲಕ್ಕೆ ಎಸ್.ವಿ.ರಾಮಚಂದ್ರ ಅವರನ್ನು ಕಳಿಸಲು ನಾನು ಶತಾಯಗತಾಯ ಪ್ರಯತ್ನ ಮಾಡಿ ಶಿಫಾರಸ್ಸು ಮಾಡುತ್ತೇನೆ ಎಂದರು
ಕೇಂದ್ರ ಸರ್ಕಾರದ ಯೋಜನೆಗಳನ್ನು ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಜಾಗೃತಿ ಮೂಡಿಸಿ ಮೇ.10 ರಂದು ನಡೆಯ ಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಚಲಾಯಿಸಲು ಸಹಕಾರ ನೀಡಬೇಕು ಎಂದು ಮಾಡಿದರು.
ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿ ಆರುಂಡಿನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಮುಖಂಡರಾದ ಬಿಸ್ತುವಳ್ಳಿಬಾಬು, ಅನಿತ್ ಕುಮಾರ್ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್,ಶಿವಯೋಗಿ ಸ್ವಾಮಿ, ಶ್ರೀನಿವಾಸ್ ದಾಸ ಕರಿಯಪ್ಪ ಬಿದರಿಕೆರೆ ರವಿಕುಮಾರ್ ಕಟ್ಟಿಗೆಹಳ್ಳಿ ಮಂಜಣ್ಣ ಗೌರಿಪುರ ಕುಬೇರಪ್ಪ, ಹನುಮಂತಪುರ ಸತೀಶ್, ಫಣಿಯಾಪುರ ಲಿಂಗರಾಜ್, ಸೂರ್ಯಕಿರಣ್, ರಮೇಶ್, ಪೂಜಾರ್ ಸಿದ್ದಪ್ಪ, ವಕೀಲ ಹನುಮಂತಪ್ಪ ತೋರಣಗಟ್ಟೆೆೆ ಬಾಲಕೃಷ್ಣ ಇಂದಿರಾ ರಾಮಚಂದ್ರ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಯಲಕ್ಷ್ಮಿ. ಶಾಂತಕುಮಾರಿ. ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಇದ್ದರು.