ಪ್ರಜಾ ನಾಯಕ ಸುದ್ದಿ ಜಗಳೂರು :- ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರ ಋಣಿ ಯಾಗಿರುವೆ.ಉತ್ತಮ ವ್ಯಕ್ತಿತ್ವವುಳ್ಳ ಶಾಸಕ ಎಸ್.ವಿ. ರಾಮಚಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಖ್ಯಾತ ಚಿತ್ರ ನಟ ಸುದೀಪ್ ಹೇಳಿದರು.
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಪರ ಅದ್ದೂರಿ ರೋಡ್ ಶೋನೊಂದಿಗೆ ಮತಯಾಚಿಸಿದರು.
ನನಗೆ ಪಕ್ಷಮುಖ್ಯವಲ್ಲ ವ್ಯಕ್ತಿಮುಖ್ಯ :- ನಾನು ಸಿನಿಮಾ ಚಿತ್ರೀಕರಣ ದಲ್ಲಿ ತಲ್ಲೀನನಾಗಿದ್ದೆ.ಇದೀಗ ಬಹುದಿನಗಳ ನಂತರ ರೋಡ್ ಶೋ ನಲ್ಲಿ ಭಾಗವಹಿಸಿರುವುದು ಸಂತಸತಂದಿದೆ.ನನಗೆ ಪಕ್ಷ ಮುಖ್ಯ ವಲ್ಲ ವ್ಯಕ್ತಿಮುಖ್ಯ ಎಸ್.ವಿ.ರಾಮಚಂದ್ರ ಅವರು ಉತ್ತಮ ಆತ್ಮೀಯ ಒಡನಾಡಿಯಾಗಿದ್ದಾರೆ.ಅವರನ್ನು ಮೇ.10 ರಂದು ನಡೆಯುವ ಮತದಾನದಲ್ಲಿ ಕಡ್ಡಾಯಮತದಾನಮಾಡಿ. ಮತ್ತೊಮ್ಮೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದ ಅವರು.ನಾನು ಇನ್ನೊಮ್ಮೆ ಆಗಮಿಸುವೆ ಸಂಭ್ರಮ ಆಚರಿಸೋಣ ಎಂದರು.
ರಸ್ತೆ ಉದ್ದಕ್ಕೂ ಅಭಿಮಾನಿಗಳ ಹರ್ಷದ್ಗಾರ -: ಸುದೀಪ್ ಅವರು ಹೆಲಿಕ್ಯಾಪ್ಟರ್ ನಿಂದ ಇಳಿದು ಆಗಮಿಸುತ್ತಿದ್ದಂತೆ ತೆರೆದ ವಾಹನಕ್ಕೆ ತೆರಳಿದಾಗ ಹೂವಿನಮಾಲೆ,ಸೇಬು ಹಣ್ಣಿನ ಮಾಲೆ ಹಾಕಿಸ್ವಾಗತಿಸಿ ದರು.ಆಗ ಕಿಕ್ಕಿರಿದ ಸಂಖ್ಯೆಯ ಅಭಿಮಾನಿಗಳು ವಾಹನದ ಸುತ್ತ ಲೂ ಸುದೀಪ್ ಭಾವಚಿತ್ರ,ಬಾವುಟಗಳೊಂದಿಗೆ ಮುಗಿಬಿದ್ದು.ಕಿಚ್ಚ ಕಿಚ್ಚ ಎಂಬ ಘೋಷಣೆಗಳು ಮೊಳಗಿದವು. ಸುದೀಪ್ ಕೈಬೀಸುತ್ತಿ ದ್ದಂತೆ ಸೇಬು ಹಣ್ಣಿನ ಹಾರದಲ್ಲಿರುವ ಹಣ್ಣುಗಳನ್ನು ಎಸೆದು ಅಭಿ ಮಾನಿಗಳು ಸಂಭ್ರಮಿಸಿದರು.ಸುದೀಪ್ ಅವರೂ ಅಭಿಮಾನಿಗಳ ಜೈಂಕಾರಕ್ಕೆಸಾಥ್ ನೀಡಿದರು ಕೈಯಲ್ಲಿನ ನೀರಿನ ಬಾಟಲಿ ಎಸೆ ದಾಗ ಅಭಿಮಾನಿಗಳು ಕ್ಯಾಚ್ ಹಿಡಿದದ್ದು.ಅಲ್ಲದೆ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ,ಹರ್ಷದ್ಘೋರ ವ್ಯಕ್ತಪಡಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಕ್ಷೇತ್ರದಲ್ಲಿ ಸುದೀಪ್ ಅಭಿಮಾನಿಗಳು ಹೆಚ್ಚಾಗಿದ್ದು.ಕಿಚ್ಚನ ಅಭಿಮಾನಿ ಬಳಗದ ಬಹು ದಿನಗಳ ಒತ್ತಾಸೆಯಂತೆ ಸುದೀಪ್ ಅವರನ್ನು ಇಂದಿನ ಚುನಾವಣೆ ಪ್ರಚಾರದ ರೋಡ್ ಶೋನಲ್ಲಿ ಆಹ್ವಾನಿಸಿರುವೆ. ಅವರೂ ನನ್ನ ಮೇಲಿನ ಆತ್ಮೀಯತೆಯಿಂದ ಇಂದು ಆಗಮಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಜನರು ಆಗಮಿಸಿ ರುವುದು ನನಗೆ ಗೆಲುವಿನ ವಿಶ್ವಾಸ ಹೆಚ್ಚಿಸಿದೆ.ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ಮೇಲಿರಲಿ.ಕಮಲದ ಗುರುತಿಗೆ ಮತನೀಡ ಬೇಕು ಎಂದು ಮನವಿ ಮಾಡಿದರು.
” ಕಿಚ್ಚನ ಮೇಲೆ ಹುಚ್ಚು ಅಭಿಮಾನ :- ತಾಲೂಕಿನ ಯುವಕರು ಕಿಚ್ಚ ಸುದೀಪ್ ಮೇಲೆ ಹುಚ್ಚು ಅಭಿಮಾನ ಮೆರೆದರು.ಜೀವದ ಹಂಗು ತೊರೆದು ಮನೆ,ಮರ,ಬಸ್,ಆಟೋ,ಗಳ ಮೇಲೆ ನಿಂತು ಮೋಬೈಲ್ ನಲ್ಲಿ ಸುದೀಪ್ ಅವರ ರೋಡ್ ಶೋ ನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡ ಸಾರ್ವಜನಿಕರು ನಿಬ್ಬೆರಗಾದರು.”
” ಕೆಲ ಗಂಟೆಗಳಕಾಲ ಸಂಚಾರ ಸ್ಥಗಿತ :- ಕಿಚ್ಚ ಸುದೀಪ್ ಅವರ ರೋಡ್ ಶೋ ಹಿನ್ನೆಲೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನ ದಟ್ಟಣೆ ಹೆಚ್ಚಾದ ಪರಿಣಾಮ.ಕೆಲಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.ಪಟ್ಟಣದ ಮಾರಿಕಾಂಭ ಜಾತ್ರೆ ಇರುವುದರಿಂದ ಸಾರ್ವಜನಿಕರಿಗೆ ತೀವ್ರ ಅಡಚಣೆ ಯಾಯಿತು.”
ಸಂದರ್ಭದಲ್ಲಿ ಶಾಸಕ ಪತ್ನಿ ಇಂದಿರಾ ರಾಮಚಂದ್ರ, ಬಿಜೆಪಿ ಚುನಾವಣಾ ಉಸ್ತುವಾರಿ ಅರುಂಡಿ ನಾಗರಾಜ್.ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮುಖಂಡರಾದ ಸೊಕ್ಕೆ ನಾಗರಾಜ್,ಬಿಸ್ತುವಳ್ಳಿ ಬಾಬು, ಬಿದರಿಕೆರೆ ರವಿಕುಮಾರ್ .ಹೊನ್ನಮರಡಿ ಬಾಲರಾಜ್. ಗಿಡ್ಡನ ಕಟ್ಟೆ ಕಾಂತರಾಜ್ ಪಣಿಯಾಪುರಲಿಂಗರಾಜು.ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು