ಪ್ರಜಾ ನಾಯಕ ಸುದ್ದಿ ಜಗಳೂರು :- ಏಪ್ರಿಲ್ 30 ಭಾನುವಾರ ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಗಳೂರು ಆಗಮಿ ಸಲಿದ್ದಾರೆ.ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ.ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರು ತಿಳಿಸಿದರು.
ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು
ಈ ಕಾರ್ಯಕ್ರಮಕ್ಕೆ ವಿಧಾನಸಭಾ ಕ್ಷೇತ್ರದಿಂದ 25000 ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಲೆಯಿದ್ದು.ತಾಲೂಕಿಗೆ ಜಮ್ಮೀರ್ ಅಹಮ್ಮದ್,ಸೇರಿದಂತೆ ವರಿಷ್ಠರ ಆಗಮನದಿಂದ ಅಧಿಕ ಮತಗಳ ಅಂತರದಿಂದ ನನ್ನ ಗೆಲುವಿಗೆ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿ ಅಧಿಕಾರ ಪಡೆದು.ಎರಡ ನೇ ಬಾರಿಯೂ ಟಿಕೇಟ್ ಪಡೆದು ಸೋಲು ಅನುಭವಿಸಿ.ಕಾಂಗ್ರೆಸ್ ಪಕ್ಷ ತೊರೆದು ಸ್ವಾರ್ಥಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರುವ ಎಚ್.ಪಿ.ರಾಜೇಶ್ ಅವರ ಬಂಡಾಯದ ಬಿಸಿ ತಟ್ಟುವುದಿಲ್ಲ. ಕ್ಷೇತ್ರದ ಈಗಾಗಲೆ 7 ಗ್ರಾಮಪಂಚಾಯಿತಿ ವ್ಯಾಪ್ತಿ ಪ್ರಚಾರ ನಡೆಸಲಾಗಿದ್ದು.ಕಾಂಗ್ರೆಸ್ ಪಕ್ಷಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನನಗೆ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮ ಚಂದ್ರ ಅವರ ವಿರುದ್ದ ನೇರ ಹಣಾಹಣಿ ನಡೆಯಲಿದೆ ಎಂದು ಹೇಳಿದರು.
ಬಿಜೆಪಿ ಆಡಳಿತ ಡಬಲ್ ಇಂಜಿನ್ ಸರಕಾರಗಳು ಬಂಡವಾಳ ಶಾಹಿಗಳ ಪರವಾಗಿದ್ದು.ಮತೀಯ ಗಲಬೆ ಸೃಷ್ಠಿಸಿ ಬಡವರ್ಗದ ದೀನದಲಿತರನ್ನು ನಿರ್ಲಕ್ಷಿಸಿದೆ.ದೇಶದ ಅಭಿವೃದ್ದಿ ಕಾಂಗ್ರೆಸ್ ಪಕ್ಷ ದಿಂದ ಮಾತ್ರ ಸಾಧ್ಯ ಎಂದರು.
ಯವದ ಸಮಾಜದ ಜಿಲ್ಲಾಧ್ಯಕ್ಷ ಸುಂಕಪ್ಪ, ಹಾಗೂ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಮಾಜಿ ಸಚಿವ ಅಶ್ವತ್ಥರೆಡ್ಡಿ ಕಾಲ ಘಟ್ಟದ ರಾಜಕಾರಣ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರುಕಳಿಸಲಿದೆ ಎಂದರು
ನನ್ನ ಪುತ್ರ ಡಾ.ವಿಜಯಕುಮಾರ್ ಗೂ ರಾಜಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.ನನ್ನ ಸಾಮಾಜಿಕ ಸೇವೆ ಮೆಚ್ಚಿ ಕೆಪಿಸಿಸಿ ಟಿಕೇಟ್ ನೀಡಿದ್ದು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಇದೊಂದು ಹೊಟ್ಟೆಕಿಚ್ಚಿನ ಹೇಳಿಕೆ ಎಂದು ಸ್ಪಷ್ಟನೆ ನೀಡಿದರು.
ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ,ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಕಾಂಗ್ರೆಸ್ ಬಾವುಟ ಹಿಡಿದಿರಲಿಲ್ಲ,ಪಕ್ಷ ಸಂಘಟನೆ ಮಾಡಿರಲಿಲ್ಲ ಆದರೂ ಎರಡು ಬಾರಿ ಟಿಕೇಟ್ ನೀಡಿತ್ತು.ಪಕ್ಷದಿಂದ ಮೋಸವಾಗಿದೆ ಎಂಬ ಹೇಳಿಕೆಗಳು ಸತ್ಯಕ್ಕೆ ದೂರ ಪಕ್ಷ ಸಿದ್ದಾಂತಕ್ಕೆ ಬದ್ದವಾಗಿರ ಬೇಕು ಎಂದರು.
” ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ. ದೇವೇಂದ್ರಪ್ಪ ಮತ್ತು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಜಗಳೂರು ಉಸ್ತವಾರಿ ಕಲ್ಲೇಶ್ ರಾಜ್ ಪಾಟೀಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶಿರ್ ಅಮ್ಮದ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲೂಕಿ ನ ತೊರೆಸಲು ಭಾಗದ ಗ್ರಾಮಗಳಾದ ಭರಮಸಮುದ್ರ. ಹಿರೇ ಮಲ್ಲನಹೊಳೆ. ಹುಚ್ಚವನಹಳ್ಳಿ.ಹುಚ್ಚವನಹಳ್ಳಿ ಕೊರಚರಹಟ್ಟಿ. ತಾಯಿ ಟೋನಿ. ಸಾಲೇಹಳ್ಳಿ ಹಾಲೇಹಳ್ಳಿ. ಕಮಂಡಲಗೊಂದಿ. ದಿಬ್ಬದಹಳ್ಳಿ. ಮಲ್ಲಾಪುರ ಚಿಕ್ಕಮಲ್ಲನಹೊಳೆ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ನೂರಾರು ಕಾರ್ಯಕರ್ತರು ಮತ್ತು 60ಕ್ಕೂ ಹೆಚ್ಚು ವಾಹನಗ ಳೊಂದಿಗೆ ತೆರಳಿ ಮತಯಾಚನೆ ನಡೆಸಿದರು”
ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ. ಬಿ.ದೇವೇಂದ್ರಪ್ಪ ನವ ರು.ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ರೈತರ ಮಗ ಕಾಂಗ್ರೆಸ್ ಬಡವರ ಪಕ್ಷ ಕಾಂಗ್ರೆಸ್ ರೈತರ ಪಕ್ಷ ಎಂದು .ಎತ್ತಿನ ಗಾಡಿಯನ್ನು ಎತ್ತಿನಗಾಡಿಯ ಮೇಲೆ ಮತ ಯಾಚನೆ ಮಾಡಿ ರುವುದು ವಿಶೇಷವಾಗಿತ್ತು..!
ಕ್ಷೇತ್ರದ ಗ್ರಾಮಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಅವರು ಆಗಮಿಸುತ್ತಿದ್ದಂತೆ ಮಹಿಳೆಯರು ಮತ್ತು ತಾಯಂದಿರು ಯುವಕರು ಎದುರು ಗೊಂಡು ಆರುತಿ ಬೆಳಗಿ ಗ್ರಾಮಸ್ಥರು ಎತ್ತಿನ ಗಾಡಿ ಮತ್ತು ಬಾಜಾ ಭಜಂತ್ರಿ ಮೇಳಗ ಳೊಂದಿಗೆ ಸಾಮಾನ್ಯವಾಗಿತ್ತು
ಸಂದರ್ಭದಲ್ಲಿ ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಅಶ್ವತ್ಥ ರೆಡ್ಡಿ ಪುತ್ರ ವಾಸಣ್ಣ, ತಾಲೂಕ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್.ಗೋಡೆ ಪ್ರಕಾಶ್ ಎಸ್ ಸಿ ಘಟಕದ ತಾಲೂಕು ಉಪಾಧ್ಯಕ್ಷ ಸಿದ್ದನಹಳ್ಳಿ ಬಸವರಾಜ್. ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್ ಮುಖಂಡರಾದ ರಂಗನಾಥ್ ರೆಡ್ಡಿ,ವೆಂಕಟೇಶ್, ಅನುಪ್ ರೆಡ್ಡಿ.ಅಹಮ್ಮದ್ ಅಲಿ,ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.