ಪ್ರಜಾ ನಾಯಕ ಸುದ್ದಿ ಜಗಳೂರು :- ಪಕ್ಷ ನಿಷ್ಠೆಯಿಲ್ಲದೆ ಪಕ್ಷೇತರ ವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಪರ ನನ್ನ ಯಾವುದೇ ಬೆಂಬಲವಿಲ್ಲ ಅವರನ್ನು ಸಂಪೂರ್ಣ ತಿರಸ್ಕರಿಸಿ ಸೋಲಿಸಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ನನ್ನು ಗೆಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಪಟ್ಟಣದ ಬಯಲುರಂಗಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಬ್ಲಾಕ್ ಗಳ,ಜಿಲ್ಲಾ ಕಾಂಗ್ರೆಸ್ ಸಮಿತಿ,ಎಐಸಿಸಿ ವೀಕ್ಷಕರ ವರದಿಯನ್ವಯ ಬಿ.ದೇವೇಂದ್ರಪ್ಪ ಅವರಿಗೆ ಟಿಕೇಟ್ ಘೋಷಣೆ ಯಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ.ನಿನಗೆ ಸ್ಥಾನಮಾನ ಕಲ್ಪಿಸುವೆವು.ಕಳೆದ ಎರಡು ಬಾರಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದೆ.ಈ ಬಾರಿ ನಿಮ್ಮ ಬಗ್ಗೆ ಗೆಲುವಿನ ಅಭಿಪ್ರಾಯವಿಲ್ಲ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಗೆ ಮನವರಿಕೆಮಾಡಿ ದರೂ ಬಂಡಾಯವಾಗಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ ಅವರನ್ನು ಪಕ್ಷದಿಂದ ಶೀಘ್ರ ಉಚ್ಛಾಟನೆ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಕೆ.ಪಿ.ಪಾಲಯ್ಯ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ :- ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಕೆಪಿ ಪಾಲಯ್ಯ ನನಗೆ ಆತ್ಮೀ ಯ ಆದರೆ ಟಿಕೇಟ್ ಕೈತಪ್ಪಿದ್ದರೂ ಪಕ್ಷ ನಿಷ್ಠೆ ಹೊಂದಿದ ಕಾಂಗ್ರೆ ಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ಪ್ರಶಂಸಿದರು.
ಶಾಸಕ ಎಸ್.ವಿ.ರಾಮಚಂದ್ರರಿಂದ ಕ್ಷೇತ್ರದ ಅಭಿವೃದ್ದಿ ಕುಂಠಿತ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಜಗಳೂರಿಗೆ 57ಕೆರೆ ತುಂಬಿ ಸುವ ಯೋಜನೆಗೆ ಹಣ ಮಂಜೂರುಮಾಡಿದ್ದೆ.₹3000 ಕೋಟಿ ಅನುದಾನ ಒದಗಿಸಿದ್ದೆ.ಆದರೆ ಎಸ್.ವಿ.ರಾಮಚಂದ್ರ ಅವರ 5 ಆಡಳಿತಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿ ಕುಂಠಿತವಾಗಿದೆ. ಸೂರ್ಯ ಹುಟ್ಟುವುದು ಎಷ್ಟುಸತ್ಯವೋ ಬಿ.ದೇವೇಂದ್ರಪ್ಪ ಅವರ ಗೆಲುವು ಅಷ್ಟೇ ಸತ್ಯ.ಅವರಿಗೆ ಮತನೀಡಿದರೆ ನನಗೆ ನೀಡಿದಂತೆ. ಈ ಕ್ಷೇತ್ರ ದಲ್ಲಿಯೂ ಗೆದ್ದು ಬೆಂಬಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಬರುವುದು ಖಚಿತ ಜಗಳೂರಿನ ಸರ್ವತೋ ಮುಖ ಅಭಿ ವೃದ್ದಿಗೊಳಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಆಡಳಿತಾವಧಿಯಲ್ಲಿ ಅಭಿವೃದ್ದಿ ಪರ್ವ :- ನನ್ನ ಆಡಳಿತಾವಧಿ ಯಲ್ಲಿ ಹಲವು ಭಾಗ್ಯಗಳ ಕಾರ್ಯಕ್ರಮಗಳನ್ನು ಬಡವರ್ಗಗಳ ಪರವಾಗಿ ಅನುಷ್ಠಾನಗೊಳಿಸಿರುವೆ .ಶೇ.24.1 ರಷ್ಟಿರುವ ಪರಿಶಿಷ್ಠ ಸಮುದಾಯಗಳ ಅಭಿವೃದ್ಧಿಗಾಗಿ ಎಸ್ ಇಪಿ ಟಿ ಎಸ್ ಪಿ ಕಾಯ್ದೆ ಜಾರಿಗೊಳಿಸಿ 5 ವರ್ಷದಲ್ಲಿ ₹88000 ಮೀಸಲು ಅನುದಾನ ಖರ್ಚುಮಾಡಿದ್ದೆವು.15ಲಕ್ಷ ಮನೆಗಳನ್ನು ಮಂಜೂರುಮಾಡಿ ರಾಜ್ಯದಲ್ಲಿ ಅಭಿವೃದ್ದಿ ಪರ್ವಗೊಳಿಸಿದ್ದೆವು.ಆದರೆ ಬಿಜೆಪ ಆಡಳಿತ ಸರಕಾರ ಎಲ್ಲಾ ಭಾಗ್ಯಗಳನ್ನು ಸ್ಥಗಿತಗೊಳಿಸಿದೆ.ಇವ್ರ ಮನೆ ಹಾಳಾ ಗಿ ಹೋಗ ಒಂದು ಮನೆಯನ್ನೂ ನೀಡದೆ ಬಡವರ್ಗದವರಿಗೆ ಪರಿ ಶಿಷ್ಠ ಸಮುದಾಯಗಳಿಗೆ ಅನ್ಯಾಯ ವೆಸ ಗಿದೆ ಪ್ರತಿ ಇಲಾಖೆಗಳಲ್ಲಿ ಲಂಚಾವತಾರ ತಾಂಡವಾಡುತ್ತಿದೆ ಎಂದು ಆರೋಪಿಸಿದರು.
ನಾಗಮೋಹನ್ ದಾಸ್ ಮೀಸಲಾತಿ ವರದಿ ನಮ್ಮ ಆಡಳಿತಾವಧಿ ಯಲ್ಲಿ ಶಿಫಾರಸ್ಸುಮಾಡಲಾಗಿತ್ತು.ವಾಲ್ಮೀಕಿ ಶ್ರೀಗಳ ಹೊರಾಟಕ್ಕೆ ಬೆಂಬಲಿಸಿದ್ದೆವು.ಆದರೂ ಮೀಸಲಾತಿ ಹೆಚ್ಚಳ ಪ್ರಸ್ತಾವ ಕೇಂದ್ರ ದಲ್ಲಿ ತಿರಸ್ಕಾರಗೊಂಡಿದೆ.ಮೂಗಿಗೆ ತುಪ್ಪ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ.5 ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗವಾಡುವ ಬಿಜೆಪಿಗೆ ನಾನು ಸಿದ್ದರಾಮಯ್ಯ,ಬಸವರಾಜ್ ಬೊಮ್ಮಾಯಿ ಅಲ್ಲ, ನರೇಂದ್ರ ಮೋದಿ ಅಲ್ಲ ಬಸವಣ್ಣನವರ ಅನುಯಾಯಿ ನುಡಿ ದಂತೆ ನಡೆಯುತ್ತೇವೆ ಎಂದು ಉತ್ತರಿಸಿದರು.
ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತ ನಾಡಿ,ಜಾತ್ಯಾತೀತ ನಾಯಕರಾದ ಸಿದ್ದರಾಮಯ್ಯ,ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ಡಿಕೆ ಶಿವಕುಮಾರ್ ಅವರು ನಮ್ಮೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.ಎಸ್ ವಿ.ರಾಮಚಂದ್ರ ಪ್ಪ,ರಾಜೇಶ್ ಇಬ್ಬರ ಆಡಳಿತ ಕಂಡಿದ್ದೇವೆ ಎಂದು ಹೇಳಿದರು.ಈ ಬಾರಿ150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ,25 ಸಾವಿರ ಕ್ಕೂ ಅಧಿಕ ಮತಗಳ ಅಂತರದಿಂದ ದೆವೇಂದ್ರಪ್ಪ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ ರಾಜ್ಯ ದಲ್ಲಿ ಕಾಂಗ್ರೆಸ್ ಅಲೆಯಿದೆ.ಭ್ರಷ್ಟ ಬಿಜೆಪಿ ಆಡಳಿತ ಸರಕಾರಕ್ಕೆ ಮುಕ್ತಿ ನೀಡಲು ಜನತೆ ಸಂಕಲ್ಪಗೈದಿದ್ದಾರೆ.ಲಂಬಾಣಿ ತಾಂಡಗಳ ನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಳಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು.ಆದರೆ ನರೇಂದ್ರ ಮೋದಿ ಅವರು ಇದನ್ನು ತಿರುಚಿ ಸುಳ್ಳು ಪ್ರಚಾರಮಾಡುತ್ತಿದ್ದಾರೆ.ಹಿಂದೂ ಮುಸ್ಲಿಂ ಮಧ್ಯೆ ಸಾಮರಸ್ಯ ಹಾಳು ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ ಮಾತನಾಡಿ,2008 ರಿಂದ ಎಸ್ ಟಿ ಮೀಸಲು ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು. ಇದೀಗ ಪಕ್ಷತೊರೆದು ಅದೇ ಪಕ್ಷದಮೇಲೆ ಸೆಡ್ಡು ಹೊಡೆಯುತ್ತಿ ದ್ದಾರೆ.ಅವರಿಗೆ ಮೇ.10ರಂದು ಮತಚಲಾಯಿಸಲು ಸನ್ನದ್ದರಾಗಿ ತಕ್ಕಪಾಠಕಲಿಸಬೇಕಿದೆ ಎಂದು ಕಿಡಿಕಾರಿದರು
ಕಾರ್ಯಕರ್ತರು ಅಭಿಮಾನಿಗಳು ಎಲ್ ಸಿಡಿಯಲ್ಲಿ ಹೌದು ಹುಲಿ ಯಾ ವಿಡಿಯೋ ಕ್ಲಿಪ್ ಹಾಡಿಗೆ ಸಿಳ್ಳೆಕೇಕೆ ಹಾಕಿ ಕುಣಿದು ಕುಪ್ಪಳಿಸಿ ದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೇದಿಕೆ ಮೇಲಿನ ನಾಯಕರುಗಳು ತದೇಕ ಚಿತ್ತದಿಂದ ವೀಕ್ಷಿಸಿದರು.
” ಕಾಂಗ್ರೆಸ್ ಕಾರ್ಯಕರ್ತ ಸೋಮನಹಳ್ಳಿ ರಂಗನಾಥ್ ಇವರ ಸುಪುತ್ರ ಕೆ.ಮಿಥುನ್ ಅವರು ಸಿದ್ದರಾಮಯ್ಯನವರ ಚುನಾವಣಾ ಪ್ರಚಾರಕ್ಕೆ 10ಸಾವಿರ ದೇಣಿಗೆ ನೀಡಿದ್ದು ವಿಶೇಷವಾಗಿ ಗಮನ ಸೆಳೆಯಿತು.”
ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಕಾಶ್ ರಾಥೊಡ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾದ್ಯಕ್ಷ ಕೆಪಿ ಪಾಲಯ್ಯ,ಕಾಂಗ್ರೆಸ್ ಪಕ್ಷದ ಜಿಲ್ಲಾ ಧ್ಯಕ್ಷ ಎಚ್.ಬಿ.ಮಂಜಪ್ಪ,ತಾಲೂಕು ಸಂಯೋಜಕ ಕಲ್ಲೇಶ್ ರಾಜ್ ಪಟೇಲ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್.ಮಂಜುನಾಥ್,ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ,ಮುಖಂಡರಾದ ಟಿ. ಮಧು,ವೀರಣ್ಣ, ಜಯದೇವ ನಾಯ್ಕ,ಸುರೇಶ್ ಗೌಡ,ಸಿ ತಿಪ್ಪೇಸ್ವಾಮಿ,ಓಮಣ್ಣ, ಸಣ್ಣಸೂರಯ್ಯ, ಪಲ್ಲಾಗಟ್ಟೆ ಶೇಖರಪ್ಪ,ಅಹಮ್ಮದ್ ಅಲಿ,ಸೇರಿದಂತೆ ವಿವಿಧ ಘಟಕ ಗಳ ಪದಾಧಿಕಾರಿಗಳು ಭಾಗವಹಿಸಿದ್ದರು.