ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲ್ಲೂಕಿನ ಪ್ರಭಾವಿ ಬಿಜೆಪಿ ಮುಖಂಡರಾದ ಕಾನನಕಟ್ಟೆ ಕೆ.ಎಸ್ ಪ್ರಭು ಅವರು ನಾಳೆ ಬಿಜೆಪಿ ಪಕ್ಷದಿಂದ ಹೊರ ನಡೆಯುತ್ತೇನೆ ಎಂದು ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿದೆ
ಹೌದು ಜಗಳೂರು ತಾಲ್ಲೂಕಿನ ರಾಣಕಾರಣದಲ್ಲಿ ತನ್ನದೇ ಚಾಪು ಮೂಡಿಸಿರುವ ವರ್ಣ ರಂಜಿತ ರಾಜಕಾರಣಿ ಕಾನನಕಟ್ಟೆ ಕೆ.ಎಸ್. ಪ್ರಭು ಅವರು ತಾಲ್ಲೂಕು ರಾಜಕಾರಣದಲ್ಲಿ ತನ್ನದೇ ಸೇವೆ ಮಾಡು ತ್ತಾ ಅಪಾರ ಅಭಿಮಾನ ಬಳಗವನ್ನ ಹೊಂದಿದ್ದು ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಶಾಸಕರ ರಾಮಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು ಅಲ್ಲಿಂದ ಇಲ್ಲಿವರಿಗೂ ಶಾಸಕರಾದ ಎಸ್.ವಿ.ರಾಮ ಚಂದ್ರ ಅವರ ಹೆಗಲಿಗೆ ಹೆಗಲು ಕೊಟ್ಟು ಬಿಜೆಪಿ ಪಕ್ಷ ಸಂಘಟನೆ ಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು ಇಂದಿನ 2023 ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅಷ್ಟೇನು ಸಕ್ರಿಯವಾಗಿ ಗುರತಿಸಿ ಕೊಳ್ಳದೆ ಅಂತರ ಕಾಪಾಡಿಕೊಂಡಿದ್ದಾರೆ
ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾಜಿ ಶಾಸಕ ಹೆಚ್. ಪಿ.ರಾಜೇಶ್ ಅವರ ಪರವಾಗಿ 2008 ರಲ್ಲಿ ನಂತರ 2010 ರಲ್ಲಿ ಪಕ್ಷೇತರ ವಾಗಿ ಸ್ಪರ್ದಿಸಿದ್ದ ರಾಜೇಶ್ ಪರವಾಗಿ ಚುನಾವಣೆ ಮಾಡಿ ಹಾಗು 2013 ರಲ್ಲಿ ಅವರ ಪರವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡು ಅವರ ಗೆಲುವಿಗೆ ಸಹಕರಿಸಿದ್ದರು ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿ ಸಂಸದ ಜಿ.ಎಂ. ಸಿದ್ದೇ ಶ್ವರ ಅವರ ಗೆಲುವಿಗೆ ಶ್ರಮ ಹಾಕಿದ್ದರು ಇದುವರಿಗೂ ಬಿಜೆಪಿ ಯಲ್ಲಿ ಇದ್ದು ಶಾಸಕ ಎಸ್.ವಿ. ರಾಮಚಂದ್ರ ಪರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿ ಇತ್ತೀಚಿಗೆ ನೆಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರ ಸೂಚನೆಯಂತೆ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆ
ಹೌದು ಅದ್ಯಾಕೋ ಏನು 2023 ಚುನಾವಣೆಯಲ್ಲಿ ಸಕ್ರೀಯ ವಾಗಿ ಭಾಗವಹಿಸದೆ ಅಂತರ ಕಾಪಾಡಿಕೊಂಡಿದ್ದು ಅವರ ಮುಂದಿನ ನೆಡೆ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ಪರವಾಗೋ ಅಥವಾ ಪಕ್ಷೇತರ ಅಭ್ಯರ್ಥಿ ಪರವಾಗೋ ಎಂಬುದು ಕುತೂಹಲ ಮೂಡಿಸಿದೆ ಶೀಘ್ರವೇ ಅಣಬೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅಪಾರ ಬೆಂಬಲಿಗರೊಂದಿಗೆ ಯಾರ ಪರವಾಗಿ ಸೇರಲಿದ್ದಾರೆ ಎಂಬು ನಾಳೆ ಕಾದು ನೋಡ ಬೇಕಿದೆ