ಪ್ರಜಾ ನಾಯಕ ಸುದ್ದಿ ಜಗಳೂರು:- ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಎಂದು ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಿ. ಸ್ವಾಮಿ ಎಂಬುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿ ತಾಲ್ಲೂಕು ನಾಯಕ ಸಮಾಜದ ಪದಾಧಿಕಾರಿಗಳು ಭಾನುವಾರ ಚುನಾವಣಾ ಧಿಕಾರಿಗೆ ದೂರು ಸಲ್ಲಿಸಿದರು.
ಮ್ಯಾಸನಾಯಕ, ಊರು ನಾಯಕರು ಪರಿಶಿಷ್ಟ ಪಂಗಡಕ್ಕೆ ಸೇರಿದ ವರಲ್ಲ. ಹಿಂದುಳಿದ ವರ್ಗದವರಾಗಿದ್ದಾರೆ ಎಂದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಜನಾಂಗಗಳ ನ್ನು ಕೆರಳಿಸುವ ಪ್ರಚೋದನಾತ್ಮಕ ಹೇಳಿಕೆಯನ್ನು ದಾವಣಗೆರೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಇದರಿಂದ ರಾಜ್ಯದ ನಾಯಕ ಹಾಗೂ ವಾಲ್ಮೀಕಿ ಸಮುದಾಯದವರಿಗೆ ತೀವ್ರ ನೋವುಂಟಾಗಿ ರುತ್ತದೆ. ಶಾಂತಿಯನ್ನು ಕದಡುವ ದುರುದ್ದೇಶಪೂರಿತ ಹೇಳಿಕೆ ನೀಡಿರುವ ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸ ಬೇಕು ಎಂದು ಒತ್ತಾಯಿಸಿದ್ದಾರೆ.
ತಾಲ್ಲೂಕು ನಾಯಕ ಸಮಾಜದ ಅಧ್ತಕ್ಷ ಬಡಯ್ಯ, ಕಾರ್ಯದರ್ಶಿ ಎನ್.ಜೆ. ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಟಿ. ಬಸವರಾಜ್, ಸಣ್ಣೋಬಯ್ಯ, ಕೃಷ್ಣಮೂರ್ತಿ, ರಾಜಣ್ಣ, ಲೋಕೇಶ್, ಅಶೋಕ ಸೇರಿದಂತೆ ಎಲ್ಲಾ ನಾಯಕ ಸಮುದಾಯದ ಮುಖಂಡರು ಇದ್ದರು.