ಪ್ರಜಾ ನಾಯಕ ಸುದ್ದಿ ಜಗಳೂರು :- ಅಪಾರ ಸಂಖ್ಯೆಯಲ್ಲಿ ಸ್ವಾಭಿಮಾನಿ ಬಳಗದಿಂದ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರ ಭರ್ಜರಿ ರೋಡ್ ಶೋ ನಡೆಸಲಾಯಿತು.
ಪಟ್ಟಣದ ಈಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಹೊರಟ ಮೆರವಣಿಗೆ ಭುವನೇಶ್ವರಿವೃತ್ತ,ಮಹಾತ್ಮಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಕ್ಷೇತ್ರದ 29 ಗ್ರಾಮಪಂಚಾಯಿತಿ,1 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ವಾಭಿ ಮಾನಿ ಪಕ್ಷೇತರ ಮುಖಂಡರುಗಳು ಅಧಿಕ ಸಂಖ್ಯೆಯಲ್ಲಿ ಭಾಗ ವಹಿಸಿರುವ ಇಂದಿನ ಅಭೂತಪೂರ್ವ ರೋಡ್ ಶೋ ಅತ್ಯಧಿಕ ಮತಗಳಿಂದ ನನ್ನ ಗೆಲುವಿನ ಸಂಕೇತ ಹಾಗೂ .ನನಗೆ ಟಿಕೇಟ್ ನೀಡುವಲ್ಲಿ ಮೋಸ ಮಾಡಿದವರಿಗೆ ಸಂದೇಶ ರವಾನೆಯಾಗಲಿದೆ. ಮೇ.10 ರವರೆಗೆ ಮತದಾರರ ಉತ್ಸಾಹ ಕುಗ್ಗದಿರಲಿ.ಪ್ರತಿ ಬೂತ್ ನಲ್ಲಿ ಅಧಿಕ ಮತಚಲಾಯಿಸಬೇಕು.ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾಭಿಮಾನಿಗಳ ಕಿಚ್ಚಿನ ರಥ ನಿಲ್ಲುವುದಿಲ್ಲ:-ಇದು ಜನಸಾಮಾನ್ಯ ರ ಕಿಚ್ಚಲ್ಲ.ಸ್ವಾಭಿಮಾನಿಗಳ ಕಿಚ್ಚಿನ ರಥ ಯಾವುದೇ ದುಷ್ಟ ಶಕ್ತಿ ಗಳು ಅಡ್ಡಿಪಡಿಸಿದರೂ ಕಿವಿಗೊಡದೆ ಪಾದಗಟ್ಟೆಯವರೆಗೂ ಏಕಮುಖ ವಾಗಿ ಸ್ವಾಭಿಮಾನಿ ರಥ ಎಳೆಯಿರಿ ನಾನೊಬ್ಬ ಉತ್ಸವ ಮೂರ್ತಿ ಯಾಗಿರುವೆ ಎಂದು ನಿದರ್ಶನ ನೀಡಿದರು.
ಪಕ್ಷೇತರ ಅಲೆಗೆ ರಾಷ್ಟೀಯ ಪಕ್ಷಗಳು 2ನೇ ಸ್ಥಾನ: ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಮಧ್ಯೆ ನಡೆಯಬೇಕಿದ್ದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ನಾನು ಜನರ ಆಶೀರ್ವಾದದಿಂದ ಮೊದಲನೇ ಸ್ಥಾನಕದಲ್ಲಿದ್ದು.ರಾಷ್ಟ್ರೀಯ ಪಕ್ಷಗಳು ಎರಡನೇ ಸ್ಥಾನಕ್ಕೆ ಬಂದಿವೆ ಎಂದು ಹೇಳಿದರು.
ಕ್ರಮ ಸಂಖ್ಯೆ 11ವಿಜಯದ ಸಂಕೇತ:- ವಿಜಯದ ಸಂಕೇತವಾಗಿ ರುವ ನನ್ನ ಕ್ರಮ ಸಂಖ್ಯೆ 11 ಮತ್ತು 4 ತೆಂಗಿನ ಮರಗಳುಳ್ಳ ತೋಟ ದ ಗುರುತಿಗೆ ಮತನೀಡಬೇಕು ಎಂದು ಮತಯಾಚಿಸಿ ದರು.
ಮೆರವಣಿಗೆಯರಸ್ತೆಯುದ್ದಕ್ಕೂ ಪಕ್ಷೇತರ ಅಭ್ಯರ್ಥಿಯ ಭಾವಚಿತ್ರ ಹಳದಿ ಬಾವುಟಗಳು ಕಿಕ್ಕಿರಿದ ಜನಸಂಖ್ಯೆ ಮಧ್ಯೆ ಹಾರಾಡುತ್ತಿದ್ದವು ಉತ್ತರಕರ್ನಾಟಕ ಜಾನಪದ ಜಾನಪದ ಶೈಲಿ ಡ್ರಮ್ ಸೆಟ್ ವಾಧ್ಯ ಗಮನ ಸೆಳೆಯಿತು.ಹರ್ಷೋದ್ಘಾರದಿಂದ ಮುಖಂಡರುಗಳು ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಸಿದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಕಂಚಿನ ಪುತ್ತಳಿಗೆ ಹೂವಿನ ಹಾರ ಹಾಕಿ ಗೌರವ ಸಮರ್ಪಣೆ ಮಾಡಿದರು
ಇದೇ ವೇಳೆ ಮಾಜಿ ಶಾಸಕ ಗುರುಸಿದ್ದನಗೌಡ,ಪುತ್ರರಾದ ಅರವಿಂದ್ ಗೌಡ,ಪವನ್ ಗೌಡ,ಅವರು ಬೆಂಬಲಿಸಿದರು.
ಸಂದರ್ಭದಲ್ಲಿ ಮುಖಂಡರಾದ ಯು.ಜಿ.ಶಿವಕುಮಾರ್,ಬಸವಾ ಪುರ ರವಿಚಂದ್ರ,ಬೈರೇಶ್,ತಿಪ್ಪೇಸ್ವಾಮಿಗೌಡ,ಎನ್.ಎಸ್.ರಾಜು, ಕೊಟ್ರೇಶ್,ಪುರುಷೋತ್ತಮನಾಯ್ಕ,ಗಿರೀಶ್ ಒಡೆಯರ್, ದೇವ ರಾಜ್,ಎಂ.ಎಸ್.ಪಟೇಲ್,ಕರಿಬಸವನಗೌಡ,ಚಿತ್ತಪ್ಪ,ಸೇರಿದಂತೆ ಭಾಗವಹಿಸಿದ್ದರು.