ಪ್ರಜಾ ನಾಯಕ ಸುದ್ದಿ ಜಗಳೂರು:- ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಕಾಂಗ್ರೆಸ್ ಪಕ್ಷದ ಘಟಕದ ತಾಲೂಕ ಅಧ್ಯಕ್ಷ ಮಾಳಮ್ಮ ನಹಳ್ಳಿ ವೆಂಕಟೇಶ್ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಡಳಿತ ಸರಕಾರ ಜನರ ಸಂಪೂರ್ಣ ಬಹುಮತದಿಂದ ಆಯ್ಕೆ ಯಾಗಿದ್ದು.ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿ ಮತ್ತು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರು ಶಾಸಕರಾಗಿ ಆಯ್ಕೆಯಾಗಿರುವುದು ಕಾರ್ಯಕರ್ತರಲ್ಲಿ ಹರ್ಷತಂದಿದೆ.ರಾಜ್ಯದಲ್ಲಿ ಹಾಗೂ ಜಗಳೂರು ಕ್ಷೇತ್ರ ಅಭಿವೃದ್ದಿ ಪರ್ವದತ್ತ ಸಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣಪಂಚಾಯಿತಿ ಸದಸ್ಯರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್, ಮಹಮ್ಮದ್ ಆಲಿ ರವಿಕುಮಾರ್, ಮುಖಂಡರಾದ ಡಿ.ಆರ್.ಹನುಮಂತಪ್ಪ,ನಿವೃತ್ತ ಉಪನ್ಯಾಸಕ ತಿಮ್ಮರಾಜ್, ಮರೇನಹಳ್ಳಿ ಹೊನ್ನೂರಪ್ಪ. ಬಂಗಾರಕ್ಕನಗುಡ್ಡ ರಾಮಚಂದ್ರಪ್ಪ ಶೇಖರಪ್ಪ,ಜೀವಣ್ಣ,ಚಂದ್ರಪ್ಪ ಪೇಂಟ್ ಕಲೀಲ್ ಸಾಬ್. ಮಾನವ ಬಂದು ವೇದಿಕೆ ಸಂಚಾಲಕ ಧನ್ಯ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.