ಪ್ರಜಾ ನಾಯಕ ಸುದ್ದಿ ಜಗಳೂರು: ಶುಚಿತ್ವ ಮತ್ತು ನೈರ್ಮಲ್ಯದ ಕೊರತೆಯು ಅನೇಕ ರೀತಿಯ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಹೇಳಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ವಕೀಲರ ಸಂಘದಿಂದ ನನ್ನ ಲೈಫ್ -ನನ್ನ ಸ್ವಚ್ಛ ನಗರದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದರು.
ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸಬಹುದು. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರ ಜೀವನ ಕ್ಕಾಗಿ ಶುಚಿತ್ವ ಹೊಂದಿರಬೇಕಾದ ಲಕ್ಷಣವಾಗಿದೆ. ಸ್ವಚ್ಛತೆ ರೋಗ ಗಳನ್ನು ದೂರವಿಡುತ್ತದೆ. ಇದು ನಮಗೆ ಹೊಸ ಜ್ಞಾನವೇನಲ್ಲ. ಸ್ವಲ್ಪ ಸಾಮಾನ್ಯ ಜ್ಞಾನ ಹೊಂದಿರಬೇಕು ಎಂದು ಸಲಹೆ ನೀಡಿದರು.
ಕೇವಲ ಬ್ಯಾನರ್ ಹಿಡಿಯಲು ಅಥವಾ ಫೋಟೋಕ್ಕಾಗಿ ಕಾರ್ಯ ಕ್ರಮವಗದೇ ಪಟ್ಟಣದ ಪ್ರತಿ ಬೀದಿ ಬೀದಿಗಳಲ್ಲೂ ಸ್ವಚ್ಛತೆಯಿಂದ ಕೂಡಿರಬೇಕು. ಸರ್ಕಾರ ಸ್ವಚ್ಛತೆಗಾಗಿ ಸಾಕಷ್ಟು ಕಾರ್ಯಕ್ರಮ ಗಳನ್ನು ಕೊಟ್ಟಿದೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಆರೋಗ್ಯಕರವಾದ ವಾತಾವರಣ ಉಂಟಾಗಲು ಸಾಧ್ಯವಾಗುತ್ತದೆ ಎಂದರು.
ನ್ಯಾಯಾಧೀಶ ಮಹಮ್ಮದ್ ಯೂಸೂಫ್ ಅಥಣಿ ಮಾತನಾಡಿ, ಸ್ವಚ್ಛ ಭಾರತ್ ಮಿಷನ್ನಂತಹ ಬಹು ಮಿಷನ್ಗಳಿವೆ, ಇದು ಸಾರ್ವತ್ರಿಕ ನೈರ್ಮಲ್ಯಕ್ಕಾಗಿ ಜನರ ಪ್ರಯತ್ನಗಳನ್ನು ವೇಗಗೊಳಿ ಸಲು ಭಾರತ ಸರ್ಕಾರವು ಕೈಗೊಂಡ ಉಪಕ್ರಮವಾಗಿದೆ.
ಸ್ವಚ್ಛ ಭಾರತ ಮಿಷನ್ ಅಥವಾ ಸ್ವಚ್ಛ ಭಾರತ ಅಭಿಯಾನ, ಅಕ್ಟೋಬರ್ 2, 2014 ರಂದು ಪ್ರಧಾನಮಂತ್ರಿ ಪ್ರಾರಂಭಿಸಿದರು. ಈದೇಶ ವ್ಯಾಪಿ ಅಭಿಯಾನ ನಡೆಯುತ್ತಿದೆ. ನಾವು ಒಂದಾಗೋಣ ಮತ್ತು ಸ್ವಚ್ಛ, ಆರೋಗ್ಯಕರ ಭಾರತದತ್ತ ಹೆಜ್ಜೆ ಹಾಕೋಣ ಎಂದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ, ನಾವು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕುನಾವು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಕುಟುಂಬ, ನೆರೆಹೊರೆಯರಲ್ಲಿ ಈ ವಿಚಾರವನ್ನು ಹಂಚಿಕೊಂಡು ಜಾಗೃತಿ ಮೂಡಿಸುವುದರಿಂದ ಎಲ್ಲವು ಕಾರ್ಯರೂಪಕ್ಕೆ ಬರುತ್ತವೆ. ಎಲ್ಲವನ್ನು ಅಧಿಕಾರಿಗಳೇ ಮಾಡಲು ಸಾಧ್ಯವಿಲ್ಲ ಸಾರ್ವಜನಿಕರ ಸಹಕಾರ ತುಂಬ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಓಂಕಾರಪ್ಪ, ಹಿರಿಯ ವಕೀಲರಾದ ಕೆ.ಎಂ ಬಸವರಾಜಪ್ಪ, ಶರಣಪ್ಪ, ವೈ. ಹನುಮಂತಪ್ಪ, ಕರಿಬಸಯ್ಯ, ರುದ್ರೇಶ್, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರಿದ್ದರು