ಪ್ರಜಾ ನಾಯಕ ಸುದ್ದಿ ಜಗಳೂರು :- ಶಿಕ್ಷಕರು ವಿದ್ಯಾರ್ಥಿಗಳ ಬೌದ್ದಿ ಕ ಮೂರ್ತಿಯನ್ನಾ ಗಿಸುವ ಶಿಲ್ಪಿಗಳು ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮನುಷ್ಯನ ಬೌದ್ದಿಕ ವಿಕಸನಗೊಳಿಸುವ ಪವಿತ್ರ ವಾದ ಶಿಕ್ಷಕರ ವೃತ್ತಿಯನ್ನು ಯಾರೊಬ್ಬರೂ ಮರೆಯದೆ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯಿಂದ ಸೇವೆಗೈಯಬೇಕು ಎಂದು ಸಲಹೆ ನೀಡಿದರು.
ಸರಕಾರವು ರಾಜ್ಯದಲ್ಲಿ ಶೈಕಣಿಕ ಪ್ರಗತಿಗೆ ಉಚಿತ ಪಠ್ಯಪುಸ್ತಕ,ಶೂ, ಬ್ಯಾಗ್ ,ಸಮವಸ್ತ್ರ,ವಿದ್ಯಾರ್ಥಿವೇತನ,ನೋಟ್ ಬುಕ್ ವಿತರಣೆ ಸೌಲಭ್ಯಗಳು ಹಾಗೂ ನಲಿಕಲಿ ಇತರೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.ಮಕ್ಕಳಲ್ಲಿ ಅಪೌಷ್ಠಿಕತೆ ನೀಗಿಸುವಲ್ಲಿ ಮುಖ್ಯವಾಗಿರುವ ಅಕ್ಷರದಾಸೋಹ ಬಿಸಿಯೂಟ ಯೋಜನೆಯ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ನಿರ್ವಹಣೆಗೆ ಶಿಕ್ಷಕರು ಕಾಳಜಿವಹಿಸಬೇಕು ಎಂದು ಕಿವಿಮಾತುಹೇಳಿದರು. ಶಿಕ್ಷಕರು ಆಧುನಿಕ ಅಮರಶಿಲ್ಪಿ ಜಕಣಚಾರಿಗಳಿದ್ದಂತೆ ಕಲ್ಲನ್ನು ಸುಂದರ ಶಿಲೆಯನ್ನಾಗಿಸುವ ಕಲೆ ಶಿಕ್ಷಕರಲ್ಲಿ ಅಡಗಿದೆ.ಮೂಕರ ನ್ನು ವಾಚಿಸುವಂತೆ ಮಾಡುತ್ತಾರೆ.ಹಣ ಆಸ್ತಿ ಗಳಿಸಬಹುದು. ಮತ್ತೊಮ್ಮಬ್ಬರು ಕಸಿದುಕೊಳ್ಳಬಹುದು.ಆದರೆ ವಿದ್ಯೆಯು ಕದಿಯ ಲಾಗದ ಆಸ್ತಿಯಾಗಿದೆ.ವಿದ್ಯಾರ್ಥಿಗಳು ಗುರುವಿನ ಗುಲಾಮರಾಗ ಬೇಕು ಎಂದ ಅವರು.ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್ 5 ರಂದು ವಿನೂತನ ಶಿಕ್ಷಕರ. ದಿನಾಚರಣೆಯನ್ನು ಒಗ್ಗಟ್ಟಿನಿಂದ ಆಚರಿಸೊಣ ಶಿಕ್ಷಕರು ಗೈರಾಗದಂತೆ ಭಾಗಿಯಾಗಿ ಶಿಕ್ಷಕರ ಮಹತ್ವ ಅರಿಯ ಬೇಕು ಎಂದರು.
ನನ್ನನ್ನು ಶಾಸಕನನ್ನಾಗಿ ಆಯ್ಕೆಮಾಡಿರುವ ತಮ್ಮ ಧ್ವನಿಯಾಗಿರುವೆ. ತಮ್ಮ ಸ್ವಯಂ ಕೆಲಸಕಾರ್ಯಗಳಿಗೆ ನನ್ನನ್ನು ಹೊಗಳಬೇಡಿ ನಾನಿ ನ್ನು ಕಲಿಯುವ ಅನಾನುಭವಿ ಶಾಸಕ ನನಗೆ ಜನಪ್ರಿಯ ಶಾಸಕನ ಬಿರುದು ಸಲ್ಲದು.5 ವರ್ಷದಲ್ಲಿ ಕ್ಷೇತ್ರದಲ್ಲಿ ಕಸಗುಡಿಸಿ ಗಂಟೆ ಬಾರಿ ಸಿ ಅಭಿವೃದ್ದಿ ಗೊಳಿಸುವೆ ನಂತರ ಸಮರ್ಥನಾಗಿದ್ದರೆ ಬಿರುದು ಕೊಡಿ ಎಂದು ಹೇಳಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತ ನಾಡಿ,ಯಾವುದೇ ಕೈಗಾರಿಕೆ,ಜಲಮೂಲಗಳಿಲ್ಲದ ಬರದನಾಡಿನಲ್ಲಿ ಶಿಕ್ಷಣವೇ ಆಸ್ತಿಯಾಗಿದೆ.ತಾಲೂಕಿಗೆ ಹೆಚ್ಚು ಅನುದಾನ ತಂದು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಶಾಸಕರು ಒದಗಿಸಬೇಕು.ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ವರ್ಷಕ್ಕೆ ಕನಿಷ್ಠ 25 ನೂತನ ಕೊಠಡಿಗಳನ್ನು ನಿರ್ಮಿಸಲು ಮುಂದಾಗಬೇಕು.ಶಿಥಿ ಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನಮ್ಮ ಆಡಳಿತಾವಧಿ ಸರಕಾರದಲ್ಲಿ ದುರಸ್ಥಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಬಿ.ಆರ್.ಸಿ ಡಿಡಿ ಹಾಲಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆ ಮುಕ್ತಾಯವಾಗಿದ್ದು. ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕನ್ನೇ ಅವಲಂಬಿಸಿವೆ. ಶಾಸಕ ರು ಶಿಕ್ಷಕರ ಕೊರತೆ ನೀಗಿಸಬೇಕಿದೆ ಎಂದು ಮನವಿಮಾಡಿದರು.
ಇದೇ ವೇಳೆ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತರಾದ 27 ಶಿಕ್ಷಕ ರಿಗೆ ಹಾಗೂ ನೂತನ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಹುದ್ದೆಯಿಂದ ಪದ ನಿಮಿ ತ್ತ ಗೊಂಡು ವರ್ಗಾವಣೆಗೊಂಡ ಉಮಾದೇವಿ ,ಪ್ರಭಾರ ಕ್ಷೇತ್ರ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ,ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಗೌಡ,ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ಹನುಮಂತೇಶ್.ಕಾರ್ಯಧರ್ಶಿ ಆಂಜನೇ ಯ ನಾಯ್ಕ್, ಎನ್ ಜಿ ಓ ಮಾಜಿ ಅದ್ಯಕ್ಷ ಸತೀಶ್,ಮಾಜಿ ಅದ್ಯಕ್ಷ ಆನಂದಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿ ಕಾರಿಗಳಾದ ಪ್ರಕಾಶ್. ರೂಪಾ,ಹುಲ್ಲೆಪ್ಪ,ದೊಣ್ಣೆಹಳ್ಳಿ ವಿರೇಶ್,ದೈಹಿ ಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮೂರ್ತಿ,ಸೇರಿದಂತೆ ಭಾಗವಹಿ ಸಿದ್ದರು.