ಪ್ರಜಾ ನಾಯಕ ಸುದ್ದಿ ಜಗಳೂರು :- ವಿದ್ಯಾರ್ಥಿಗಳು ತರಗತಿ ಯಲ್ಲಿ ಅತ್ಯುನ್ನತ ಶ್ರೇಣಿ ಗಳಿಸುವ ಕನಸ್ಸು ಹೊಂದಿರಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.
ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ಪರಿಶಿಷ್ಟ ಪಂಗಡದ (ಪ.ವರ್ಗ) ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅವರು ವಿದ್ಯಾರ್ಥಿನಿಯರ ಕುಶಲೋಪರಿ ವಿಚಾರಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜೀವನ ಬಂಗಾರದಂತಹ ಜೀವನ ವಿದ್ಯಾರ್ಥಿ ದೆಸೆ ಯಲ್ಲಿ ಉನ್ನತ ಹುದ್ದೆಯ ಗುರಿ ಸಾಧಿಸುವ ಛಲ ನಿಮ್ಮ ದಾಗಬೇಕು. ಉತ್ತಮ ಸೌಕರ್ಯಗಳಿರುವ ವಸತಿನಿಲಯದಲ್ಲಿ ಸದುಪಯೋಗ ಪಡೆದುಕೊಂಡು ಉತ್ತಮ ವ್ಯಾಸಂಗದೊಂದಿಗೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಪೋಷಕ ರಿಗೆ ಇಲಾಖೆಗೆ ಕೀರ್ತಿ ಎಂದರು.
ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಕೆಟ್ಟದ್ದನ್ನು ಡಿಲೀಟ್ ಮಾಡಿ ಒಳ್ಳೆಯದನ್ನು ಸೇವ್ ಮಾಡಿ :- ವಿದ್ಯಾರ್ಥಿಗಲ ಕಲಿಕೆಗೆ ಪೂರಕ ವಾಗಿರುವ ಮೊಬೈಲ್ ಬಳಕೆ ತಪ್ಪಲ್ಲ.ಅದರಲ್ಲಿ ಉತ್ತಮ ಸಂದೇಶ ಅವಶ್ಯಕ ಕಲಿಕಾ ಸಂಪನ್ಮೂಲಗಳನ್ನು ಉಳಿಸಿಕೊಳ್ಳಿ ಕೆಟ್ಟ ಸಂದೇಶ ಮಾಹಿತಿಗಳನ್ನು ಅಳಿಸಿಹಾಕಿ.ಸಮಾಜದಲ್ಲಿ ನಿಮ್ಮ ಬದುಕು ಕೈಗನ್ನ ಡಿಯಾಗಿರಲಿ ಎಂದು ಸಲಹೆ ನೀಡಿದರು.
ನಿಲಯ ಮೇಲ್ವಿಚಾರಕರು ಅಧಿಕಾರಿಗಳು ವಸತಿನಿಲಯದಲ್ಲಿ ತಮ್ಮ ಭವಿಷ್ಯಕ್ಕೆ ಮಾರ್ಗದರ್ಶನ ನೀಡಬಹುದು.ಆದರೆ ಸ್ಪರ್ಧಾತ್ಮಕ ಜಗ ತ್ತಿನಲ್ಲಿ ತಮ್ಮ ಭವಿಷ್ಯ ತಮ್ಮ ಕೈಯಲ್ಲಿದೆ ಎಂದು ಪಾರಿವಾಳ ಜ್ಯೋತಿ ಷಿ ಅವರ ಕಥೆಯೊಂದಿಗೆ ನಿದರ್ಶನ ನೀಡಿದರು.ಎಲ್ಲಿ ನಾರಿಯರು ಇರುತ್ತಾರೋ ಅಲ್ಲಿ ದೇವತೆಗಳು ನೆಲೆಸಿರು ತ್ತಾರೆ ಎಂಬ ನಾಣ್ಣುಡಿ ಯಂತೆ ಸಮಾಜದಲ್ಲಿ ಮಹಿಳೆಯರಿಗೆ ಗೌರವಸ್ಥಾನವಿದೆ.ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮದಾಗಲಿ ಡಾ.ಬಿ.ಆರ್ ಅಂಬೇಡ್ಕ ರ್ ಅವರ ಸ್ವಾಭಿಮಾನ ದ ಬದುಕು,ಐತಿಹಾಸಿಕ ಮಹಿ ಳಾ ಹೊರಾಟಗಾರ್ತಿಯರು ಆದರ್ಶವಾಗಲಿ ಎಂದು ಹಾರೈಸಿದರು.
ಹಾಸ್ಟೆಲ್ ವ್ಯವಸ್ಥೆ ಕಂಡು ಪ್ರಶಂಸೆ ವ್ಯಕ್ತಪಡಿಸಿದ ಶಾಸಕ:- ಬರದ ನಾಡಿನ ಬಡಮಕ್ಕಳಿಗೆ ವಸತಿನಿಲಯದ ವ್ಯವಸ್ಥೆ ಸುಸಜ್ಜಿತ ಕಟ್ಟಡ ಯಾವ ಐಷರಾಮಿ ಹೊಟೆಲ್ ಗೂ ಕಡಿಮೆಯಿಲ್ಲ.ಉತ್ತಮ ಅಡುಗೆ ಕೊಠಡಿ,ವಸತಿಗೆ ಬೆಡ್ ವ್ಯವಸ್ಥೆ,ಶುಚಿರುಚಿಯಾದ ಊಟ,ಗಾಳಿ ಬೆಳಕಿನ ಹಾಗೂ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನ ಹೈಫೈ ಸೌಲಭ್ಯ ವಿದೆ ಎಂದು ಪ್ರಶಂಸಿದರು.
ವಿದ್ಯಾರ್ಥಿ ಜೀವನ ಸ್ಮರಿಸಿದ ಶಾಸಕ :-ನಾನು ಪಿಯುಸಿ ವ್ಯಾಸಂಗ ಮಾಡುವಾಗ ಸರಿಯಾಗಿ ಒಪ್ಪತ್ತಿನ ಊಟವಿರ ಲಿಲ್ಲ.ಹಾಸಿಗೆ ಹೊದಿ ಕೆಯಿಲ್ಲದೆ ಗೋಣಿ ಚೀಲ ಬಳಕೆಮಾಡು ತ್ತಿದ್ದೆ. ಕಷ್ಟದ ಮಧ್ಯೆ ಉತ್ತಮ ವ್ಯಾಸಂಗ ಮಾಡಿದೆ.ಫಲವಾಗಿ ನನ್ನ ಹಾಗೂ ನನ್ನ ಮಕ್ಕಳ ಭವಿಷ್ಯ ಉಜ್ವಲವಾಗಿದೆ ಎಂದು ಸ್ಮರಿಸಿದರು.
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವ ರಪ್ಪ ಮಾತನಾಡಿ,ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಉತ್ತಮ ಗುಣಮಟ್ಟದ ವಿದ್ಯಾ ರ್ಥಿ ನಿಯರ ಹಾಸ್ಟೆಲ್ ಸೌಲಭ್ಯವಿದೆ.ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ.ಪ್ರತಿ ಹಾಸ್ಟೆಲ್ ನಲ್ಲಿ ವರ್ಷಕ್ಕೆ 100 ವಿದ್ಯಾರ್ಥಿನಿ ಯರ ದಾಖಲಾತಿಗೆ ಅವಕಾಶವಿದೆ ಅದರಲ್ಲಿ ಶೇ.25 ರಷ್ಟು ಸಾಮಾ ನ್ಯ ವರ್ಗದವರಿಗೆ ಪ್ರಾಶಸ್ತ್ಯ ನೀಡಲಾಗು ವುದು ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ನಿಲಯ ಪಾಲಕರಾದ ಮಂಗಳ ಕನಗವಳ್ಳಿ. ರಾತ್ರಿ ಕಾವಲುಗಾರದ ಅನಿತ. ಅಡಿಗೆ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿ ಯರು ಉಪಸ್ಥಿತರಿದ್ದರು.