ಪ್ರಜಾ ನಾಯಕ ಸುದ್ದಿ ಜಗಳೂರು :- ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆಗೈಯುತ್ತಿರುವ ಹೊರಗುತ್ತಿಗೆ ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಏಕಲವ್ಯ,ಅಂಬೇಡ್ಕರ್, ಮೊರಾರ್ಜಿ,ಕಿತ್ತೂರು ರಾಣಿ ವಸತಿ ಶಾಲೆಗಳಲ್ಲಿ ಸೇವೆಗೈಯುತ್ತಿರುವ ಡಿ ಗ್ರೂಪ್ ನೌಕರರು ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.
ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್ ನೌಕರರು ಬಡತನದ ಜೀವನ ಸಾಗಿಸುತ್ತಿದ್ದು.ಸುಮಾರು ವರ್ಷ ಗಳಿಂದ ಯಾವುದೇ ವೃತ್ತಿ ಭದ್ರತೆಯಿಲ್ಲದೆ ವಸತಿ ಶಾಲೆ ಮಕ್ಕಳ ಸೇವೆಯಲ್ಲಿ ತೊಡಗಿದ್ದು.ಖಾಯಂ ಗೊಳಿಸಲು ಆಗಸ್ಟ್ 15 ರಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿ ದರು.
ಶಾಸಕ ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ ಸರಕಾರದ ಮಟ್ಟದಲ್ಲಿ ತಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು.ಕ್ರೈಸ್ ನಡಿಯಲ್ಲಿ ನಡೆ ಯುತ್ತಿರುವ ವಸತಿ ಶಾಲೆಗಳ ಉನ್ನತೀಕರಣಕ್ಕೆ ಅಗತ್ಯ ಕ್ರಮವಹಿಸ ಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಡಿ ಗ್ರೂಪ್ ನೌಕರರ ಸಂಘದ ಪದಾಧಿಕಾರಿಗಳಾದ ಉದ್ಗಟ್ಟ,ದುರುಗೇಶ್,ಸಂತೋಷ್,ಮಣಿಕಂಠ,ಶಮಿನಾಬಾನು,ರೇಖಮ್ಮ,ಗೆಲಿಲ್,ಯಲ್ಲಪ್ಪ,ಮೂರ್ತಿ,ತಿಪ್ಪೇಸ್ವಾಮಿ,ನಾಗರಾಜ್,ರಂಗಸ್ವಾಮಿ,ಪರುಶರಾಮ್,ಸಂತೋಷ.ಸೇರಿದಂತೆ ಇದ್ದರು.