ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಗುತ್ತಿದುರ್ಗ ಗ್ರಾ.ಪಂ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾನಸ ಲಿಂಗರಾಜ್ ಹಾಗೂ ಉಪಾಧ್ಯಕ್ಷರಾಗಿ ಅರ್ಜುನ್ ಗುರುವಾರ ನಡೆದ ಚುನಾ ವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುತ್ತಿದುರ್ಗ ಗ್ರಾ.ಪಂ ಅನುಸೂಚಿತ ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕ್ಕೆ ಮೀಸಲು ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಾನಸ ಒಬ್ಬರೇ ನಾಮ ಪತ್ರ ಸಲ್ಲಿಸಿದರು ಅದರಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜುನ್ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಆದ್ದರಿಂದ ಮಾನಸ ಅಧ್ಯಕ್ಷರಾಗಿ ಹಾಗೂ ಉಪಧ್ಯಕ್ಷರಾಗಿ ಅರ್ಜುನ್ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಹಾಗೂ ಪಶು ಸಂಗೋಪನೆ ಇಲಾಖೆ ಸಹಾಯಕ ನೀರ್ದೇಶಕ ಲಿಂಗರಾಜ್ ಅಧಿ ಕೃತವಾಗಿ ಘೋಷಣೆ ಮಾಡಿದ್ದಾರೆ
ಗ್ರಾ.ಪಂ ಯಲ್ಲಿ ೧೬ ಜನರ ಸದಸ್ಯರ ಬಲ ಹೊಂದಿದ್ದು ಎಲ್ಲಾ ಒಪ್ಪಿಗೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು ಅಲ್ಲದೇ ಇಬ್ಬರು ಸದಸ್ಯರು ಗೈರಾಗಿದ್ದರು.
ನಂತರ ಮಾತನಾಡಿದ ನೂತನ ಅಧ್ಯಕ್ಷೆ ಮಾನಸ ಗುತ್ತಿದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ, ಶೈಕ್ಷಣಿಕ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಕಡೆ ಹೆಚ್ಚು ಅಧ್ಯತೆ ನೀಡಲಾಗುವುದು ಎಲ್ಲಾ ಗ್ರಾಮಗಳ ಮುಖಂಡರು ಮತ್ತು ಸದಸ್ಯರ ಸಹಮತದಿಂದ ಅಭಿವೃದ್ಧಿ ಕೆಲಸ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯತ್ರಿ ಬಾಯಿ. ಟಿ ಕುಮಾರ್. ಜಾನಮ್ಮ. ಬಸವನಗೌಡ.ಕವಿತಾ ಕುಮಾರಿ. ಅನುಸೂಯಮ್ಮ. ಗಿರಿಜಮ್ಮ. ಹನುಮಕ್ಕ. ಹನುಮಂತಪ್ಪ. ನಟ ರಾಜ. ನಿಜಲಿಂಗಪ್ಪ. ರೇಣುಕಮ್ಮ. ಸೇರಿದಂತೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಬಸವರಾಜಯ್ಯ. ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರಿದ್ದರು.