ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ದೊಣ್ಣೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಯ ಅಕ್ರಮ ನೇಮಕಾತಿ ಖಂಡಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವ ದಲ್ಲಿ ಪಟ್ಟಣದ ತಾಲೂಕು ಕಛೇರಿ ಮುಂಬಾಗ ಪ್ರತಿಭಟನೆ ನಡೆಸಿ ನಂತರ ಉಪ ತಹಶೀಲ್ದಾರ್ ಮಂಜಾನಂದ ಇವರಿಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದ ಪ್ಪ ಮಾತನಾಡಿ ದೊಣ್ಣೆ ಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಖಾಲಿಯಾದ ಕಾರ್ಯನಿರ್ವಾಹಣಾಧಿಕಾರಿಯ ಹುದ್ದೆಗೆ ಅರ್ಹ ರನ್ನು ಪರಿಗಣಿಸದೆ ಕಾನೂನು ವಸಲಿ ಬಾಜಿನಿಂದ ಅನರ್ಹ ಹೊರ ಗಿನ ಯುವಕನನ್ನು ಅಕ್ರಮವಾಗಿ ನೇಮಕ ಮಾಡಿಕೊಂಡು ಅದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಟೆಂಡ್ ಕಮ್ ಮಾರಾ ಟಗಾರ ಎ.ಟಿ ತಿಪ್ಪೇಸ್ವಾಮಿ ಇವರಿಗೆ ವಂಚಿಸಲಾಗಿದೆ ಸಹಕಾರ ಸಂಘ ದಲ್ಲಿ 25 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ತಿಪ್ಪೇ ಸ್ವಾಮಿ ದಲಿತ ನೌಕರನಾಗಿದ್ದು ಈ ವ್ಯಕ್ತಿಯ ಬಡ್ತಿಯ ಮೂಲಕ ಕಾರ್ಯನಿರ್ವಾಹಕ ಹುದ್ದೆಗೆ ಅರ್ಹನಾಗಿರುತ್ತಾನೆ ಸೇವಾ ಅನು ಭವ ಸೇರಿದಂತೆ ತಕ್ಕ ವಿದ್ಯಾರ್ಹತೆಯನ್ನು ಈ ವ್ಯಕ್ತಿ ಹೊಂದಿರುತ್ತಾನೆ ಹೀಗಿದ್ದರೂ ಸಹ ಈತನಿಗೆ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆ ಯನ್ನು ವಂಚಿಸಲಾಗಿದೆ ಇದಕ್ಕೆ ನೇರ ಹೊಣೆಗಾರರಾದ ಆಡಳಿತ ಮಂಡಳಿ ಮತ್ತು ಉಸ್ತುವಾರಿ ಪದ ನಿಮಿತ್ತ ಅಧಿಕಾರ ಹೊಂದಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೇಲೆ ತಕ್ಷಣವೇ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅನುಸಾರ ಕ್ರಿಮಿ ನಲ್ ಮಖದಲ್ಲಿ ದಾಖಲಿಸಬೇಕೆಂದರು
ವಕೀಲರಾದ ಆರ್.ಓಬಳೇಶ್ ಮಾತನಾಡಿ ಅಟೆಂಡೆಂಟ್ ಕಂ ಮಾರಾಟಗಾರನಾಗಿ ಎ.ಟಿ.ತಿಪ್ಪೇಸ್ವಾಮಿ ಬಿನ್ ತಿಪ್ಪಯ್ಯ ಎಂಬ ದಲಿತ ವ್ಯಕ್ತಿ ಕಳೆದ 25 ವರ್ಷಗಳಿಂದ ಸೇವೆಗೈಯುತ್ತಿದ್ದು. ಬಡ್ತಿಗೆ ಅರ್ಹನಾಗಿದ್ದಾರೆ.ಆದರೆ ಕಾನೂನು ಬಾಹಿರವಾಗಿ ಮನೋಜ್ ಎಂಬ ಯುವಕ ಕೇವಲ ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ.ಸರ ಕಾರದ ನಿಯಮಾವಳಿ ಗಾಳಿಗೆ ತೂರಿ ನೇಮಕಮಾಡಿರುವುದು ಸರಿ ಯಲ್ಲ.ಕೂಡಲೇ ಎಸ್. ಎಸಿ ಎಸ್ ಟಿ ದೌರ್ಜನ್ಯ ಕಾಯ್ದೆ ಯಡಿ ಪ್ರಕರಣ ದಾಖಲಿಸಬೇಕು.ಅಲ್ಲದೆ ಸಹಕಾರ ನಿಬಂಧಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಹಾಗೂ ಪವನ್ ಭರತ್ ಗ್ಯಾಸ್ ಮಾಲಿಕ ಓಬಣ್ಣ ಮಾತನಾಡಿ ರಾಜ್ಯ ಸರ್ಕಾರ ಆದೇಶ ಉಲ್ಲಂಘನೆ ಮಾಡಿದ ಅಧಿ ಕಾರಿಗಳು ಸ್ಥಳಿಯ ಅದ್ಯಕ್ಷ ಸರ್ವಸದಸ್ಯರುಗಳು ಈ ರೀತಿ ಕಾನೂ ನು ಬಾಹಿರವಾಗಿ ಸಭೆಯಲ್ಲಿ ಏಕಪಕ್ಷಿಯವಾಗಿ ನಿರ್ಣಯಿಸಿ ಸರ್ವಾ ಧಿಕಾರ ಧೊರಣೆ ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾ ಗಲೇ ಆಯ್ಕೆ ಮಾಡಿರುವ ಸಹಕಾರ ಬ್ಯಾಂಕ್ ಕಾರ್ಯದರ್ಶಿ ಹುದ್ದೆ ಯಿಂದ ವಜಾಗೋಳಿಸಿ ನಿಯಮಾನಸಾರ ವಾಗಿ ದಲಿತ ಸಮು ದಾಯದ ತಿಪ್ಪೇಸ್ವಾಮಿ ಎಂಬುವವರುನ್ನು ಆಯ್ಕೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ದಸಂಸ ಮುಖಂಡ ಸತೀಶ್ ಮಲೆ ಮಾಚಿಕೆರೆ ಮಾತನಾಡಿ ತಾಲೂ ಕಿನ ದೊಣ್ಣೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಲ್ಲಿ ಪದೋನ್ನತಿ ವಿಚಾರವಾಗಿ ನಡೆದಿರುವ ಅಕ್ರಮ ವನ್ನು ಹಾಗೂ ದಲಿತ ನೌಕರನಿಗೆ ವಂಚಿಸಿರುವುದನ್ನ ನಮ್ಮ ಪ್ರಗತಿಪರ ಸಂಘಟ ನೆಗಳ ಮೂಲಕ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವು ದಿಲ್ಲ. ತಹಶೀಲ್ದಾರ್ ಮುಖಾಂತರ ಸಹಾಯಕ ನಿಬಂಧಕರು ಜಿಲ್ಲಾ ಕೃಷಿ ಪತ್ತಿನ ಸಹಕಾರ ಸಂಘ.ದಾವಣಗೆರೆ ಇವರಿಗೆ ಮನವಿ ನೀಡಿ ದ್ದೆವೆ ಈಗಾಗಲೇ ನೇಮಕಾತಿ ಮಾಡಿದ ಹುದ್ದೆಯನ್ನು ರದ್ದುಪಡಿಸಿ ದಲಿತ ಸಮುದಾಯದ ತಿಪ್ಪೇಸ್ವಾಮಿ ನೇಮಕ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಗತಿ ಪರ ಸಂಘಟನೆಗಳ ಮುಖಂಡರಾದ ಪತ್ರಕರ್ತರಾದ ಎಮ್.ರಾಜಪ್ಪ. ವ್ಯಾಸಗೊಂಡನಹಳ್ಳಿ,ದಲಿತ ಸಂಘ ರ್ಷ ಸಮಿತಿ ಸಂಚಾಲಕ ರಾದ ಗೌರಿಪುರ ಕುಬೇರಪ್ಪ, ಮಹಾ ಲಿಂಗಪ್ಪ.ರಾಜ ಶೇಖರ್, ರೈತ ಸಂಘದ ಮುಖಂಡ ಭರಮ ಸಮುದ್ರ ಕುಮಾರ್ .ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ದೊಣ್ಣೆಹಳ್ಳಿ ಬಸವ ರಾಜ್.ದಲಿತಪರ ಸಂಘಟನೆ ಪದಾಧಿಕಾರಿ ಗಳಾದ ಕ್ಯಾಸೆನಹಳ್ಳಿ ಹನುಮಂತಪ್ಪ.ಮೆದಗಿನಕೆರೆ ಹನುಮಂತ ಪ್ಪ. ಮಂಜುನಾಥ. ಪಲ್ಲಾಗಟ್ಟೆ ರವಿ.ತಿಮ್ಮಣ್ಣ. ಕ್ಯಾಂಪ್ ಕರಿಬಸಪ್ಪ. ಗೋಡೆ ದುರುಗಪ್ಪ.ಮುಖಂಡ ರಾಜಶೇಖರ.ದೋಣ್ಣೆ ಹಳ್ಳಿ ಗ್ರಾಮ ಸ್ಥರಾದ ಮಹಾಂತೇಶ್.ಕಣ್ಣಪ್ಪ.ಮೈಲಾರಪ್ಪ.ಏಕಾಂತ ಪ್ಪ. ದುರು ಗಪ್ಪ. ರುದ್ರಪ್ಪ.ಮಾರುತಿ .ಪ್ರಸನ್ನ.ಪವನ್.ಗಣೇಶ್ .ಮಂಜು ನಾಥ.ಏಕಾಂತಮ್ಮ ದುರುಗಮ್ಮ. ರತ್ನಮ್ಮ.ಮಂಜಮ್ಮ. ನಿಂಗಪ್ಪ ಮುಸ್ಟೂರು.ದಂಡ್ಯ ಪ್ಪ. ಸೇರಿದಂತೆ ಹಾಜರಿದ್ದರು