ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ತುಮಾಟಿ ಬಡಾ ವಣೆಯ 9 ನೇ ವರ್ಷದ ಬಾಲ್ಯ ಗಣೇಶೋತ್ಸವದ ವಿಸರ್ಜನಾ ಕಾರ್ಯ ಕ್ರಮ ಅದ್ದೂರಿಯಾಗಿ ಜರುಗಲಿದೆ ಎಂದು ಗಣೇಶ ಉತ್ಸವ ಸಮಿತಿ ಯುವಕರು ಪತ್ರಿಕೆ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ವಿಸರ್ಜನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ ಬಾಲ್ಯ ಗಣಪತಿಗೆ ರುದ್ರಾಭಿಷೇಕ ಮಹಾಮಂಗಳಾರತಿ, 11 ಗಂಟೆಗೆ ಸ್ವಾಮಿಯ ಹರಾಜು ಪ್ರಕ್ರಿಯೆ, ಮತ್ತು ಅನ್ನ ಸಂತ ರ್ಪಣೆ ಕಾರ್ಯಕ್ರಮ ಗಳು ನಡೆಯಲಿವೆ.
12 ಗಂಟೆಗೆ ಬೃಹತ್ ಶೋಭ ಯಾತ್ರೆಯ ದಿವ್ಯ ಸನಿಧ್ಯವನ್ನು ಕಣ್ವ ಕುಪ್ಪೆ ಗವಿಮಠದ ಶ್ರೀ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಣ್ವಕುಪ್ಪೆ ಗವಿಮಠ ವಹಿಸಲಿ ದ್ದಾರೆ.ಹಾಗೂ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಸೇರಿದಂತೆ ನಗರದ ಪ್ರಮುಖ ಮುಖಂಡರು ಬೃಹತ್ ಶೋಭಾ ಯಾತ್ರೆ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಾದ್ಯಮೇಳ ಕಲಾ ತಂಡಗಳಿಂದ ಬೃಹತ್ ಶೋಭಾ ಯಾತ್ರೆ ಮೆರ ವಣಿಗೆ :-ಗಣೇಶನ ವಿಸರ್ಜನ ಕಾರ್ಯಕ್ರಮದ ಮೆರವ ಣಿಗೆಯು ಜಗಳೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನ ಪದ ಕಲಾ ತಂಡ ಗಳಿಂದ.ವೀರಗಾಸೆ,ನಂದಿಕುಣಿತ,ಪೂಜಾ ಕುಣಿತ, ತಮ ಟೆ, ಡೊಳ್ಳು ಕುಣಿತ, ನಾಸಿಕ್ ಡೋಲ್, ವೇಷ ಧಾರಿಗಳಿಂದ ಗೊಂಬೆ ಕುಣಿತ, ಸೇರಿ ದಂತೆ ವಿವಿಧ ವಾದ್ಯ ಮೇಳದೊಂದಿಗೆ ವಿಜೃಂಭಣೆಯ ಮೆರವಣಿಗೆ ಸಾಗಲಿದೆ.
ವಿಶೇಷ ಸೂಚನೆ:- ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿ ಗಳು ಶಾಂತಿ ಸುವ್ಯವಸ್ಥೆ ಕಾಪಾಡಲು, ಜಗಳೂರು ಪೊಲೀಸ್ ಆರಕ್ಷಕ ಸಿಬ್ಬಂದಿ ಸಹಯೋಗದಲ್ಲಿ ಸಮಿತಿ ಸದಸ್ಯರುಗಳು ಅಗತ್ಯ ಭದ್ರತೆ ಯನ್ನು ಒದಗಿಸಲಾಗುವುದು.ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಸಹಕರಿಸ ಬೇಕೆಂದು ಬಾಲ್ಯ ಗಣಪ ಉತ್ಸವ ಸಮಿತಿ ಯುವಕರು ಕರೆ ನೀಡಿದ್ದಾರೆ.