ಪ್ರಜಾ ನಾಯಕ ಸುದ್ದಿ ಜಗಳೂರು :- ಪೌರಕಾರ್ಮಿಕರು ಕಾಯಕ ದ ಒತ್ತಡದಿಂದ ಮುಕ್ತರಾಗಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಅರುಣ್ ಕಾರಗಿ ಸಲಹೆ ನೀಡಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 12 ನೇ ವರ್ಷದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿಜಿ ಅವರು ಸತ್ಯ,ಅಹಿಂಸಾ ಮಾರ್ಗಪಾಲಿಸುವುದ ಲ್ಲದೆ.ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಿದ್ದರು.ಪಟ್ಟಣದ ಸೌಂದರ್ಯ ಹೆಚ್ಚಿಸುವ ಪೌರಕಾರ್ಮಿಕರ ಸೇವೆ ಶ್ಲಾಘನೀಯ.ಅವರಮೇಲಿನ ಅಸಡ್ಡೆ ಮನೋಭಾವದಿಂದ ತೊರೆದು ಗೌರವಿಸಬೇಕು.ಅತಿಯಾ ದ ಕೆಲಸದ ಒತ್ತಡದಿಂದ ದುಶ್ಚಟಗಳಿಗೆ ಬಲಿಯಾಗದೆ.ಮಾನಸಿಕ, ಕೌಟುಂಬಿಕ ನೆಮ್ಮದಿಯ ಜೊತೆಗೆ ಶ್ರಮದ ಹಣ ಉಳಿಸಿ ಸರಕಾರ ದ ಸೌಲಭ್ಯಗಳ ಸದುಪಯೋಗಪಡೆದು ಮಕ್ಕಳ ಶಿಕ್ಷಣಕ್ಕೆ ಒತ್ತ ನೀಡಿ ಸುಸಂಸ್ಕೃತರನ್ನಾಗಿಸಬೇಕು ಎಂದು ಕಿವಿಮಾತು ಹೇಳಿ ದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರನ್ನೇ ಅವಲಂಬಿತರಾಗದೆ. ಸಾರ್ವಜನಿಕರು ಜಾಗೃತರಾಗಬೇಕು.ಚರಂಡಿ ನೈರ್ಮಲ್ಯ ಮರೀಚಿಕೆ ಯಾಗಿವೆ.ಚರಂಡಿಗೆ ಕಸ ಎಸೆಯುವವರಿಗೆ ನೊಟೀಸ್ ಜಾರಿ ಮಾಡಬೇಕು.ಹಾಗೂ ಸರಕಾರದ ಆದೇಶದಂತೆ ದಶಕಗಳಿಂದ ಸೇವೆಗೈಯುತ್ತಿರುವ 7 ಜನ ಪೌರಕಾರ್ಮಿಕರಿಗೆ ನೇರಪಾವತಿದಾರ ರನ್ನಾಗಿ ನೇಮಕಮಾಡುವ ಸರಕಾರದ ಆದೇಶ ಪಾಲಿಸಬೇಕು. ಪೌರಕಾರ್ಮಿಕರು ಸಮಾಜದಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ ವೃತ್ತಿ ಗೌರವ ಹೊಂದಬೇಕು ಎಂದರು.
ಪ.ಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ,ಪೌರಕಾರ್ಮಿಕರಿಗೆ ಸ್ವಂತ ನಿವೇಶನವೂ ಇಲ್ಲದೆ ವಸತಿಯೋಜನೆಗಳಿಂದ ವಂಚಿತ ರಾಗುತ್ತಿದ್ದು.ಪಟ್ಟಣದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ನಿವೇಶನ ಮತ್ತು ಸೂರು ಕಲ್ಪಿಸಬೇಕು.ಶಾಸಕ ಬಿ.ದೇವೇಂದ್ರಪ್ಪ ಅವರು ದಸರಾ ಹಬ್ಬದ ಉಡುಗೊರೆಯಾಗಿ ಪೌರಕಾರ್ಮಿಕರಿಗೆ ಹಾಗೂ ಮಹಿಳಾ ಸ್ವಯಂಸೇವಕರಿಗೆ ವೈಯಕ್ತಿಕ ಖರ್ಚಿನಲ್ಲಿ ಬಟ್ಟೆ ವಿತರಿ ಸಿದ್ದು ಪೌರಕಾರ್ಮಿಕರ ಶ್ರೆಯೋಭಿವೃದ್ದಿಗೆ ಬದ್ದರಾಗಿದ್ದಾರೆ ಎಂದು ಹೇಳಿದರು.
ಹಿರಿಯ ನಾಗರೀಕ ಸಂಘದ ತಾಲೂಕು ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಮಾತನಾಡಿ,ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಆಡಳಿತಾವಧಿಯಲ್ಲಿ ಮಾಜಿ ಸಚಿವ ದಿ.ಬಸವಲಿಂಗಪ್ಪ ಅವರು ಮಲಹೋರುವ ಪದ್ದತಿ ನಿಷೇಧಗೊಳಿಸಿ ಪೌರಕಾರ್ಮಿಕರ ಹಕ್ಕುಗಳನ್ನು ಜಾರಿಗೊಳಿಸಿದರು ಎಂದು ಮಾಹಿತಿ ನೀಡಿದರು.
ಪ.ಪಂ.ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಾತನಾಡಿ,ಪೌರಕಾರ್ಮಿಕ ರು ವೈಯಕ್ತಿಕವಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಪೌರಕಾರ್ಮಿಕರಿಗೆ ಮಾಸಿಕ ವೇತನ ಜಾರಿಗೊಳಿಸಿ ಆರ್ಥಿಕ ,ಸಾಮಾಜಿಕ ಭದ್ರತೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಪಟ್ಟಣದ ಪೌರ ಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿರುವುದು ಪ್ರಶಂಸನೀಯ.ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದರು.
ಪೌರಕಾರ್ಮಿಕರಿಗೆ ಹಾಗೂ ಸ್ವಯಂ ಸೇವಕರಿಗೆ ಸನ್ಮಾನಿಸಿ ಗೌರ ವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯರಾದ ಲಲಿತಮ್ಮ, ನಿರ್ಮಲ ಕುಮಾರಿ ಲುಕ್ಮಾನ್ ಖಾನ್ ,ಶಕೀಲ್ ಅಹ್ಮದ್,ನವೀನ್ ಕುಮಾರ್, ರಮೇಶ್ ರೆಡ್ಡಿ,ರವಿಕುಮಾರ್,ಪಾಪಲಿಂಗಪ್ಪ, ದೇವರಾಜ್, ಮಂಜುನಾಥ್,ನಾಮನಿರ್ದೆಶಿತ ಸದಸ್ಯರಾದ ಜಯ್ಯಣ್ಣ,ತಾನಾಜಿ ಗೊಸಾಯಿ,ಶಾಂತಕುಮಾರ್, ಮುಖಂಡರಾದ ಕುಬೇಂದ್ರಪ್ಪ, ಸತೀಶ್. ರಮೇಶ್ ,ಓಬಳೇಶ್, ಇಂಜಿನಿಯ ರ್ ಶೃತಿ,ಆರೋಗ್ಯ ನಿರೀಕ್ಷಕ ಖಿಫಾಯತ್, ಸಿಬ್ಬಂದಿಗಳಾದ ನಾಯಕ್.ಮೋಹಿದ್ದಿನ್. ಶ್ರೀಮಂತ.ಮದನ್.ನಾಗರಾಜ್.ಸೋಮಶೇಖರ್. ಸೇರಿದಂತೆ ಸಿಬ್ಬಂದಿಗಳು ಪೌರಕಾರ್ಮಿಕರು ಹಾಜರಿದ್ದರು