ಪ್ರಜಾ ನಾಯಕ ಸುದ್ದಿ ಜಗಳೂರು :- ಮದ್ಯ ಸೇವನೆ ಯಿಂದ ಸರ್ವ ಸ್ವವೂ ಕಳೆದುಹೋಗುತ್ತವೆ.ಮದ್ಯವ್ಯಸನ ಮುಕ್ತರಾದರೆ ಸಮಾಜದಲ್ಲಿ ಗೌರವ ಸ್ಥಾನಮಾನ ನೆಮ್ಮದಿಯ ಬದುಕು ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್,ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್,ಬೆಳ್ತಂಗಡಿ,ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಜಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡುತಾಯಿ ವರನ ಕುಡುಕನಲ್ಲದ ಗಂಡನ :- ಸಮಾಜದಲ್ಲಿ ನೂರು ಸತ್ಕಾರ್ಯಕ್ಕಿಂತ ಒಂದು ಕೆಟ್ಟ ಕೆಲಸಕ್ಕೆ ಪ್ರಚಾರ ಹೆಚ್ಚು ಸಿಗುತ್ತದೆ.ಮದ್ಯಸೇವನೆಯಿಂದ ಹೆಂಡತಿ ಮಾಂಗಲ್ಯ, ಆಸ್ತಿ,ಮಾನ ಸಿಕ ನೆಮ್ಮದಿ ಸೇರಿದಂತೆ ಸರ್ವಸ್ವವನ್ನೇ ಕಳೆದುಕೊಳ್ಳುತ್ತಾನೆ.ಆದ್ದ ರಿಂದಲೇ ಹೆಣ್ಣುಮಕ್ಕಳು ವಿವಾಹ ಪೂರ್ವದಲ್ಲಿ ಕೊಡುತಾಯಿ ವರ ನ ಕುಡುಕನಲ್ಲದ ಗಂಡನ ಎಂದು ಪ್ರಾರ್ಥಿಸಿಕೊಳ್ಳುತ್ತಾರೆ ಎಂಬ ಸೂಕ್ತ ನಿದರ್ಶನ ನೀಡಿದರು.
ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಕೊಂಡು ಆರ್ಥಿಕ ಸಾಲಸೌಲಭ್ಯ ಸದುಪಯೋಗಪಡೆಯುತ್ತಿರುವ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆಯಿರುವ ಪಾಕ ಶಾಲೆ ಯಿಂದ ಹೊರಬಂದು ಸ್ವಾವಲಂಬಿ ಬದುಕಿನೊಂದಿಗೆ ಕುಟುಂಬ ನಿರ್ವಹಣೆ ನಿಜಕ್ಕೂ ಹೆಮ್ಮೆಯ ಸಂಗತಿ ಇದಕ್ಕೆ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಸಂಸ್ಥೆ ಸಾಕ್ಷೀಕರಿಸಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿನ ಗಾಂಧೀಜಿಯವರ ಶಾಂತಿಯುತ ಹೋರಾಟ ಗಳು ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ .ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.ಕೊನೆ ಉಸಿರಿರುವ ತನಕ ಶಪಥದಂತೆ ಅರೆ ಬೆತ್ತಲೆಯಾಗಿಯೇ ಹೊರಾಟ ನಡೆಸಿ ಗುಂಡೇಟಿ ಗೆ ಬಲಿಯಾದರು ಆದರೆ ಅವರ ತತ್ವಾದರ್ಶಗಳು ಇಂದಿಗೂ ಜೀವಂತವಾಗಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಜಿಲ್ಲಾ ಜನ ಜಾಗೃತಿ ವೇದಿ ಕೆ ಯ ಅಧ್ಯಕ್ಷರಾಗಿ ಡಾ.ಪಿ.ಎಸ್ ಅರವಿಂದನ್ ಅವರು ಅಧಿಕಾರ ವಹಿಸಿಕೊಂಡರು
ಪೊಲೀಸ್ ಇಲಾಖೆಯ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀನಿವಾಸ್ ರಾವ್ ಮಾತನಾಡಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಅಪಘಾತಗಳಿಂ ದ ಸಾವು ಹೆಚ್ಚಾಗುತ್ತಿ ದೆ ಆದ್ದರಿಂದ ನಾವು ಬೈಕ್ ನಲ್ಲಿ ಹೋಗುವಾ ಗ ಸಂಚಾರಿ ನಿಯಮ ವನ್ನು ಕಡ್ಡಾಯವಾಗಿ ಪಾಲಿಸಬೇಕು ವಾಹ ನಗಳನ್ನು ಚಾಲನೆ ಮಾಡುವಾಗ ಡ್ರೈವಿಂಗ್ ಲೈಸೆನ್ಸ್ ಮತ್ತು ಗಾಡಿ ಯ ಆರ್ ಸಿ ಕಾರ್ಡ್ ಇನ್ಸೂರೆನ್ಸ್ ಕಾಪಿ ಇಟ್ಟುಕೊಂಡು ಗಾಡಿ ಚಾಲ ನೆ ಮಾಡಬೇಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳು ಜಾರಿಯಲ್ಲಿ ಇರುವುದನ್ನು ತಿಳಿದುಕೊಳ್ಳಬೇಕು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯದ ಹಣವನ್ನು ದುಂದು ವೆಚ್ಚ ಮಾಡದೆ ಆ ಹಣವನ್ನು ಕ್ರೂಡೀಕರಣ ಮಾಡಿ ಪೋಸ್ಟ್ ಆಫೀಸ್ನ ಲ್ಲಿ ಆರ್ ಡಿ ಕಟ್ಟಿಕೊಳ್ಳುವ ಮೂಲಕ ಇನ್ಶೂರೆನ್ಸ್ ಗಳನ್ನು ಮಾಡಿಸಿಕೊಂಡು ನಿಮ್ಮ ಕಷ್ಟ ಸುಖಗಳಿಗೆ ಬರುತ್ತದೆ ಮಹಿಳೆಯರು ತಮ್ಮ ಮಕ್ಕಳನ್ನು 13 ರಿಂದ 18ನೇ ವಯಸ್ಸಿನವರೆಗೆ ತಂದೆ ತಾಯಿ ಯ ಪ್ರೀತಿ ಬಹ ಳ ಮುಖ್ಯವಾಗಿರುತ್ತದೆ ಇಲ್ಲವಾದಲ್ಲಿ ಹೊರಗ ಡೆ ಟಿವಿ ಮತ್ತು ಮೊಬೈ ಲ್ ಗಳನ್ನು ನೋಡಿ ಬೇರೆ ಆಕರ್ಷ ಣೆಗೆ ಒಳಗಾಗುತ್ತಾರೆ ಹಾಗಾಗಿ ಟಿಬಿ ಮತ್ತು ಮೊಬೈಲ್ ನೋಡುವು ದನ್ನು ಬಿಟ್ಟು ಮಕ್ಕಳ ಜೊತೆ ಸ್ವಲ್ಪ ಸಮಯವಾದರೂ ಕಾಲ ಕಳೆಯ ಬೇಕು ಬಾಲ್ಯ ವಿವಾಹ ಪದ್ಧ ತಿಯಾದ 18 ರಿಂದ 21 ವರ್ಷ ತುಂಬಿ ದ ಮಕ್ಕಳಿಗೆ ವಿವಾಹ ಮಾಡಿಸಬೇಕು ಇಲ್ಲವಾದಲ್ಲಿ ಮದುವೆ ಮಾಡಿಸಿ ದವರು ಸೇರಿದಂತೆ ಇದಕ್ಕೆ ಭಾಗಿಯಾದವ ರೆಲ್ಲರೂ ಪೋಕ್ಸೋ ಕಾಯ್ದೆ ಅಡಿ ಜೈಲಿಗೆ ಹೋಗುವ ಸಂಭವ ಎದುರಾಗುತ್ತದೆ ಎಂದರು
ಜಿಲ್ಲಾ ನಿರ್ದೇಶಕ ಜನಾರ್ಧನ್ ಮಾತನಾಡಿ,ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರು 1982 ರಲ್ಲಿ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ 5 ದಶಕಗಳಿಂದ ಮಹಿಳೆಯರ ಆರ್ಥಿಕ ಸಬಲೀಕರಣ,ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಸ್ವಾಸ್ಥ್ಯ ಸಮಾಜಕ್ಕೆ ಕೈಜೋಡಿಸುತ್ತಿದೆ.ರಾಜ್ಯದಲ್ಲಿ ಮದ್ಯದಂಗಡಿ ಆರಂಭಿ ಸಲು ಅನುಮತಿ ನೀಡದಂತೆ ಒತ್ತಾಯಿಸಿ ಸರಕಾರಕ್ಕೆ ಪ್ರತಿ ವಿಧಾನ ಸಭಾ ಕ್ಷೇತ್ರದ ಶಾಸಕರ ಮುಖಾಂತರ ಲಿಖಿತ ಮನವಿ ಸಲ್ಲಿಸಲಾ ಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ಮಾಜಿ ಜಿಲ್ಲಾ ಧ್ಯಕ್ಷ ಷಡಕ್ಷರಿ,ನಿವೃತ್ತ ಪ್ರಾಂಶುಪಾಲ ಡಾ.ಪ್ರಭಾಕರ್,ಅಖಿಲ ಕರ್ನಾ ಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಡಾ.ಪಿ.ಎಸ್.ಅರವಿಂದನ್, ಗೌರವಾಧ್ಯಕ್ಷ ಫಾದರ್ ವಿಲಿಯಂ ಮಿರಾಂದ,ಉಪಾಧ್ಯಕ್ಷ ಸಿ.ಮಂ ಜುನಾಥ್,ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಸಿ.ನಾಗರಾಜ್, ಯೋಜನಾಧಿಕಾರಿ ಗಣೇಶ್,ಮುಖಂಡರಾದ ಬಿ.ಲೊಕೇಶ್,ಸಿ. ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.