ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು :- ಪಟ್ಟಣದ ಹೋ. ಚಿ.ಬೋರಯ್ಯ ಸ್ಮಾರಕ ಪ.ಜಾತಿ ಪ.ಪಂಗಡ ಪ್ರಥಮದರ್ಜೆ ಕಾಲೇಜಿನ ಇಂಗ್ಲೀಷ್ ಭಾಷೆ ಪ್ರಾಧ್ಯಾಪಕ ಸೀತಾಂ ಅವರು ತಮ್ಮ ವೃತ್ತಿನಿರತ ಸೇವೆಯಲ್ಲಿಯೇ ಕೇವಲ 56 ವರ್ಷದಲ್ಲಿ ಉಪನ್ಯಾಸಕ ಬದುಕಿನ ಜೀವನಕ್ಕೆ ವಿಧಿಯಾಟ ಅಂತ್ಯವಾಡಿದೆ.3 ದಶಕಗಳಿಗೂ ಅಧಿಕ ಕಾಲ ಹೋ.ಚಿ.ಬೋರಯ್ಯ ಅನುದಾನಿತ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದ ಇವರಿಗೆ ಸಹಸ್ರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಗಾಡ್ ಫಾದರ್ ಎಂದರೆ ಅತಿಶಯೋಕ್ತಿಯೇನಲ್ಲ.
ಬರದನಾಡಿನಲ್ಲಿ ಆಂಗ್ಲವಿದ್ವಾಂಸರಾಗಿದ್ದರು :- ಬರದನಾಡಿನಲ್ಲಿ ಯಾವುದೇ ಟುಟ್ಯೂರಿಯಲ್ಸ್,ಸ್ಪೋಕನ್ ಇಂಗ್ಲೀಷ್ ಕೋಚಿಂಗ್ ಸೆಂಟರ್ ಗಳಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಎಂದರೆ ಕಬ್ಬಿಣದ ಕಡಲೆಯಂತಿರುವಾಗ ಇವರು ತಮ್ಮದೇ ಸರಳಭಾಷೆಯಲ್ಲಿ,ಸುಲಲಿತವಾಗಿ ವ್ಯಾಯಕರಣಬದ್ದವಾಗಿ ವಿದ್ಯಾರ್ಥಿ ಗಳನ್ನು ಸುಂದರ ಮೂರ್ತಿಗಳನ್ನಾಗಿ ಕೆತ್ತನೆಮಾಡುವ ಮೂಲಕ ಆಂಗ್ಲಭಾಷೆಯಲ್ಲಿ ಬಿಕಾಂ.ಬಿ.ಎ.ಪದವಿಯಲ್ಲಿ ಇಂಗ್ಲೀಷ್ ವಿಷಯಗಳನ್ನು ಅರಿತುಕೊಳ್ಳುವಂತೆ ಮಾಡುತ್ತಿದ್ದರು.
ಇವರ ಆಳವಾದ ಆಂಗ್ಲಭಾಷೆ ಜ್ಞಾನ,ಬೋಧನೆ ಪಾಂಡಿತ್ಯ ಎಲ್ಲರ ನ್ನೂ ಆಕರ್ಷಣೆಗೊಳಿಸುತ್ತಿತ್ತು.ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ನೌಕರಿಗಳಲ್ಲಿ,ಕಾರ್ಪೋರೇಟ್ ಕಂಪನಿ,ಬ್ಯಾಂಕ್ ಗಳಲ್ಲಿ ಸೇವೆಗೈ ಯುತ್ತಿದ್ದಾರೆ.
ಕಂಬನಿಮಿಡಿದ ಅಪಾರ ಸಂಖ್ಯೆಯ ಶಿಷ್ಯರು :- ಇವರ ಬಳಿ ಇಂಗ್ಲೀಷ್ ಭಾಷೆಯನ್ನು ಕಲಿತು ಬದುಕು ಕಟ್ಟಿಕೊಂಡ ಅಪಾರ ಸಂಖ್ಯೆಯ ಶಿಷ್ಯಂದಿರು ರಾಜ್ಯದ ಮೂಲೆಮೂಲೆಗಳಲ್ಲಿದ್ದು.ಅವರ ಅಕಾಲಿಕ ಸಾವಿನ ಸುದ್ದಿ ಕೇಳಿ ಮನದಲ್ಲಿಯೇ ನೋವು ಅನುಭವಿ ಸಿ.ಸಾವಿಗೆ ಕಂಬನಿ ಮಿಡಿದಿದ್ದಾರೆ.
ಸರಳಜೀವನ,ವೃತ್ತಿ ಪಾವಿತ್ರತೆ ಕಾಪಾಡಿ ಕೊಂಡಿದ್ದರು :-ಕುರುಚು ಲು ಗಡ್ಡದೊಂದಿಗೆ,ಕಣ್ಣಿಗೆ ಸ್ಪೆಕ್ಟ್, ಫಾರ್ಮಲ್ ಡ್ರಸ್,ಇನ್ ಶರ್ಟ್, ಶಿಸ್ತಿನ ಉಡುಪು ಧರಿಸಿ ಯಾವ ವಿಶ್ವವಿದ್ಯಾನಿಲಯದ ಪ್ರೋಫೇಸ ರ್ ಗಳಿ ಗೂ ಕಡಿಮೆಯಿಲ್ಲದಂತೆ ಕಾಲೇಜು ಕ್ಯಾಂಪಸ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದರು.ಅಲ್ಲದೆ ಬೋಧನೆಬಗ್ಗೆ ಕೀಳಿರಿಮೆ ಯಾವ ತ್ತೂ ಪಡದೆ ಯಾರೊಬ್ಬ ಸಹುದ್ಯೋಗಿಗಳ ಜೊತೆ ವೈಮನಸ್ಸು ಹೊಂದದೆ ಅಸನ್ಮುಖಿಯಾಗಿ ಎಲ್ಲರ ವಿಶ್ವಾಸಗಳಿಸು ತ್ತಾ ಆಡಳಿತ ಮಂಡಳಿಗೆ ನ್ಯಾಕ್,ಐಕ್ಯೂಎಸಿ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡು ತಮ್ಮ ಬೋಧನಾ ವೇಳಾ ಪಟ್ಟಿಯಂತೆ ಕಾಲಹರಣಮಾಡದೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ವಿದ್ಯಾರ್ಥಿ ಗಳಿಂದ ಸೈ ಎನಿಸಿಕೊಂಡು ಮೆಚ್ಚುಗೆ ಪಾತ್ರರಾಗಿ. ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಪ್ರಗತಿಗೆ ಸಾಕ್ಷಿಯಾಗಿದ್ದರು.ಯುಜಿಸಿ ವೇತನ ಪಡೆ ಯುತ್ತಿದ್ದರೂ ಸಹ ವೃತ್ತಿಮರೆತವರಲ್ಲ ವೃತ್ತಿ ಪಾವಿತ್ರತೆ ಕಾಪಾಡಿ ಕೊಂಡವರಾಗಿದ್ದರು.
ಒಟ್ಟಾರೆಯಾಗಿ ಅವರ ಬದುಕಿನ ಬಂಡಿ ಅನಾರೋಗ್ಯ ಎಂಬ ಕೀಲು ಕಿತ್ತಂತಾಗಿ ನಿವೃತ್ತಿಗೂ ಮುನ್ನವೇ ನೆಲಕ್ಕುರುಳಿ ಕಾಣದ ಲೋಕಕ್ಕೆ ತೆರಳಿದ್ದು.ದುಖಃಕರ ಹಾಗೂ ಜ್ಞಾನಿಗಳ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.