ಪ್ರಜಾ ನಾಯಕ ಜಗಳೂರು ಸುದ್ದಿ:- ಸಂಸ್ಕೃತಿ,ಸಂಸ್ಕಾರ, ಸಂಪ್ರದಾಯ,ಆಧ್ಯಾತ್ಮಿಕತೆಯಲ್ಲಿ ಭಾರತ ವಿಶ್ವಕ್ಕೆ ಗುರುವಾಗಿ ಮೆರೆದಿದೆ ಎಂದು ಕಣ್ವ ಕುಪ್ಪೆ ಗವಿಮಠದ ಮಠದ ಷ.ಬ್ರ.ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವಹಿಸಿ ಆಶೀರ್ವಾಚನ ನೀಡಿದ ಅವರು,
ಬರಪೀಡಿತ ಪ್ರದೇಶ ತಾಲೂಕಿನ ಹಣದಿಂದ ಬಡತನವಿದೆ ಬೆಳೆ ನಷ್ಟವಾಗಬಹುದು,ಸಾಹಿತ್ಯ ಸಂಗೀತ, ಧಾರ್ಮಿಕತೆಯಲ್ಲಿ ರಾಜ್ಯದಲ್ಲಿಯೇ ಹೆಮ್ಮೆ ತರುವಂತಿದೆ ಎಂದು ತಿಳಿಸಿದರು.ವ್ಯಾಸ ಮಹರ್ಷಿಗಳು ಹೇಳಿದಂತೆ ಪ್ರಪಂಚದ ಪ್ರತಿಯೊಂದು ಜೀವರಾಶಿಗಳಿಗೆ ಕಷ್ಟದಲ್ಲಿರುವವರಿಗೆ ರಕ್ಷಣೆ ಮಾಡುವುದೇ ಪುಣ್ಯವಾಗಿದ್ದು.ಫಲಾಪೇಕ್ಷೆಯಿಲ್ಲದ ಪರೋಪಕಾರಿಯಾದರೆ ಪುಣ್ಯ ಪ್ರಾಪ್ತಿ,ನೆರಳು, ಗಾಳಿ,ಹಣ್ಣು,ಕಟ್ಟಿಗೆ,ನೀಡುವ ವೃಕ್ಷಗ,ಜೀವ ರಾಶಿಗಳಿಗೆ ಜಲದಾನ ಮಾಡುವ ನದಿ,ಹಳ್ಳ,ಹಾಲು ನೀಡುವ ,ಹಸುಗಳಂತೆ ಫಲಾಪೇಕ್ಷೆಗಳಿಲ್ಲದೆ ಪರೋಪಕಾರಿ ಯಾದರೆ ಪುಣ್ಯಪ್ರಾಪ್ತಿ ,ಅದೇ ಮನುಷ್ಯ ದುರಾಸೆಯಿಂದ ಅಪಮಾನ ,ನಿಂದನೆಗಳಂತಹ ಪಾಪ ಕರ್ಮಗಳಿಂದ ದುಖಃ ಪ್ರಾಪ್ತಿ ಎಂದು ಪಾಪ ಪುಣ್ಯ ದ ಬಗ್ಗೆ ನಿದರ್ಶನ ನೀಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ತಾಲೂಕಿನ ಕೊಣಚಗಲ್ ನಲ್ಲಿರುವ ಅನುಭಾವ ಕವಿ ಮಹಾಲಿಂಗರಂಗ ಅವರ ಸಮಾಧಿ ಅಭಿವೃದ್ದಿ ಗೊಳಿಸಬೇಕಿದೆ. ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಕ್ಷೇತ್ರ ವಾಗಿದೆ.ಕನ್ನಡ ಪರ ಸಂಘಟನೆಗಳು ಸಾಮಾಜಿಕ ಚಿಂತನೆ ಮೈಗೂಡಿಸಿಗೊಂಡಿವೆ.ಸಾಹಿತ್ಯ ಲೋಕಕ್ಕೆ ತಾಲೂಕಿನ ಹೆಚ್ಚು ಪ್ರತಿಭೆಗಳು ಪಾದಾರ್ಪಣೆಮಾಡಲಿ ಎಂದು ಹಾರೈಸಿದರು.
ಸಂಘಟನೆಗಳ ಹೊರಾಟದ ಕನಸಿನ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದೆ.ಯಾವ ಮಾರ್ಗ ಎಂಬುದು ಗೊಂದಲವಿದೆ.ಆಡಳಿತ ಸರಕಾರವಿರುವ ಹಾಲಿ ಶಾಸಕರು ಕಾಳಜಿವಹಿಸ ಬೇಕಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಫ್ಲೋರೈಡ್ ಮುಕ್ತ ವನ್ನಾಗಿಸ ಬೇಕಿದೆ.ಎಂದು ಹೇಳಿದರು.
ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯದ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ,ಆಡಳಿತ ಸರಕಾರಗಳು ಮತಬ್ಯಾಂಕ್ ಆಮಿಷೆ ತೊರೆದು ಸರಕಾರಿ ಶಾಲೆಗಳ ಉಳಿವಿಗಾಗಿ ಕಾಳಜಿವಹಿಸ ಬೇಕಿದೆ.ಕನ್ನಡ ಭಾಷೆ ಉಳಿಸಬೇಕು.ಮೊಬೈಲ್ ನಿಂದ ಯುವ ಸಮೂಹದಲ್ಲಿ ಸಾಹಿತ್ಯಾಸಕ್ತಿ ವಿಮುಖಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಪ್ರೋ.ಲಿಂಗಪ್ಪ ಮಾತನಾಡಿ, ಬಾಲ್ಯದಲ್ಲಿನ ಬಡತನದ ಬೆನ್ನಲ್ಲಿ ನಾನು ಅಕ್ಷರ ಕಲಿತು ಸರಕಾರಿ ನೌಕರನಾದೆ.ನನ್ನ ತಾಯಿ ಜೀತ ಆರ್ಥಿಕ ಪರಿಸ್ಥಿತಿ ನನಗೆ ಜೀವನದಲ್ಲಿ ಪಾಠ ಕಲಿಸಿತು.ಇಂದು ನನಗೆ ಸಮ್ಮೇಳನದ ಅಧ್ಯಕ್ಷ ಸ್ಥಾನ ದೊರೆತಿದ್ದು ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ,ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು.ನನ್ನ ಕೀರ್ತಿ ಹೆಚ್ಚಿಸಿತು ನನ್ನ ಆರಂಭದ ವೃತ್ತಿ ಬದುಕಿನ ಯಾತ್ರೆಯ ಅಳಲು ಹೇಳತೀರದು ಎಂದು ಭಾವುಕರಾದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟ್ಟಿ ದೇವೇಂದ್ರಪ್ಪ ಇವರು ಸರ್ವ ಸಮ್ಮೇಳನದ ಅಧ್ಯಕ್ಷರಾದ ತೋರಣಗಟ್ಟೆ ಪ್ರೊಫೆಸರ್ ಹೆಚ್.ಲಿಂಗಪ್ಪ ಇವರಿಗೆ ಇವರಿಗೆ ಗುರು ಕಾಣಿಕೆ ನೀಡಿ ಗೌರವ ಸಮರ್ಪಣೆ ಮಾಡಿ ನಂತರ ಮಾತನಾಡಿದರು
ಇದೇ ವೇಳೆ ಕವಿಗೋಷ್ಠಿ ನಡೆಸಿ ಮತ್ತು ವಿಧದ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನ ಸಮಾರಂಭ ಮಾಡಲಾಯಿತು
ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪ್ರೋ. ಹೆಚ್.ಲಿಂಗಪ್ಪ ,ಕಸಾಪ ತಾಲೂಕು ಅಧ್ಯಕ್ಷೆ ಸುಜಾತಮ್ಮ,ವಕೀಲರ ಸಂಘದ ತಾಲೂಕು ಅಧ್ಯಕ್ಷ ಓಂಕಾರೇಶ್ವರಪ್ಪ,ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ.ಚಿದಾನಂದಪ್ಪ ಜಿ.ಎಸ್,ಅಮರ ಭಾರತಿ ವಿದ್ಯಾಕೇಂದ್ರ ಕಾರ್ಯದರ್ಶಿ ಟಿ. ಮಧು,ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ್,ದೊಣ್ಣೆಹಳ್ಳಿ ಗುರುಮೂರ್ತಿ,ನಾಗಲಿಂಗಪ್ಪ, ಓಬಣ್ಣ, ಆರ್.ಓಬಳೇಶ್.ಕೃಷ್ಣಮೂರ್ತಿ ಕೆ. ಗೀತಾ ಮಂಜು.ಚೈತ್ರ ಟಿ. ಮಹಾಲಿಂಗಪ್ಪ,ರಾಜಪ್ಪ. ಮಾದಿಹಳ್ಳಿ ಮಂಜುನಾಥ್ .ಮಹಾಲಿಂಗಪ್ಪ. ಮಂಜಣ್ಣ. ಸೇರಿದಂಂತೆ ಇತರರು ಭಾಗವಹಿಸಿದ್ದರು