ಪ್ರಜಾ ನಾಯಕ ಸುದ್ದಿ ಜಗಳೂರು : ಸೂಕ್ತ ದಾಖಲೆಗಳಿಲ್ಲದ 2.80.390 ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿ ಕೊಂಡಿರುವ ಘಟನೆ ಮಂಗಳವಾರ ಜಗಳೂರು ತಾಲೂಕು ಮುಸ್ಟೂರು ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಚುನಾವಣಾ ಸಿಬ್ಬಂದಿಗಳು ವಾಹನ ತಪಾಸಣೆ ವೇಳೆ ವಶಪಡಿಸಿ ಕೊಂಡ ಹಣವು ಶ್ರೀ ವೀರವನತೆ ಓಬವ್ವ ಮಹಿಳಾ ಸ್ವಸಾಯ ( ಸಂಜೀವಿನಿ) ಸಂಘದ್ದು ಎನ್ನಲಾಗಿದೆ. ಹಣವನ್ನು ಹೊಂದಿದ್ದ ಸಂಘದ ಪ್ರತಿನಿಧಿ ಭಾಗ್ಯಮ್ಮ ಸೂಕ್ತ ದಾಖಲೆ ತೋರಿಸದ ಕಾರಣ ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಸರಿಯಾದ ದಾಖಲೆ ಸಲ್ಲಿಸಿ ಹಣ ವಾಪಾಸ್ಸು ಪಡೆಯುವಂತೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ತಹಸಿಲ್ದಾರ್ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಜಿ.ಸಂತೋಷ್ ಕುಮಾರ್ .ಎಸ್.ಎಸ್.ಟಿ ಕಾರ್ಯ ನಿರ್ವಾಹಕ ದಂಡಾಧಿಕಾರಿ ರಮೇಶ್ ನಾಯ್ಕ.ಡಿ ಕೃಷಿ ಅಧಿಕಾರಿ ಮಿಥುನ್ ಕೀಮತ್ ಪೋಲಿಸ್ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಹಾಜರಿದ್ದರು
0 Today: 3