ಪ್ರಜಾ ನಾಯಕ ಸುದ್ದಿ ಜಗಳೂರು :- ಅರ್ಹ ಅಭ್ಯರ್ಥಿಗೆ ಟಿಕೇಟ್ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ವಂಚಿಸಿದ್ದಲ್ಲದೆ ನನಗೂ ನೋವು ತಂದಿದ್ದು.ಪಕ್ಷೇತರ ಅಭ್ಯರ್ಥಿಯಾಗಿ ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.
ತಾಲೂಕಿನ ಬಿದರಕೆರೆ ಗ್ರಾಮದ ತೋಟದಲ್ಲಿ ಕರೆದಿದ್ದ ಕಾಂಗ್ರೆಸ್ ಪಕ್ಷದ ಟಿಕೇಟ್ ಕುರಿತಾದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಟಿಕೇಟ್ ಘೋಷಣೆ ಯಾಗುತ್ತಿದ್ದಂತೆ ಆಕ್ರೋಶದಿಂದ ನೋವಿನಿಂದ ಹೇಳಿದರು.
ದುಃಖ ಬರಿತರಾದ ಮಾಜಿ ಶಾಸಕ:- ನಾನೊಬ್ಬ ಮಾಜಿ ಶಾಸಕ ನಾಗಿದ್ದು.ಕಳೆದ 5 ವರ್ಷಗಳಿಂದ ಅಧಿಕಾರವಿಲ್ಲದಿದ್ದರೂ ನಿಷ್ಠಾವಂತ ಕಾರ್ಯಕರ್ತನಂತೆ ಪಕ್ಷ ಸಂಘಟನೆ,ರಾಜ್ಯ ವರಿಷ್ಠರ ನಿರ್ದೇಶನದಂತೆ ಪಕ್ಷದ ಕಾರ್ಯಕ್ರಮಗಳಿಗೆ ಹಣ ವ್ಯಯ ಮಾಡಿದ್ದೇನೆ.ಆದರೆ ಇತ್ತೀಚೆಗೆ ಸೇರ್ಪಡೆಗೊಂಡ ದೇವೇಂದ್ರಪ್ಪ ಅವರಿಗೆ ಅಸಗೋಡು ಜಯಸಿಂಹ,ಎಂ.ಬಿ. ಪಾಟೀಲ್, ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವರ ಕುತಂತ್ರದಿಂದ ಹಾಗೂ ವೈಯಕ್ತಿಕ ಹಿತಾಸಕ್ತಿಯಿಂದ ಅಧಿಕಾರ ದುರುಪಯೋಗಪಡೆದು ಮಾನದಂಡ ಉಲ್ಲಂಘಿಸಿ ಟಿಕೇಟ್ ಘೋಷಿಸಿರುವುದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಾರ್ಯ ಕರ್ತ ರೊಂದಿಗೆ ಚುನಾವಣೆ ನಡೆಸಿ ಗೆಲುವು ಸಾಧಿಸುವೆ ಎಂದು ದುಃಖ ಭರಿತರಾಗಿ ಮಾತನಾಡಿದರು
ನಿಮ್ಮ ಸೇವೆಗಾಗಿ ಬಿದರಕೆರೆಯಲ್ಲಿರುವೆ :- ಕ್ಷೇತ್ರದ ಜನತೆಯ ಸೇವೆಗೆ ಬಿದರಕೆರೆಯಲ್ಲಿ ಮನೆ ನಿರ್ಮಿಸಿರುವೆ ದಾವಣಗೆರೆ ಯಲ್ಲೂ ಮನೆನಿರ್ಮಾಣ ಮಾಡುವ ಶಕ್ತಿಯಿತ್ತು ಎಂದು ಮಾರ್ಮಿಕವಾಗಿ ನುಡಿದರು.
ಕೆ.ಪಿ ಪಾಲಯ್ಯ ಅವರು ಸೀನಿಯರ್ :-ಸಮೀಕ್ಷೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು.ಅಲ್ಲದೆ ದಶಕಗಳಿಂದ ಪಕ್ಷದಲ್ಲಿರುವ ಕೆ.ಪಿ.ಪಾಲಯ್ಯ ಅವರಿಗೆ ಅನ್ಯಾಯವಾಗಿದೆ. ಪ್ಯಾನೆಲ್ ನಲ್ಲಿಯೂ ಹೆಸರು ಆಗಮಿಸಿಲ್ಲ ಇದು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯವೇ? ಯಾವ ಮರ್ಮ ಎಂದು ಅಳಲು ತೋಡಿಕೊಂಡರು.
ಹಾಲಿ ಶಾಸಕರ ಕೈವಾಡ:- ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ವಿರುದ್ದ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾದರೆ 25000 ಮತಗಳ ಅಂತರದಿಂದ ಸೋಲುವೆ ಎಂಬ ಭಯದಿಂದ ಹತಾಶರಾಗಿ ಕೈವಾಡದಿಂದ ತಾಲೂಕಿನ ಕುತಂತ್ರವಾದಿ ಜಯ ಸಿಂಹ ಅವರಮೂಲಕ ರಾಜ್ಯ ನಾಯಕರಿಗೆ ತಪ್ಪು ಸಂದೇಶ ರವಾನಿಸಿ ನನಗೆ ಟಿಕೇಟ್ ಕೈತಪ್ಪಿಸಿದ್ದಾರೆ ಆದರೂ ನಾನು ರಾಮಚಂದ್ರಪ್ಪ ಶಾಸಕನಾಗುವ ಕನಸ್ಸು ನನಸಾಗಲು ಬಿಡೊಲ್ಲ ರಾಮಚಂದ್ರ ವರ್ಸಸ್ ರಾಜೇಶ್ ಆಗಬೇಕೆಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ.ಮುಖಂಡ ಎಲ್ ಬಿ ಬೈರೇಶ್.ಕಾಂಗ್ರೆಸ್ ಅರಸಿಕೆರೆ ಬ್ಲಾಕ್ ಅಧ್ಯಕ್ಷರಾದ ಕಂಬತ್ತಹಳ್ಳಿ ಮಂಜಣ್ಣ.ಯಶವಂತ್ ಗೌಡ.ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್.ಮಾಜಿ ಜಿಪಂ ಸದಸ್ಯ ಎಸ್ ಕೆ ರಾಮರೆಡ್ಡಿ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಯು.ಜಿ ಶಿವ ಕುಮಾರ್.ಮಾಜಿ ಜಿಪಂ ಸದಸ್ಯ ನಾಗರತ್ನಮ್ಮ ಮಲ್ಲೇಶಪ್ಪ. ಯರಬಳ್ಳಿ ಉಮಾಪತಿ.ಕಿತ್ತೂರು ಜೆಯ್ಯಣ್ಣ. ಮುಖಂಡ ಬಸಾವ ಪುರ ರವಿಚಂದ್ರ .ಮಾಜಿ ನಾಯಕ ಸಮಾಜದ ಕಾರ್ಯಧರ್ಶಿ ಲೋಕಣ್ಣ.ಮುಖಂಡ ಚಿತ್ತಪ್ಪ ಸೇರಿದಂತೆ ಆಪಾರ ಕಾರ್ತಕರ್ತರು ಮುಂತಾದವರು ಹಾಜರಿದ್ದರು.