ಪ್ರಜಾ ನಾಯಕ ಸುದ್ದಿ ಜಗಳೂರು :- ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿಫಾರಂ ನೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು.
ಪಟ್ಟಣದ ಶಾಸಕ ಎಸ್.ವಿ.ರಾಮಚಂದ್ರ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನನ್ನ ಆಡಳಿತಾವಧಿಯಲ್ಲಿ ನನ್ನ ಅಭಿವೃದ್ದಿ ಕಾಮಗಾರಿ ಮನಗಂಡು ವರಿಷ್ಠರು ನನಗೆ ಟಿಕೇಟ್ ನೀಡಿದ್ದಾರೆ.ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲಿದೆ.ಮತ್ತೊಮ್ಮೆ ಶಾಸಕನಾಗಿ ಅಯ್ಕೆ ಯಾಗುವೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೊಳಿಸುವೆ ಎಂದರು.
ನನ್ನ ಆಡಳಿತಾವಧಿಯಲ್ಲಿ ಬಿಜೆಪಿ ಪಕ್ಷದ ಸಹಕಾರದಿಂದ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಕೆರೆತುಂಬಿಸುವ ಯೋಜನೆಗೆ ಕಾಮ ಗಾರಿ ಭರಮಸಮುದ್ರ ಬಳಿ ಭರದಿಂದ ಸಾಗಿದೆ.ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಸಾಕಾರಗೊಂಡು.45 ಎಕರೆ ಜಮೀನು ನೀರಾವರಿ ಪ್ರದೇಶವಾಗಲಿದೆ.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂತೆಮುದ್ದಾಪುರದಿಂದ 164 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಚಾಲನೆ ಸಿಕ್ಕಿದೆ.ಕ್ಷೇತ್ರದಲ್ಲಿ ₹190 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿಕಾಮಗಾರಿಅಭಿವೃದ್ದಿ ಪಡಿಸ ಲಾಗಿದೆ.ಪಟ್ಟಣದಲ್ಲಿ ಎರಡು ವಾಲ್ಮೀಕಿ ಸಮುದಾಯ ಭವನ,ತಲಾ 25 ವೆಚ್ಚದಲ್ಲಿ ನಿರ್ಮಿಸಿರುವೆ.ಕೆರೆ ಅಭಿವೃದ್ದಿ,ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ವಸತಿ ರಹಿತರಿಗೆ 4078 ಫಲಾನು ಭವಿಗಳಿಗೆ ಸೂರು ಕಲ್ಪಿಸಲಾಗಿದೆ.ಸ್ವಯಂ ಉದ್ಯೋಗ, ಆರ್ಥಿಕ ಸಂಪನ್ಮೂಲ,150 ಪರಿಶಿಷ್ಠ ಸಮುದಾಯಗಳ ಮಹಿಳಾ ಸ್ವಸಹಾ ಯ ಸಂಘಗಳಿಗೆ ಸಹಾಯಧನ,ಅಲೆಮಾರಿ ಸಮುದಾಯ ಕ್ಕೆ ಸೂರಿನ ವ್ಯವಸ್ಥೆ ಕಲ್ಪಿಸಿರುವೆ.ಕೋಮು ಗಲಬೆಗೆ ಆಸ್ಪದನೀಡದೆ ಶಾಂತಿ ಸಾಮರಸ್ಯಕ್ಕೆ ಒತ್ತು ನೀಡಿರುವೆ ಎಂದು ಹೇಳಿದರು.
ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಮುಖಂಡರಾದ ಡಿ.ವಿ.ನಾಗಪ್ಪ,ಸೊಕ್ಜೆ ನಾಗರಾಜ್, ಶಶಿಧರ್, ಎಸ್.ಕೆ.ಮಂಜುನಾಥ್,ಭಿಮಾನಾಯಕ,ಸಿದ್ದಪ್ಪ,ಮಂಜಣ್ಣ,ಸೇರಿದಂತೆ ಉಪಸ್ಥಿತರಿದ್ದರು.