ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ. ನಿವಾಸದಲ್ಲಿ ಕರೆದಿದ್ದ ವೀರಶೈವ ಲಿಂಗಾಯತ ಮಹಾಸಭಾ ಮುಖಂಡರು ಗಳ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದವರ ಸಂಸ್ಥೆಯಲ್ಲಿ ಡಿ ಗ್ರೂಪ್ ನೌಕರನಾಗಿ ಸೇರ್ಪಡೆಗೊಂಡ ನಂತರ ಬಸವಾದಿ ಶರಣರ ತತ್ವ ಪಾಲಿಸಿ ಪ್ರೀತಿ ಧರ್ಮ ಸಂಸ್ಕಾರ ಮೈಗೂಡಿಸಿ ಕೊಂಡೆ.ಮಾತು ಕಲಿತೆ ಉತ್ತಮ ಭವಿಷ್ಯ ರೂಪಿಸಿಕೊಂಡೆ. ಇದೀಗ ಸ್ವಯಂಪ್ರೇರಿತ ವಾಗಿ ಮನೆಬಾಗಿಲಿಗೆ ಆಗಮಿಸಿ ಬೆಂಬಲವ್ಯಕ್ತಪಡಿಸುತ್ತಿರುವ ತಮಗೆ ಚಿರಋಣಿಯಾಗಿರುವೆ ಹಾಲಿ ಮಾಜಿ ಶಾಸಕರ ಇಬ್ಬರನ್ನೂ ಗೆಲ್ಲಿಸಿದ ಕ್ಷೇತ್ರದಲ್ಲಿ ಸೇವೆಗೈಯಲು ನನಗೂ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
“ಕ್ಷೇತ್ರದಲ್ಲಿ ಕೆಪಿ ಪಾಲಯ್ಯ ನನಗೆ ಶಕ್ತಿಯಾಗಿದ್ದು.ಪಕ್ಷದಲ್ಲಿ 30 ವರ್ಷ ಗಳ ಶ್ರಮಿಸಿ ಟಿಕೇಟ್ ಸಿಗದಿದ್ದರೂ ಪಕ್ಷ ನಿಷ್ಠೆ ಹೊಂದಿ ಪಕ್ಷದಲ್ಲಿ ರುವ ಇವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ ಜೋಡೆತ್ತಿ ನಂತೆ ಪಕ್ಷದಲ್ಲಿರುವೆವು ಎಂದು ತಿಳಿಸಿದರು.”
ಎರಡು ಬಾರಿ ಕಾಂಗ್ರೆಸ್ ಟಿಕೇಟ್ ನೀಡಿದ್ದರೂ ಪಕ್ಷಕ್ಕೆ ಮೋಸ ಮಾಡಿದೆ ಎಂಬ ಪಕ್ಷೇತರ ಅಭ್ಯರ್ಥಿಯ ಅನಗತ್ಯ ಗೊಂದಲದ ಹೇಳಿಕೆಗಳು ಸರಿಯಲ್ಲ 2011 ರಲ್ಲಿ ಉಪಚುನಾವಣೆಯಲ್ಲಿ ಅರಸೀಕೆರೆ ದೆವೇಂದ್ರಪ್ಪನವರಿoದ ಕಸಿದುಕೊಂಡ ಟಿಕೇಟ್ ಇದೀಗ ದೈವಾನುಗ್ರಹ ಪಕ್ಷದ ನಿರ್ಣಯದಂತೆ ಬಿ.ದೆವೇಂದ್ರಪ್ಪನಿಗೆ ವರದಾನವಾಗಿ ಲಭಿಸಿದೆ ಎಂದು ಸ್ಪಷ್ಟಪಡಿಸಿದರು.
ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಅಭಿವೃದ್ದಿಗೆ ಜನತೆಯೇ ಮುಂದೆ ನಿಲ್ಲಲಿ ನಾನು ನಿಮ್ಮ ಹಿಂದಿರುವೆ ಕೃಷಿ ಜಮೀನಿನಲ್ಲಿ ಬೆಳೆಗಳ ಬೇರು ಬದಲಾವಣೆಯಾದಂತೆ ರಾಜಕೀಯ ಕ್ಷೇತ್ರ ಕಾಲಕಾಲಕ್ಕೆ ಬದಲಾಗಿ ಹರಿಯುವ ನೀರಾಗಲಿ ಎಂದು ನಿದರ್ಶನ ನೀಡಿದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ,ಇತ್ತೀಚೆಗೆ ಪಟ್ಟಣ ದಲ್ಲಿ ನಡೆದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಚುನಾವಣೆ ಪ್ರಚಾರ ಸಭೆಯಲ್ಲಿ 25000 ಜನರು ಭಾಗವಹಿಸಿದ್ದು.ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸಾಕ್ಷಿಯಾಗಿದೆ.ಅಭ್ಯರ್ಥಿ ಬಿ.ದೆವೇಂದ್ರ ಪ್ಪ ಅವರು ವಾಲ್ಮೀಕಿ ಸಮಾಜದಲ್ಲಿ ಜನಿಸಿದ್ದರು ಬಸವಣ್ಣನವರ ತತ್ವ ಅಳವಡಿಸಿಕೊಂಡು ಎಲ್ಲಾ ವರ್ಗದವರ ವಿಶ್ವಾಸಗಳಿಸಿ ವ್ಯಕ್ತಿತ್ವ ಅವರದ್ದಾಗಿದೆ ಎಂದರು.ಎರಡು ಬಾರಿ ಟಿಕೇಟ್ ಪಡೆದು ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ಪಿ.ರಾಜೇಶ್ ಅವರು ಇದೀಗ ಪಕ್ಷ ತೊರೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವು ದು ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋದಂತೆ, ಇದೀಗ ಕೋಮು ವಾದಿ ಬಿಜೆಪಿ ಪಕ್ಷದ ವಿಜೃಂಭಣೆಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ಸಮಾಜದ ಯಡಿಯೂರಪ್ಪನವರನ್ನು ಮೂಲೆ ಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತ ನಾಡಿ ಪ್ರಭಲ ಶಕ್ತಿಯಾಗಿ ಒಂದು ಪಕ್ಷದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸು ತ್ತಿದ್ದ ವೀರಶೈವ ಲಿಂಗಾಯತ ಸಮಾಜದವರು ಇದೀಗ ಇಬ್ಬಾಗವಾ ಗಿರುವುದೇ ಕಾಂಗ್ರೇಸ್ ಪಕ್ಷದ ಗೆಲುವಿಗೆ ಸಾಧ್ಯವಾಗಲಿದೆ. ಜಿಲ್ಲೆ ಯಲ್ಲಿ ಲಿಂಗಾಯತ ಸಮಾಜದ ಶಾಮನೂರು ಶಿವಶಂಕರಪ್ಪ ನವರ ನಾಯಕತ್ವದಲ್ಲಿ ಕಾಂಗ್ರೇಸ್ ಪಕ್ಷ ಮುನ್ನಡೆಯುತ್ತಿದೆ. ಆಗಾ ದರೆ ಕಾಂಗ್ರೇಸ್ನಲ್ಲಿ ಲಿಂಗಾಯತರಿಗೆ ಸ್ಥಾನಮಾನವಿಲ್ಲವೇ ಎಂದು ಪ್ರಶ್ನಿಸಿದರು
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ವೀರಶೈವ ಸಮಾಜದವರು ಹಸಿದವರಿಗೆ ಅನ್ನದಾಸೋಹ ನೀಡಿದ ವರು, ಈ ನಿಟ್ಟಿನಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಹಸಿವಿದ್ದು, ತಾವು ದಾಸೋಹ ಮಾಡಬೇಕು. ಕ್ಷೇತ್ರದಲ್ಲಿ ಲಿಂಗಾಯತ ಸಮಾಜ ಉಳಿದ ಎಲ್ಲಾ ಸಮುದಾಯಗಳ ಜೊತೆ ಸಹೋದರತೆ, ಸಾಮರಸ್ಯ ತೆಯಿಂದ ಜೀವನ ಸಾಗಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ರಾಜ್ ಪಟೇಲ್ ಮಾತ ನಾಡಿ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದವರಿಗೆ ಸಚಿವ ಸ್ಥಾನ ಕಲ್ಪಿಸಿದ ಪಕ್ಷ ಕಾಂಗ್ರೇಸ್ ಆಗಿದೆ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ನಾವು ಕಾಂಗ್ರೇಸ್ ಅಭ್ಯರ್ಥಿಗೆ ಒಮ್ಮತದಿಂದ ಬೆಂಬಲಿಸೋಣ, ಲಿಂಗಾಯತ ಸಮಾಜದವರು ಕೃಷಿಯನ್ನೇ ನಂಬಿ ಜೀವನ ಸಾಗಿಸು ತ್ತಿದ್ದು, ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದ ವರಿಗೆ ಅನುಕೂಲವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಮಾ ಜಕ್ಕೆ ಪರಿಚಯಿಸಿದ ಬಸವಣ್ಣನವರ ಅನುಯಾಯಿಗಳು ನಾವಾಗಿ ದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳ ವೀರಶೈವ ಲಿಂಗಾ ಯತ ಸಮಾಜದ 100 ಅಧಿಕ ಕಾರ್ಯಕರ್ತರು ಬಿಜೆಪಿ ತೊರೆದು ಕೈ ಹಿಡಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡ ರಾದ ಅಮರಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಧು, ಕರಿ ಬಸವನಗೌಡ, ಸುರೇಶ್ಗೌಡ, ಮಾದಿಹಳ್ಳಿ ಕೆ.ಚಂದ್ರಪ್ಪ, ವೀರಣ್ಣ ಗೌಡ, ಬೂದಿಹಾಳ್ ಸಿದ್ದೇಶ್, ರಮೇಶ್ರೆಡ್ಡಿ, ಗೋಡೆ ಪ್ರಕಾಶ್, ಸಾಹುಕರ್ ಮಲ್ಲಿಕಾರ್ಜುನ್, ಸೊಕ್ಕೆ ರಾಜಣ್ಣ, ಚನ್ನಪ್ಪ, ಉಮಾ ದೇವಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು